ಜೈನಮುನಿ ಹತ್ಯೆ ಪ್ರಕರಣದಿಂದ ಭಾರತದ ಆಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

| Updated By: ವಿವೇಕ ಬಿರಾದಾರ

Updated on: Jul 15, 2023 | 2:47 PM

ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಘಟನೆಯಿಂದ ಇಡೀ ಯತಿಕುಲವೇ ತಲೆಬಾಗುವಷ್ಟು ನೋವಾಗಿದೆ. ಭಾರತದ ಆಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ. ಭಾರತ ಯಾವತ್ತೂ ಆಧ್ಯಾತ್ಮ ರಕ್ಷಣಾ ಭೂಮಿ ಅಂತ ತೋರಿಸಬೇಕಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಜೈನಮುನಿ ಹತ್ಯೆ ಪ್ರಕರಣದಿಂದ ಭಾರತದ ಆಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ
Follow us on

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ (Kamkumar Nandi) ಮಹಾರಾಜರ ಹತ್ಯೆ ಘಟನೆಯಿಂದ ಇಡೀ ಯತಿಕುಲವೇ ತಲೆಬಾಗುವಷ್ಟು ನೋವಾಗಿದೆ. ಭಾರತದ (India) ಆಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ. ಭಾರತ ಯಾವತ್ತೂ ಆಧ್ಯಾತ್ಮ (Spirituality) ರಕ್ಷಣಾ ಭೂಮಿ ಅಂತ ತೋರಿಸಬೇಕಿದೆ. ಈ ರೀತಿಯ ಘಟ‌ನೆ ದೇಶದಲ್ಲಿ ಹಿಂದೆಂದೂ ಆಗಿಲ್ಲ. ಇಷ್ಟುಮಟ್ಟಿಗೆ ಮನುಷ್ಯನ ಮನಸು ವಿಕಾರಗೊಂಡಿದ್ದು ವಿಚಿತ್ರವಾಗಿದೆ. ಇಂತಹ ವಿಚಾರ ವಿಷಯಾಂತರ ಮಾಡದೇ ನ್ಯಾಯ ಒದಗಿಸುವ ಕೆಲಸ ಆಗಲಿ. ಧರ್ಮಗುರುಗಳಿಗೆ ತೊಂದರೆ ಆಗದ ರೀತಿ ಎಚ್ಚರ ವಹಿಸಬೇಕಿರುವುದು ದೇಶದ 125 ಕೋಟಿ ಜನರ ಕರ್ತವ್ಯ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jayamrityunjaya Swamiji) ಹೇಳಿದರು.

ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಭಾರತ ದೇಶದ ಆಧ್ಯಾತ್ಮಿಕ ಚರಿತ್ರೆಯಲ್ಲಿ, ಧರ್ಮಗರುಗಳ ಬರ್ಬರ ಹತ್ಯೆ ಮಾಡಿದ್ದು ನಾಡಿನ ಆಧ್ಯಾತ್ಮಿಕ ಪರಂಪರೆಗೆ ನಿರಾಶೆಯಾಗಿ ದಿಗ್ಭ್ರಮೆ ಉಂಟಾಗಿದೆ. ಇಂತಹ ಘಟನೆ ಯಾವಕಾರಣಕ್ಕೂ ಈ ದೇಶದಲ್ಲಿ ನಡೆಯಬಾರದಿತ್ತು. ನಮ್ಮ ಎರಡೂ ಸರ್ಕಾರ ಈ ರೀತಿ ಆಗದ ಹಾಗೆ ಎಚ್ಚರ ವಹಿಸುವ ಅವಶ್ಯಕವಿದೆ ಎಂದು ಸೂಚಿಸಿದರು.

ಇದನ್ನೂ ಓದಿ: Jain Muni Murder: ಜೈನಮುನಿಗಳ ದೇಹ ತುಂಡು ತುಂಡಾಗಿ ಕತ್ತರಿಸಿ ಡೈರಿ ಸುಟ್ಟು ಹಾಕಿದ್ರು, ಎಫ್​ಐಆರ್​ನಲ್ಲಿ ದಾಖಲಾಗಿದೆ ಭಯಾನಕ ಸಂಗತಿ

ಕಾಮಕುಮಾರ ಸ್ವಾಮೀಜಿ ಅವರಿಗೆ ಪರಿಸರ, ವಿದ್ಯಾರ್ಥಿಗಳ, ಸಾಹಿತ್ಯ ಬಗ್ಗೆ ಕಾಳಜಿ ಇತ್ತು. ನಾಡಿನ ದೊಡ್ಡ ಪೂಜ್ಯರ ಕಳೆದುಕೊಂಡ ನೋವು ನಮಗೆ ಕಾಡುತ್ತಿದೆ. ಕೇವಲ ಜೈನಧರ್ಮ ಮಾತ್ರವಲ್ಲ ಇಡೀ ದೇಶದ ಆಧ್ಯಾತ್ಮ ಮನಸುಗಳಿಗೆ ನೋವಾಗಿದೆ. ಸರ್ಕಾರದಲ್ಲಿಯೂ ಪ್ರಕರಣ ಬಗ್ಗೆ ಗಂಭೀರ ಚರ್ಚೆ ಆಗಿದೆ. ಮುಂದೆ ಈ ರೀತಿ ಘಟನೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜೈನಧರ್ಮದ ಎಲ್ಲ ಗುರುಗಳ ಜೊತೆ ನಾವು ಪೂಜ್ಯರು ಇರುತ್ತೇವೆ. ಧೈರ್ಯದಿಂದ ಆಧ್ಯಾತ್ಮಿಕ ಚಟುವಟಿಕೆ ನಡೆಸಲಿ, ಯಾರೂ ಸಹ ದಿಗ್ಭ್ರಮೆಗೊಳಗಾಗೋದು ಬೇಡ. ಹಿರೇಕೋಡಿ ಜೈನಮುನಿಗಳ ಹತ್ಯೆ ವಿಚಾರವಾಗಿ ರಾಜಕೀಯ ರೂಪ ಪಡೆದುಕೊಳ್ಳುತ್ತಿವುದಕ್ಕೆ ಬೇಸರವಾಗುತ್ತಿದೆ. ಒಕ್ಕೊರಲಾಗಿ ಖಂಡಿಸಿ ನ್ಯಾಯ ಕೊಡಿಸುವ ಕೆಲಸ ಎಲ್ಲರೂ ಕೂಡಿ ಮಾಡಬೇಕು. ಯಾವ ಕಾರಣಕ್ಕೂ ಅದಕ್ಕೆ ಕಪ್ಪುಚುಕ್ಕೆ ತರುವಂತ ಪ್ರಯತ್ನ ಆಗೋದು ಬೇಡ. ನೊಂದ ಮನಸ್ಸುಗಳಿಗೆ ಧೈರ್ಯ ಹೇಳಿ ಮುಂದೆ ಈ ರೀತಿ ಘಟನೆ ಆಗದಂತೆ ಎಲ್ಲರೂ ಸಾಮೂಹಿಕ ಪ್ರಯತ್ನ ಮಾಡಿ. ಈ ಘಟನೆಯಿಂದ ಇಡೀ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Sat, 15 July 23