ಕಾಂಗ್ರೆಸ್‌ಗೂ ನಮಗೂ ಇನ್ನು ಮುಗಿದ ಅಧ್ಯಾಯ; ರಾಜೀನಾಮೆ ನೀಡಲು ಎಮ್ಎಲ್​ಸಿ ಸಿಎಂ ಇಬ್ರಾಹಿಂ ನಿರ್ಧಾರ

ಕಾಂಗ್ರೆಸ್‌ಗೂ ನಮಗೂ ಇನ್ನು ಮುಗಿದ ಅಧ್ಯಾಯ; ರಾಜೀನಾಮೆ ನೀಡಲು ಎಮ್ಎಲ್​ಸಿ ಸಿಎಂ ಇಬ್ರಾಹಿಂ ನಿರ್ಧಾರ
ಕಾಂಗ್ರೆಸ್ ಎಲ್​ಎಲ್​ಸಿ ಸಿಎಂ ಇಬ್ರಾಹಿಂ

ಸಿದ್ದರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟೆವು. ಅದಕ್ಕೀಗ ಸಿದ್ದರಾಮಯ್ಯ ಹೊಸ ಉಡುಗೊರೆ ನೀಡಿದ್ದಾರೆ. ಅವರು ಕೊಟ್ಟ ಉಡುಗೊರೆ ಖುಷಿಯಿಂದ ಸ್ವೀಕರಿಸುವೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲ್ತಿದ್ರು.

TV9kannada Web Team

| Edited By: sandhya thejappa

Jan 27, 2022 | 12:38 PM


ಬೆಂಗಳೂರು: ಪರಿಷತ್ ವಿಪಕ್ಷ ನಾಯಕರಾಗಿ ಬಿಕೆ ಹರಿಪ್ರಸಾದ್​ರವರನ್ನು (BK Hariprasad) ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್​ ಎಂಎಲ್​ಸಿ ಸಿಎಂ ಇಬ್ರಾಹಿಂ (CM Ibrahim) ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯಗಾಗಿ ದೇವೇಗೌಡರನ್ನು ಬಿಟ್ಟಿದ್ದೆವು. ಜೈಲಿನಲ್ಲಿದ್ದು ಕಟ್ಟಿದ್ದ ಪಕ್ಷ ಜೆಡಿಎಸ್ ಬಿಟ್ಟಿದ್ದೆವು. ಒಂದೇ ಬಾರಿಗೆ ಎಲ್ಲ ವಿಚಾರಗಳನ್ನು ಹೇಳುವುದಿಲ್ಲ. ಕಂತು ಕಂತಾಗಿ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆ.  ಸಿದ್ದರಾಮಯ್ಯಗೆ (siddaramaiah) ಹೊಸ ರಾಜಕೀಯ ಜೀವನ ಕೊಟ್ಟೆವು. ಅದಕ್ಕೀಗ ಸಿದ್ದರಾಮಯ್ಯ ಹೊಸ ಉಡುಗೊರೆ ನೀಡಿದ್ದಾರೆ. ಅವರು ಕೊಟ್ಟ ಉಡುಗೊರೆ ಖುಷಿಯಿಂದ ಸ್ವೀಕರಿಸುವೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲ್ತಿದ್ರು. ಇದು ತಿಳಿದು ಬಾದಾಮಿಯಲ್ಲಿ ನಾಮಪತ್ರ ಹಾಕಿಸಿದ್ದೆ. ಅಲ್ಲಿನ ಎಲ್ಲ ನಾಯಕರನ್ನು ಒಪ್ಪಿಸಿ ನಾಮಪತ್ರ ಹಾಕಿಸಿದ್ದೆ. ಬಾದಾಮಿಯಲ್ಲಿ ಅವರು ಗೆದ್ದು ಶಾಸಕರು ಕೂಡ ಆದರು. ಅವರಿಗೆ ನಾನು ಹೊಸ ರಾಜಕೀಯ ಜೀವನ ಕೊಟ್ಟೆ. ಆದರೆ ಅವರು ನಮಗೆ ಇಂದು ಹೊಸ ಗಿಫ್ಟ್ ಕೊಟ್ಟಿದ್ದಾರೆ ಅಂತ ಎಮ್​ಎಲ್​ಸಿ ಸಿಎಂ ಇಬ್ರಾಂಹಿಂ ಹೇಳಿದ್ದಾರೆ.

ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ ಸಿಎಂ ಇಬ್ರಾಹಿಂ, ದೇವೇಗೌಡರನ್ನು ಕೇಳಿ ಮುಂದೆ ತೀರ್ಮಾನ ಮಾಡುತ್ತೇನೆ. ನನಗೆ ಸ್ಥಾನ ತಪ್ಪಿಸಿದ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು. ಡಿಕೆ ಶಿವಕುಮಾರ್‌ಗೂ ನಮಗೂ ಹೊಂದಾಣಿಕೆಯಾಗಲ್ಲ. ಸಿದ್ದರಾಮಯ್ಯಗೂ ನನಗೆ ಚೆನ್ನಾಗಿತ್ತು. ದೆಹಲಿಯಿಂದ ನನಗೆ ಹಲವು ಕರೆಗಳು ಬಂದಿವೆ. ಎಲ್ಲ ಮಾಹಿತಿ ನನ್ನ ಬಳಿ ಇಟ್ಟುಕೊಂಡಿದ್ದೇನೆ. ಚುನಾವಣಾ ಪ್ರಚಾರಕ್ಕೆ ಯುಪಿಗೆ ಬರುವಂತೆ ಕರೆಯುತ್ತಿದ್ದಾರೆ. ಆದರೆ ನಾವೇನು ಅಷ್ಟು ದೊಡ್ಡ ನಾಯಕರೇನು ಅಲ್ಲ. ನಮ್ಮಿಂದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಾದರೆ ನಿರ್ಧರಿಸುವೆ. ರಾಜಕೀಯ ವಿದ್ಯಮಾನ ನೋಡಿಕೊಂಡು ತೀರ್ಮಾನಿಸುವೆ. ಎಐಸಿಸಿ ನನಗೆ ಸಂಕ್ರಾಂತಿಗೆ ಶುಭಾಶಯವನ್ನು ನೀಡಿದೆ. ಎಐಸಿಸಿ ಗಿಫ್ಟ್ ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಮಾಧ್ಯಮ, ನ್ಯಾಯಾಂಗದಲ್ಲಿ ಮಾತ್ರ ವಿಶ್ವಾಸ ಉಳಿದಿದೆ ಎಂದು ಮಾತನಾಡಿದ ಇಬ್ರಾಹಿಂ, ನನಗೆ ಸ್ವಲ್ಪ ಸಾಲ ಇದೆ ಅದನ್ನು ತೀರಿಸಬೇಕಾಗಿದೆ. ಸಾಲ ತೀರಿದ್ದರೆ ಮೊದಲೇ ತೀರ್ಮಾನ ಮಾಡುತ್ತಿದ್ದೆ. ಸಾಲ ತೀರಿಸಿ 8-10 ದಿನದಲ್ಲಿ ತೀರ್ಮಾನ ಮಾಡುತ್ತೇನೆ. ಹೆಚ್ ಡಿ ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ್ದಾರೆ. ಇಂದು ಬೆಳಗ್ಗೆ ಕರೆ ಮಾಡಿ ಮಾತನಾಡಿದ್ದಾರೆ. ಕಾಂಗ್ರೆಸ್‌ನ ಕೆಲವು ನಾಯಕರು ಕರೆ ಮಾಡಿ ಮಾತಾಡಿದ್ದಾರೆ. ಅವರು ಹೆಸರು ಹೇಳಿದರೆ ಅವರಿಗೂ ಸಮಸ್ಯೆಯಾಗುತ್ತದೆ. ಕಾಂಗ್ರೆಸ್‌ನವರಿಗೂ ನಮಗೆ ವಿಶ್ವಾಸವಿರುವುದು ನಿಜ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 120ರಿಂದ 80ಕ್ಕೆ ಬಂದಿದೆ. 80ರಿಂದ ಮತ್ತೆ ಎಲ್ಲಿಗೆ ಬರುತ್ತೆಂದು ನೀವು ನೋಡಿಕೊಳ್ಳಿ ಎಂದರು.

ನಿರ್ಧಾರ ತೆಗೆದುಕೊಳ್ಳಲು ನಾನು ಸ್ವತಂತ್ರನಾಗಿದ್ದೇನೆ:
ಸೋನಿಯಾ ನಮ್ಮ ಮೇಲಿದ್ದ ಭಾರ ಕಡಿಮೆ ಮಾಡಿದ್ದಾರೆ. ಈಗ ನಿರ್ಧಾರ ತೆಗೆದುಕೊಳ್ಳಲು ನಾವು ಸ್ವತಂತ್ರನಾಗಿದ್ದೇನೆ. ಸಿದ್ದರಾಮಯ್ಯ ಅವರಿಂದಲೇ ನಾನು ಕಾಂಗ್ರೆಸ್‌ಗೆ ಬಂದೆ. ಸಿದ್ದರಾಮಯ್ಯ ಸಲುವಾಗೆ ದೇವೇಗೌಡರನ್ನು ಬಿಟ್ಟು ಬಂದೆ. 1996ರಲ್ಲಿ ರಾಜ್ಯಸಭೆ ಟಿಕೆಟ್ ಘೋಷಿಸಿ ಕ್ಯಾನ್ಸಲ್ ಮಾಡಿದ್ರು. ಆಗ ಕಾಂಗ್ರೆಸ್ ಪಕ್ಷ ಬಿಟ್ಟೆ, ಆಗ ಕಾಂಗ್ರೆಸ್ ಎಲ್ಲಿ ಹೋಯ್ತು? 20 ವರ್ಷದ ಬಳಿಕ ಕಾಂಗ್ರೆಸ್ ಅದೇ ರೀತಿ ಮಾಡಿದೆ ಎಂದು ಬೆಂಗಳೂರಿನಲ್ಲಿ ಎಂಎಲ್‌ಸಿ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

2023ರಲ್ಲಿ ಮೈತ್ರಿ ಸರ್ಕಾರ
ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ ಸಿಎಂ ಇಬ್ರಾಹಿಂ ‘2023ರಲ್ಲಿ ಮೈತ್ರಿ ಸರ್ಕಾರವೇ ರಚನೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್‌ನಿಂದ ಯಾಱರು ಬರುತ್ತಾರೋ ಈಗ ನೋಡಿ. ಕಾಂಗ್ರೆಸ್‌ಗೆ ಹಲವರು ಹೋಗುವ ವಾತಾವರಣ ಇತ್ತು. ಆದರೆ ಈಗ ಪರಿಸ್ಥಿತಿ ತಿರುಗಿಬಿದ್ದಿದೆ. ಕಾಂಗ್ರೆಸ್ ಮತದಾರರು ಕೇವಲ ಸಾಬರು. ಸಾಬರು ಹೋದ ಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನು. ಮುಂದಿನ ಚುನಾವಣೆಯಲ್ಲಿ ಎಲ್ಲಾ ವಿಚಾರ ತಿಳಿಯುತ್ತೆ. ಮಾನೆ ಕೆಲಸ ಮಾಡಿದ್ದಕ್ಕೆ ಹಾನಗಲ್‌ನಲ್ಲಿ ಗೆದ್ದಿದ್ದಾರೆ. ಶೇ.50ರಷ್ಟು ಬಿಜೆಪಿ ಸಹಾಯ ಮಾಡಿದ್ದಕ್ಕೆ ಗೆದ್ದಿದ್ದಾರೆ. 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಭ್ರಮೆಯಲ್ಲೇ ಇರಲಿ, ಕಾಂಗ್ರೆಸ್ ಎಚ್ಚೆತ್ತುಕೊಳ್ಳೋದು ಬೇಡ ಎಂದರು.

ಸಂಪರ್ಕ ಮಾಡಲ್ಲ:
ಈಗ ಬಲಿಷ್ಠವಾದ ವಿಪಕ್ಷವಿದೆ ಎಂದು ಹೇಳುತ್ತಿದ್ದಾರೆ. ನಾವು ಬಲಿಷ್ಠವಾಗಿದ್ದಕ್ಕೆ ಬಿಲ್ ಮಂಡನೆಗೆ ಬಿಡಲಿಲ್ಲ. ಮತಾಂತರ ಬಿಲ್ ಮಂಡನೆಗೆ ಅವಕಾಶವನ್ನು ನೀಡಿಲ್ಲ. ಆದರೆ ವಿಧಾನಸಭೆಯಲ್ಲಿ ಬಲಿಷ್ಠವಾಗಿ ವಿರೋಧಿಸಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೊಡ್ಡವರು. ನಾನು ಯಾರನ್ನೂ ಸಂಪರ್ಕ ಮಾಡಲು ಹೋಗಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾ ಮಹಿಳೆ ಬಂಧನ, ಹಿನ್ನೆಲೆ ಏನಿತ್ತು?

ಬಸವರಾಜ ಬೊಮ್ಮಾಯಿ ಸಿಎಂ ಅಧಿಕಾರ ಸ್ವೀಕರಿಸಿ ನಾಳೆಗೆ 6 ತಿಂಗಳು; ಆಡಳಿತದ ಪಕ್ಷಿನೋಟ ಪುಸ್ತಕ ಬಿಡುಗಡೆ

Follow us on

Related Stories

Most Read Stories

Click on your DTH Provider to Add TV9 Kannada