ನನ್ನ ಹಣೆಬರಹದಲ್ಲಿ ಮುಖ್ಯಮಂತ್ರಿ ಆಗುವ ಯೋಗ ಇದ್ದರೆ ಆಗೇ ಆಗ್ತೀನಿ: ಬಸನಗೌಡ ಪಾಟೀಲ ಯತ್ನಾಳ್
ಬಿಜೆಪಿ ಪುನಃ ಸರ್ಕಾರ ರಚಿಸಬೇಕಾದರೆ, ಜೆಡಿ(ಎಸ್) ನೆರವು ಅನಿವಾರ್ಯವೇ ಎಂದು ಕೇಳಿದಾಗ, ಕುಮಾರಸ್ವಾಮಿಯವರ ಜಗಳ ಡಿಕೆ ಶಿವಕುಮಾರ ಜೊತೆ ಇದೆ, ನಮ್ಮೊಂದಿಗಿಲ್ಲ. ಆದಾಗ್ಯೂ, ಬಿಜೆಪಿಗೆ ಪೂರ್ಣ ಬಹುಮತ ಸಿಗುತ್ತದೆ. ಯಾರ ನೆರವೂ ಬೇಕಾಗುವುದಿಲ್ಲ ಎಂದು ಯತ್ನಾಳ್ ಹೇಳಿದರು.
ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basangoda Patil Yatnal) ಆವರು ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಿಗೆ ಸಿಕ್ಕರು. ಸ್ವಾಭಾವಿಕವಾಗಿಯೇ, ಕಾಂಗ್ರೆಸ್ ಪಕ್ಷದಿಂದ ಹೊರಬರುವ ನಿರ್ಧಾರ ಮಾಡಿಡರುವ ಸಿ ಎಂ ಇಬ್ರಾಹಿಂ (CM Ibarahim) ಅವರ ಕುರಿತೇ ಅವರಿಗೆ ಕೇಳಿದ ಮೊದಲ ಪ್ರಶ್ನೆಯಾಗಿತ್ತು. ಅದಕ್ಕೆ ಹಾಸ್ಯದ ಧಾಟಿಯಲ್ಲಿ ಉತ್ತರಿಸಿದ ಯತ್ನಾಳ್, ಇಬ್ರಾಹಿಂ ಮತ್ತು ಕಾಂಗ್ರೆಸ್ ನಡುವೆ ಏನು ನಡೆಯುತ್ತಿದೆ ಅಂತ ಗೊತ್ತಿಲ್ಲ. ಇಬ್ರಾಹಿಂ ಅವರು ಯಾವಾಗ ದೇವೇಗೌಡರಿಗೆ (Devegowda) ಅಪ್ಪ ಅನ್ನುತ್ತಾರೋ, ಯಾವಾಗ ಸಿದ್ದರಾಮಯ್ಯನವರಿಗೆ ಅಣ್ಣಾ ಅನ್ನುತ್ತಾರೋ ಯಾರಿಗೂ ಗೊತ್ತಿಲ್ಲ, ರಾಜಕೀಯದಲ್ಲಿ ಅಪ್ಪ, ಅಣ್ಣ ಅನ್ನುವವರು ಬಹಳ ಡೇಂಜರ್ ಎಂದರು. ಮುಂಬರುವ ವಿಧಾನ ಸಭಾ ಚುನಾವಣೆಯ ಬಳಿಕ, ಜೆಡಿ(ಎಸ್) ಪಕ್ಷವನ್ನು ಬಿಟ್ಟು ಯಾವ ಪಕ್ಷವೂ ಸರ್ಕಾರ ರಚಿಸುವುದು ಸಾಧ್ಯವಿಲ್ಲ ಅಂತ ಕುಮಾರಸ್ವಾಮಿಯವರು ಹೇಳಿದ್ದಾರೆ ಅಂತ ಕೇಳಿದಾಗ, ಅವರಿಗೆ ಅನಿಸಿದ್ದು ಹೇಳಲು ಸ್ವತಂತ್ರರು ಅಂತ ಹೇಳಿದ ಅವರು, ‘ಬಿಜೆಪಿಗೆ ಬಹುಮತ ಸಿಕ್ಕರೆ ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ನಾನೂ ಹೇಳ್ತೀನಿ,’ ಎಂದು ನಗಾಡಿದರು.
ಬಿಜೆಪಿ ಪುನಃ ಸರ್ಕಾರ ರಚಿಸಬೇಕಾದರೆ, ಜೆಡಿ(ಎಸ್) ನೆರವು ಅನಿವಾರ್ಯವೇ ಎಂದು ಕೇಳಿದಾಗ, ಕುಮಾರಸ್ವಾಮಿಯವರ ಜಗಳ ಡಿಕೆ ಶಿವಕುಮಾರ ಜೊತೆ ಇದೆ, ನಮ್ಮೊಂದಿಗಿಲ್ಲ. ಆದಾಗ್ಯೂ, ಬಿಜೆಪಿಗೆ ಪೂರ್ಣ ಬಹುಮತ ಸಿಗುತ್ತದೆ. ಯಾರ ನೆರವೂ ಬೇಕಾಗುವುದಿಲ್ಲ ಎಂದು ಯತ್ನಾಳ್ ಹೇಳಿದರು.
ಬಿಜೆಪಿ ಮತ್ತೇ ಅಧಿಕಾರಕ್ಕೆ ಬಂದರೆ, ಈ ಬಾರಿ ಯತ್ನಾಳ್ ಮುಖ್ಯಮಂತ್ರಿ ಅಗುತ್ತಾರೆಯೇ ಎಂದು ಕೇಳಿದಾಗ, ‘ಹಣೆಬರಹದಲ್ಲಿ ಸಿ ಎಮ್ ಆಗುವ ಯೋಗ ಇದ್ದರೆ ಆಗೇ ಆಗ್ತೀನಿ. ಇಲ್ಲಾಂದ್ರೆ ಇಲ್ಲ, ಆಗದೇ ಹೋದ ಪಕ್ಷದಲ್ಲಿ ಪುನಃ ನಿಮ್ಮ ಜೊತೆ ಹೀಗೆ ರಸ್ತೆಯಲ್ಲಿ ಮಾತಾಡ್ತಾ ನಿಲ್ತೀನಿ,’ ಅಂತ ನಗುತ್ತಾ ಹೇಳಿದರು.
ಇದನ್ನೂ ಓದಿ: Mouni Roy: ಸದ್ದಿಲ್ಲದೇ ಆರಂಭವಾಗಿದೆ ಕೆಜಿಎಫ್ ಬೆಡಗಿಯ ವಿವಾಹ ಸಮಾರಂಭ; ಇಲ್ಲಿದೆ ಫೋಟೋ ಹಾಗೂ ವಿಡಿಯೋ