ಮಾ.3ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಕೊವಿಡ್ ನಿಯಮ ಪಾಲನೆ ಕಡ್ಡಾಯ

ಮಾ.3ರಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

TV9kannada Web Team

| Edited By: Rajesh Duggumane

Jan 27, 2022 | 9:06 PM

ಕೊವಿಡ್​ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ, ದೇಶದಲ್ಲಿ ಅನಿಶ್ಚಿತತೆ ಉಂಟಾಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಆದರೆ, ಸಾವಿನ ಪ್ರಮಾಣ ಕಡಿಮೆ ಇರುವುದರಿಂದ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ಕೊವಿಡ್​ ಸಂಖ್ಯೆ ಮತ್ತಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ, ನಿಧಾನವಾಗಿ ಸಿನಿಮಾ ಕೆಲಸಗಳು ಮತ್ತೆ ಆರಂಭವಾಗುತ್ತಿದೆ. ಈಗ ಮಾ.3ರಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (Bengaluru International Film Festival) ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai
) ಜತೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುನಿಲ್ ಪುರಾಣಿಕ್ ಸಭೆ ನಡೆಸಿದರು. ಆ ಬಳಿಕ ಮಾತನಾಡಿದ ಅವರು, ‘ಸಿಎಂ ಜತೆ ಚಲನಚಿತ್ರೋತ್ಸವದ ಕುರಿತು ಚರ್ಚೆ ನಡೆಸಲಾಗಿದೆ. ಚಲನಚಿತ್ರೋತ್ಸವ ನಡೆಸಲು ಸಿಎಂ ಆದೇಶವನ್ನು ಕೊಟ್ಟಿದ್ದಾರೆ. ಕೊವಿಡ್ ನಿಯಮ ಪಾಲಿಸಿ ಚಲನಚಿತ್ರೋತ್ಸವ ನಡೆಸುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ:  ಅಂದು ಪುನೀತ್​ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ

ಮದುವೆ ಆಗ್ತೀನಿ ಎಂದಾಗ ದಾನಿಶ್​ಗೆ ಪುನೀತ್​ ಕಡೆಯಿಂದ ಸಿಕ್ಕಿತ್ತು ವಿಶೇಷ ಟಿಪ್ಸ್

Follow us on

Click on your DTH Provider to Add TV9 Kannada