‘ವಲಸೆರಾಮಯ್ಯ’ ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ರಾಜ್ಯ ಬಿಜೆಪಿ ಘಟಕ ಟ್ವೀಟ್ ಪ್ರಶ್ನೆ

‘ವಲಸೆರಾಮಯ್ಯ’ ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ?  ರಾಜ್ಯ ಬಿಜೆಪಿ ಘಟಕ ಟ್ವೀಟ್ ಪ್ರಶ್ನೆ
ವಿಪಕ್ಷ ನಾಯಕ ಸಿದ್ದರಾಮಯ್ಯ

ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ? ನಿಮ್ಮ ಆಪ್ತ ವಲಯದಲ್ಲಿರುವ ಕೆಲವರು ಈಗ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ. #ವಲಸೆರಾಮಯ್ಯ - ರಾಜ್ಯ ಬಿಜೆಪಿ ಘಟಕ ಟ್ವೀಟ್

TV9kannada Web Team

| Edited By: sadhu srinath

Jan 27, 2022 | 12:25 PM

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ತಮಗೆ ಐದಾರು ಕ್ಷೇತ್ರದಿಂದ ಆಹ್ವಾನವಿದೆ ಎಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಪದೇಪದೆ ಹೇಳುತ್ತಾ ಬಂದಿದ್ದಾರೆ. ಇದಕ್ಕೆ ಟ್ವೀಟ್ ಮೂಲಕ ಕರ್ನಾಟಕ ಬಿಜೆಪಿ ಘಟಕ (Karnataka BJP) ವ್ಯಂಗ್ಯವಾಡಿದೆ. ‘ವಲಸೆರಾಮಯ್ಯ’ ಎಂದೇ ಸಂಭೋದಿಸಿರುವ ರಾಜ್ಯ ಬಿಜೆಪಿ ಘಟಕ ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ ಎಂದು ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಕೆಣಕಿದೆ. ನಿಮ್ಮ ಆಪ್ತ ವಲಯದಲ್ಲಿದ್ದ ಕೆಲವರು ಸಮಾಜವಾದಿ ಪಕ್ಷ, ಆಪ್ ಪಕ್ಷದ ನಾಯಕರ ಸುತ್ತಮುತ್ತ ಕಾಣಿಸಿಕೊಳ್ತಿದ್ದಾರೆ. ಇದೇ ಈಗ ಅನುಮಾನಕ್ಕೆ ಪುಷ್ಟಿ ನೀಡುತ್ತಿರುವುದು ಎಂದು ಸಮಜಾಯಿಷಿ ಮೂಲಕವೂ ಕೆಣಕಿದೆ. ನಮ್ಮ ಸಂಪರ್ಕದಲ್ಲಿ ಆ ಪಕ್ಷದವರಿದ್ದಾರೆ, ಈ ಪಕ್ಷದವರಿದ್ದಾರೆ.. ಹೀಗೆ ಕೆಲ ದಿನಗಳಿಂದ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು. ಈಗ ತಮ್ಮ ಆಪ್ತರನ್ನೇ ಬೇರೆ ಸಂಪರ್ಕಕ್ಕೆ ಬಿಟ್ಟಿದ್ದಾರೆ. ಮತ್ತೊಮ್ಮೆ ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ? ಏನಂತೀರಿ ವಲಸೆರಾಮಯ್ಯ ಎಂದು ರಾಜ್ಯ ಬಿಜೆಪಿ ಟ್ವೀಟ್ (BJP tweet) ಮಾಡಿ ಪ್ರಶ್ನಿಸಿದೆ.

ರಾಜ್ಯ ಬಿಜೆಪಿ ಘಟಕ ಟ್ವೀಟ್ ಸಾರಾಂಶ ಹೀಗಿದೆ: ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ? ನಿಮ್ಮ ಆಪ್ತ ವಲಯದಲ್ಲಿರುವ ಕೆಲವರು ಈಗ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ. #ವಲಸೆರಾಮಯ್ಯ

ಸಿದ್ದರಾಮಯ್ಯನವರೇ ನಿಮ್ಮ ಆಪ್ತರು ಆಪ್ ಹಾಗೂ ಸಮಾಜವಾದಿ ಪಕ್ಷದ‌ ನಾಯಕರ ಭೇಟಿ ಮಾಡಿರುವುದು ಆಕಸ್ಮಿಕ ಘಟನೆಯಾಗಿರಲು ಸಾಧ್ಯವಿಲ್ಲ. ಇದೊಂದು ವ್ಯವಸ್ಥಿತ ನಡೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲೂ ಇದರ ಪ್ರತಿಫಲನ ಕಾಣಬಹುದೇ? #ವಲಸೆರಾಮಯ್ಯ

ನಮ್ಮ ಸಂಪರ್ಕದಲ್ಲಿ ಆ ಪಕ್ಷದವರು ಇದ್ದಾರೆ, ಈ ಪಕ್ಷದವರು ಇದ್ದಾರೆ ಎಂದು @siddaramaiah ಕಳೆದ‌‌‌‌ ಕೆಲ ದಿನಗಳಿಂದ ‌ನಿರಂತರ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು. ಈಗ ನೋಡಿದರೆ ತಮ್ಮ ಆಪ್ತರನ್ನೇ ಬೇರೆಯವರ ಸಂಪರ್ಕಕ್ಕೆ ಬಿಟ್ಟಿದ್ದಾರೆ !!! ಸಿದ್ದರಾಮಯ್ಯನವರೇ, ಮತ್ತೊಮ್ಮೆ ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ? #ವಲಸೆರಾಮಯ್ಯ

ಸುಳ್ಳು ಹೇಳುವುದರಲ್ಲಿ ಸದಾ ‘ಸಿದ್ದ’ರಾಮಯ್ಯ ಆಗಿರುವವರ ಸುಳ್ಳಿನ ಕೊಡ ಇನ್ನೇನು ತುಂಬಲಿದೆ. 2023 ರಲ್ಲಿ ಸ್ಪಷ್ಟ ಉತ್ತರ ಸಿಗಲಿದೆ!!! ಸಿದ್ದರಾಮಯ್ಯನವರೇ, ಪಲಾಯನಕ್ಕೆ ಸಿದ್ಧವಾಗಿರಿ. #ವಲಸೆರಾಮಯ್ಯ

ಸಿದ್ದರಾಮಯ್ಯ ರಾಜ್ಯ ಬಿಜೆಪಿ ಘಟಕ ಟ್ವೀಟ್

Also Read: ನುಚ್ಚು ನೂರಾದ ಸಿ ಎಂ ಇಬ್ರಾಹಿಂ ಕನಸು; ರಾಜ್ಯ ಕಾಂಗ್ರೆಸ್​ನಲ್ಲಿ ಇನ್ನೊಂದು ಶಕ್ತಿ ಕೇಂದ್ರ ಸ್ಥಾಪಿಸಿತಾ ಹೈಕಮಾಂಡ್?

Follow us on

Related Stories

Most Read Stories

Click on your DTH Provider to Add TV9 Kannada