ಸೋಂಕು, ಡೆತ್ ರೇಟ್ ಹೆಚ್ಚಳ; ರೂಲ್ಸ್ ಸಡಿಲಿಕೆ ಮಾಡದಂತೆ ತಜ್ಞರ ಸಲಹೆ
SARI, ILI ಸೋಂಕಿತರು ಅತಿ ಹೆಚ್ಚು ಕೋವಿಡ್ ಗೆ ಬಲಿಯಾಗುತ್ತಿದ್ದಾರೆ. ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್ ಬಿಪಿ, ಲಂಗ್ ಡಿಸೀಸ್ ಗೆ ಒಳಗಾದ ಸೋಂಕಿತರು ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಬೆಂಗಳೂರು: ಮಹಾಮಾರಿ ಕೊರೊನಾ ಕೇಸ್ ಅಬ್ಬರದ ಮಧ್ಯೆ ಕೋವಿಡ್ ಡೆತ್ ಸಂಖ್ಯೆ ಹೆಚ್ಚಳದ ಆತಂಕ ಶುರುವಾಗಿದೆ. ದಿನೇ ದಿನೇ ಕೊರೊನಾದಿಂದ ಬಲಿಯಾಗುವವರ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಬುಧವಾರ (ಜ.26) 48,905 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 39 ಜನರು ಸಾವನ್ನಪ್ಪಿದ್ದಾರು. ಈಗ ಸದ್ಯದ ವರದಿಯಂತೆ ಕೊರೊನಾ ತನ್ನ ಅಟ್ಟಹಾಸ ಹೆಚ್ಚು ಮಾಡಿದೆ. ಹೀಗಾಗಿ ಸದ್ಯದ ರೂಲ್ಸ್ ಸಡಿಲಿಕೆ ಮಾಡದಂತೆ ತಜ್ಞರ ತಂಡ ಸಲಹೆ ನೀಡಲು ಮುಂದಾಗಿದೆ.
ಕಳೆದ 10 ದಿನಗಳಿಂದ ಕೋವಿಡ್ ಮರಣ ಸಂಖ್ಯೆ ಏರಿಕೆಯಾಗುತ್ತಿದೆ ಜ.16 ರಂದು 34047 ಕೇಸ್ ಹಾಗೂ 13 ಸಾವು ಸಂಭವಿಸಿತ್ತು. ಜ.17ರಂದು 27156 ಕೇಸ್, 14- ಸಾವು, ಜ.18 ರಂದು 41457ಕೇಸ್, 20-ಸಾವು, ಜ.19ರಂದು 40499 ಕೇಸ್, 21-ಸಾವು, ಜ.20ರಂದು 47754 ಕೇಸ್, 29 ಸಾವು, ಜ.21 ರಂದು 48049 ಕೇಸ್, 22 ಸಾವು. ಜ.22 ರಂದು 42470 ಕೇಸ್, 26 ಸಾವು. ಜ.23 ರಂದು 50210 ಕೇಸ್, 19 ಸಾವು. ಜ.24 ರಂದು 46426 ಕೇಸ್, 32 ಸಾವು. ಜ.25 ರಂದು 41400 ಕೇಸ್, 52 ಸಾವು. ಜ.26 ರಂದು 48905 ಕೇಸ್, 39 ಸಾವು ಸಂಭವಿಸಿವೆ.
SARI, ILI ನಿಂದ ಬಳಲುತ್ತಿರುವ ಸೋಂಕಿತರ ಜೀವಕ್ಕೆ ಅಪಾಯ ಇನ್ನು ಮತ್ತೊಂದು ಕಡೆ SARI, ILI ಸೋಂಕಿತರು ಅತಿ ಹೆಚ್ಚು ಕೋವಿಡ್ ಗೆ ಬಲಿಯಾಗುತ್ತಿದ್ದಾರೆ. ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್ ಬಿಪಿ, ಲಂಗ್ ಡಿಸೀಸ್ ಗೆ ಒಳಗಾದ ಸೋಂಕಿತರು ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇರುವ ಸೋಂಕಿತರಿಗೆ ಹೆಚ್ಚು ಅಪಾಯ. ಹೀಗಾಗಿ ಯಾವುದೇ ಕಾರಣಕ್ಕೂ ಮುಂದಿನ ಎರಡು ವಾರಗಳ ಕಾಲ ಕಠಿಣ ನಿಯಮಗಳನ್ನು ಸಡಿಲಗೊಳಿಸದಿರಲು ಟಾಸ್ಕ್ ಫೋರ್ಸ್ ಟೀಂ ನಿರ್ಧಾರ ಮಾಡಿದೆ. ಪರಿಸ್ಥಿತಿ ಕಾದು ನೋಡುವ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆದಿದೆ. ಸದ್ಯದ ಮಟ್ಟಿಗೆ ರಿಸ್ಟ್ರಿಕ್ಷನ್ ಮುಂದುವರೆಸಲು ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,86,384 ಕೊರೊನಾ ಪ್ರಕರಣ ಪತ್ತೆ, 573 ಜನರು ಸೋಂಕಿನಿಂದ ಸಾವು
Covid 19 Karnataka Update: ಕರ್ನಾಟಕದಲ್ಲಿ 48,905 ಮಂದಿಗೆ ಕೊರೊನಾ ಸೋಂಕು, ಕೊವಿಡ್ನಿಂದ 39 ಮಂದಿ ಸಾವು