Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯಗೆ ರಾಜಕೀಯ ಮರುಹುಟ್ಟು ನೀಡಿದ್ದಕ್ಕೆ ಅವರಿಂದ ಒಳ್ಳೆಯ ಉಡುಗೊರೆ ಸಿಕ್ಕಿದೆ! ಸಿ ಎಮ್ ಇಬ್ರಾಹಿಂ

ಸಿದ್ದರಾಮಯ್ಯಗೆ ರಾಜಕೀಯ ಮರುಹುಟ್ಟು ನೀಡಿದ್ದಕ್ಕೆ ಅವರಿಂದ ಒಳ್ಳೆಯ ಉಡುಗೊರೆ ಸಿಕ್ಕಿದೆ! ಸಿ ಎಮ್ ಇಬ್ರಾಹಿಂ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 27, 2022 | 8:01 PM

ಇಬ್ರಾಹಿಂ ಅವರು ಶ್ಲೋಕ ಮತ್ತು ವಚನಗಳನ್ನು ಧಾರಾಳವಾಗಿ ಬಳಸುವ ವಿಷಯ ಕನ್ನಡಿಗರಿಗೆ ಗೊತ್ತು. ಇಲ್ಲೂ ಅವರು ಕಾಲಾಯ ತಸ್ಮೈ ನಮಃ ಮತ್ತು ಬೇಡುವವರಿಲ್ಲದೆ ಬಡವನಾದೆನಯ್ಯ ಎಂದು ಹೇಳಿ ತಮಗಾಗಿರುವ ನಿರಾಸೆಯನ್ನು ಸೂಚ್ಯವಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ ಎಮ್ ಇಬ್ರಾಹಿಂ (CM Ibrahim) ಹತಾಷರಾಗಿದ್ದಾರೆ, ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಇಬ್ರಾಹಿಂ ತಮ್ಮೆಲ್ಲ ಬೇಸರವನ್ನು ಅವರ ಆಪ್ತಮಿತ್ರ ಸಿದ್ದರಾಮಯ್ಯನವರ (Siddaramaiah) ಮೇಲೆ ವ್ಯಕ್ತಪಡಿಸಿದರು. ಅವರಿಗೆ ರಾಜಕೀಯವಾಗಿ ಜೀವಂತ ಇಟ್ಟಿದ್ದಕ್ಕೆ ಸರಿಯಾದ ಉಡುಗೊರೆಯನ್ನೇ (return gift) ಕಾಂಗ್ರೆಸ್ನಿಂದ ಕೊಡಿಸಿದ್ದಾರೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರ ಕಾಂಡಗಳನ್ನು ಕಂತುಗಳಲ್ಲಿ ನೀಡುತ್ತಾ ಹೋಗುವುದಾಗಿ ಹೇಳಿದ ಅವರು ಕಾಂಗ್ರೆಸ್ ತೊರೆಯುವ ನಿರ್ಧಾರ ಪ್ರಕಟಿಸಿದ ಬಳಿಕ ಸಾವಿರಾರು ಕರೆಗಳು ಬರುತ್ತಿವೆ, ಎಲ್ಲರಿಗೂ ಉತ್ತರಿಸುತ್ತಾ ದಣಿದಿದ್ದೇನೆ ಎಂದರು. ಅವರಿಗೆಲ್ಲ ತಾನು ಹೇಳಬಯಸುವ ವಿಷಯವೇನೆಂದರೆ, ಆದಷ್ಟು ಬೇಗ ತಮ್ಮ ಮುಂದಿನ ನಡೆ ತಿಳಿಸಲಾಗುವುದು. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಉತ್ತರ ಕೊಡಬೇಕಾಗಿದೆ ಎಂದು ಇಬ್ರಾಹಿಂ ಹೇಳಿದರು.

ಇಬ್ರಾಹಿಂ ಅವರು ಶ್ಲೋಕ ಮತ್ತು ವಚನಗಳನ್ನು ಧಾರಾಳವಾಗಿ ಬಳಸುವ ವಿಷಯ ಕನ್ನಡಿಗರಿಗೆ ಗೊತ್ತು. ಇಲ್ಲೂ ಅವರು ಕಾಲಾಯ ತಸ್ಮೈ ನಮಃ ಮತ್ತು ಬೇಡುವವರಿಲ್ಲದೆ ಬಡವನಾದೆನಯ್ಯ ಎಂದು ಹೇಳಿ ತಮಗಾಗಿರುವ ನಿರಾಸೆಯನ್ನು ಸೂಚ್ಯವಾಗಿ ಹೇಳಿದರು.

2018 ರ ವಿಧಾನ ಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಲಿರುವುದು ಖಚಿತಪಟ್ಟಾಗ ತಾನೇ ಅವರನ್ನು ಬಾದಾಮಿಗೆ ಕರೆದೊಯ್ದು ನಾಮಪತ್ರ ಸಲ್ಲಿಸುವಂತೆ ಮಾಡಿದ್ದು, ಇದಕ್ಕೆ ಹಿರಿಯ ಕಾಂಗ್ರೆಸ್ ನಾಯಕರಾದ ಎಸ್ ಆರ್ ಪಾಟೀಲ, ಬಿಬಿ ಚಿಮ್ಮನಕಟ್ಟಿ ಮತ್ತು ಆರ್ ಬಿ ತಿಮ್ಮಾಪುರ ಸಾಕ್ಷಿಯಾಗಿದ್ದಾರೆ ಎಂದು ಹೇಳಿದ ಇಬ್ರಾಹಿಂ ಆಗಿನ ಒಂದು ಫೋಟೋವನ್ನು ಸಹ ಮಾಧ್ಯಮದವರಿಗೆ ತೋರಿಸಿದರು. ತಾನು ಮಾಡಿದ ಉಪಕಾರಕ್ಕೆ ಸರಿಯಾದ ಪ್ರತ್ಯುಪಕಾರ ಮಾಡಿದ್ದಾರೆ ಎಂದು ಅವರು ವ್ಯಂಗ್ಯವಾಗಿ ಹೇಳಿದರು.

ಜೋಳಿಗೆ ಹಾಕಿಕೊಂಡು ಜನರ ಮುಂದೆ ಹೋಗುವುನೆಂದ ವಿಧಾನ ಪರಿಷತ್ ಸದಸ್ಯರು, ಜನರ ನೀಡುವ ತೀರ್ಪಿಗೆ ತಲೆಬಾಗುವುದಾಗಿ ಹೇಳಿದರು. ಇನ್ನೆರಡು ದಿನಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಕೆಲ ಬದಲಾವಣೆಗಳು ಆಗಲಿವೆ, ಹಿರಿಯ ಸಚಿವರು ಯುವ ನಾಯಕರಿಗೆ ಸ್ಥಾನ ಬಿಟ್ಟುಕೊಡಲಿದ್ದಾರೆ, ತಾನು ಇದುವರೆಗೆ ನುಡಿದ ರಾಜಕೀಯ ಭವಿಷ್ಯಗಳೆಲ್ಲ ನಿಜವಾಗಿವೆ ಎಂದರು.

ಇದನ್ನೂ ಓದಿ:   ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿ; ಆತನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ