ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾ ಮಹಿಳೆ ಬಂಧನ, ಹಿನ್ನೆಲೆ ಏನಿತ್ತು?

ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾ ಮಹಿಳೆ ಬಂಧನ, ಹಿನ್ನೆಲೆ ಏನಿತ್ತು?
ಸಾಂದರ್ಭಿಕ ಚಿತ್ರ

ನಕಲಿ ದಾಖಲೆ ಮುಖಾಂತರ ಓಟರ್ ಐಡಿ, ಆಧಾರ್ ಕಾರ್ಡ್ ಸಹ ರೋನಿ ಬೇಗಂ ಯಾನಿ ಪಾಯಲ್ ಗೋಷ್ ಪಶ್ಚಿಮ ಬಂಗಾಳದ ಏರ್ ಪೋರ್ಟ್ ನಲ್ಲಿ ಲಾಕ್ ಆಗಿದ್ದಾಳೆ. FRRO ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದೂವರೆ ವರ್ಷದ ನಂತರ ರೋನಿ ಬೇಗಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

TV9kannada Web Team

| Edited By: sadhu srinath

Jan 27, 2022 | 12:47 PM

ಬೆಂಗಳೂರು: ಬಾಂಗ್ಲಾ ದೇಶದಿಂದ ಬಂದು, ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಮಹಿಳೆಯೊಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಭಾರತೀಯ ಪೌರತ್ವ ಪಡೆದಿದ್ದ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ರೋನಿ ಬೇಗಂ 2006 -2007 ರಲ್ಲಿ ಅಕ್ರಮವಾಗಿ ಗಡಿ ನುಸುಳಿ ಭಾರತದೊಳಕ್ಕೆ ಪ್ರವೇಶಿಸಿದ್ದಳು. ಮುಂದೆ.. ರೋನಿ ಬೇಗಂ 2015 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದಳು.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದ ಸದರಿ ವಿದೇಶಿ ಮಹಿಳೆ, ನೀತಿನ್ ಕುಮಾರ್ ಎಂಬಾತನನ್ನು ಮುಂಬೈನಲ್ಲಿ ವಿವಾಹವಾಗಿದ್ದಳು. ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ರೋನಿ ಬೇಗಂ ತನ್ನ ಹೆಸರು ಬದಲಿಸಿಕೊಂಡಿದ್ದಳು. ಪಾಯಲ್ ಗೋಷ್ ಎಂದು ಆಕೆಗೆ ಮರು ನಾಮಕರಣವಾಗಿತ್ತು. ನಕಲಿ ದಾಖಲೆ ಕೊಟ್ಟು ಭಾರತದ ಪ್ರಜೆಯಾಗಿ ದಾಖಲೆ ಮಾರ್ಪಾಡು ಮಾಡಿಕೊಂಡಿದ್ದಳು. ಬಾಂಗ್ಲಾಗೆ ಪ್ರಯಾಣ ಮಾಡುವಾಗ ಏರ್ ಪೋರ್ಟ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ.

ನಕಲಿ ದಾಖಲೆ ಮುಖಾಂತರ ಓಟರ್ ಐಡಿ, ಆಧಾರ್ ಕಾರ್ಡ್ ಸಹ ರೋನಿ ಬೇಗಂ ಯಾನಿ ಪಾಯಲ್ ಗೋಷ್ ಪಶ್ಚಿಮ ಬಂಗಾಳದ ಏರ್ ಪೋರ್ಟ್ ನಲ್ಲಿ ಲಾಕ್ ಆಗಿದ್ದಾಳೆ. FRRO ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದೂವರೆ ವರ್ಷದ ನಂತರ ರೋನಿ ಬೇಗಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ರೋನಿ ಬೇಗಂ ಯಾನಿ ಪಾಯಲ್ ಗೋಷ್ ಎಂಬ ಈ ಮಹಿಳೆಗೆ ಅಕ್ರಮವಾಗಿ ದಾಖಲಾತಿ ಮಾಡಿಕೊಟ್ಟವರಿಗೂ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಹೇಳಿಕೆ: ರೋನಿ ಬೇಗಂ ಅಲಿಯಾಸ್ ಪಾಯಲ್ ಗೋಷ್ ಎರಡು ವರ್ಷಗಳ ಹಿಂದೆ ಢಾಕಾಗೆ ಹೋಗುವಾಗ ಕೋಲ್ಕತಾ ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದಿದ್ದಳು. ಇಮಿಗ್ರೇಷನ್ ಅಧಿಕಾರಿಗಳ ತಪಾಸಣೆ ವೇಳೆ ಬಾಂಗ್ಲಾ ನಿವಾಸಿ ಎಂಬುದು ಪತ್ತೆಯಾಗಿತ್ತು. ಬೆಂಗಳೂರಿನ ಎಫ್ ಆರ್ ಆರ್ ಓ ನೀಡಿದ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ರಚಿಸಿ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ಕಡೆ ಮೂರು ತಿಂಗಳ ಕಾಲ ಶೋಧ ನಡೆಸಿದ್ದೆವು. ಕೊನೆಗೂ ಬಾಂಗ್ಲಾ ಮಹಿಳೆಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗ ಸೃಷ್ಟಿಗೆ ನೆರವು ನೀಡಿದವರ ಪತ್ತೆಗಾಗಿ ನಮ್ಮ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಹೇಳಿದ್ದಾರೆ.

13 ಪುಟ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನೇಣಿಗೆ ಶರಣು: ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರದ ಬಿಗ್ರೇಡ್ ಮೆಡೋಸ್ ಅಪಾರ್ಟ್ ಮೆಂಟ್ ನಲ್ಲಿ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಲಾಟ್ ನಂ 102 ರಲ್ಲಿ ವಾಸಿಸುತ್ತಿದ್ದ ಈಶ್ವರ್ ಕುಮಾರ್ 13 ಪುಟಗಳ ಡೆತ್ ನೋಟ್ ಬರೆದಿಟ್ಟು, ಜನವರಿ 20 ರಂದು ನೇಣಿಗೆ ಶರಣಾಗಿದ್ದಾರೆ. ಈಶ್ವರ್ ಕುಮಾರ್ ಅವರು ರವಿಶಂಕರ್ ಗುರೂಜಿ ಆರ್ಯವೇದಿಕ್ ಫ್ಯಾಕ್ಟರಿಯಲ್ಲಿ ಪ್ರೊಡೆಕ್ಷನ್ ಮ್ಯಾನೇಜರ್ ಆಗಿ‌ ಕೆಲಸ ನಿರ್ವಹಿಸುತ್ತಿದ್ದರು. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಈಶ್ವರ್ ಕುಮಾರ್ ಅತ್ಮಹತ್ಯೆಗೆ ಎಸಿಪಿ‌ ಹಾಕಿದ್ದ ಬೆದರಿಕೆ ಕಾರಣವೆಂದು ಮೃತನ ಸಹೋದರ ರೇವಣ ಸಿದ್ದೇಶ್ವರ್ ಜಯನಗರ ಎಸಿಪಿ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ಈಶ್ವರ್ ಕುಮಾರ್ ಅವರ ಪತ್ನಿ ರಶ್ಮಿ, ಅಕೆಯ ತಮ್ಮ ಬಸವರಾಜು, ತಂಗಿ‌ ರೂಪಾ ಹಾಗೂ ಪಾವಿನ್ ಎಂಬುವವರ ವಿರುದ್ಧವೂ ದೂರು ನೀಡಿದ್ದಾರೆ. ಪತಿ ಈಶ್ವರ್ ಅವರಿಂದ ತನಗೆ ಡೈವರ್ಸ್ ಕೊಡಿಸುವಂತೆ ರಶ್ಮಿ ಎಸಿಪಿ ಶ್ರೀನಿವಾಸ್ ಅವರ‌ ಮೊರೆ ಹೋಗಿದ್ದರು. ಹೀಗಾಗಿ ಎಸಿಪಿ ಕಚೇರಿಗೆ ಕರೆಸಿ ಮಾತುಕತೆ ನಡೆಸಿದ್ದರು. ನಂತರ ಸೀದಾ ಫ್ಲಾಟ್ ಗೆ ಬಂದು‌ ನೇಣಿಗೆ ಶರಣಾಗಿದ್ದಾರೆ ಈಶ್ವರ್ ಕುಮಾರ್.

Also Read: 69 ವರ್ಷದ ಬಳಿಕ ಏರ್ ಇಂಡಿಯಾ ಇಂದು ಟಾಟಾ ಮಡಿಲಿಗೆ: ಸೇವಾ ಸುಧಾರಣೆ ಜೊತೆಗೆ ಯಶಸ್ಸಿನ ಹಾದಿಯಲ್ಲಿ ಹಾರಾಡುವ ನಿರೀಕ್ಷೆ

Also Read: ನುಚ್ಚು ನೂರಾದ ಸಿ ಎಂ ಇಬ್ರಾಹಿಂ ಕನಸು; ರಾಜ್ಯ ಕಾಂಗ್ರೆಸ್​ನಲ್ಲಿ ಇನ್ನೊಂದು ಶಕ್ತಿ ಕೇಂದ್ರ ಸ್ಥಾಪಿಸಿತಾ ಹೈಕಮಾಂಡ್?

Follow us on

Related Stories

Most Read Stories

Click on your DTH Provider to Add TV9 Kannada