ಕಾಂಗ್ರೆಸ್​​ನತ್ತ ಮುಖ ಮಾಡಿದ್ರಾ ಜೆಡಿಎಸ್ ಶಾಸಕ? ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಭೇಟಿ

ಕಾಂಗ್ರೆಸ್​​ನತ್ತ ಮುಖ ಮಾಡಿದ್ರಾ ಜೆಡಿಎಸ್ ಶಾಸಕ? ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಭೇಟಿ

TV9 Web
| Updated By: shivaprasad.hs

Updated on: Jan 28, 2022 | 7:54 AM

ಇತ್ತೀಚೆಗಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದರು. ಈ ಹೇಳಿಕೆಯ ಬೆನ್ನಲ್ಲೇ ನಿನ್ನೆ ತಡರಾತ್ರಿ ಜೆಡಿಎಸ್ ಶಾಸಕರೋರ್ವರು ಸಿದ್ದರಾಮಯ್ಯನವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಬೆಂಗಳೂರು: ಮತ್ತೊಬ್ಬ ಜೆಡಿಎಸ್‌ ಶಾಸಕ ಈಗ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರಾ? ಇದಕ್ಕೆ ಪುಷ್ಟಿ ಕೊಡುತ್ತಿದೆ ತಡರಾತ್ರಿ ಸಿದ್ದರಾಮಯ್ಯ ಮನೆಯಲ್ಲಿ ಕಾಣಸಿಕೊಂಡ ಜೆಡಿಎಸ್‌ನ ಶಾಸಕರೋರ್ವರ ನಡೆ! ಹೌದು. ಜೆಡಿಎಸ್ ಶಾಸಕರಾಗಿರುವ ಸಿ.ಎಸ್.ಪುಟ್ಟರಾಜು (CS Puttaraju) ನಿನ್ನೆ ತಡರಾತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ (Siddaramaiah) ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯ ಜೆಡಿಎಸ್ ಶಾಸಕರಾಗಿರುವ ಪುಟ್ಟರಾಜು, ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿಯವರೊಂದಿಗೆ ಪುಟ್ಟಸ್ವಾಮಿಯವರು ಅಷ್ಟಕ್ಕಷ್ಟೇ ಎಂಬಂತಿದ್ದಾರೆ. ಇದೀಗ ಸಿದ್ದರಾಮಯ್ಯ ಮನೆಗೆ ಶಾಸಕ ಜಮೀರ್ ಅಹ್ಮದ್ ಜತೆ ಪುಟ್ಟರಾಜು ಭೇಟಿ ನೀಡಿದ್ದಾರೆ.

ಕ್ಷೇತ್ರದ ದೇವಾಲಯ ಉದ್ಘಾಟನೆಗೆ ಆಹ್ವಾನ ನೀಡುವ ನೆಪದಲ್ಲಿ ಪುಟ್ಟರಾಜು ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೂ ಪುಟ್ಟರಾಜು ಅವರಿಗೆ ಕೈ ನಾಯಕರಿಂದ ಔತಣಕೂಟಕ್ಕೆ ಕರೆಬಂದಿತ್ತು. ಇತ್ತೀಚೆಗೆ ಸಿದ್ದರಾಮಯ್ಯನವರು ಬಿಜೆಪಿ ಹಾಗೂ ಜೆಡಿಎಸ್​​ನ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದರು. ಇದೀಗ ಪುಟ್ಟರಾಜು ಮತ್ತು ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ:

ಸಿಎಂ ಇಬ್ರಾಹಿಂ ಜೆಡಿಎಸ್​​ಗೆ ಬರುವುದಾದರೆ ಅವರಿಗೆ ಸ್ವಾಗತವಿದೆ: ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ಹೇಳಿಕೆ

ಕಾಂಗ್ರೆಸ್‌ಗೂ ನಮಗೂ ಇನ್ನು ಮುಗಿದ ಅಧ್ಯಾಯ; ರಾಜೀನಾಮೆ ನೀಡಲು ಎಮ್ಎಲ್​ಸಿ ಸಿಎಂ ಇಬ್ರಾಹಿಂ ನಿರ್ಧಾರ