ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ಕಳ್ಳತನ: ಅಂತಾರಾಜ್ಯ ಗ್ಯಾಂಗ್​ ಪೊಲೀಸ್​​ ಬಲೆಗೆ

ಅದು ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಕಿದ್ದ ಖತರ್ನಾಕ್ ಖದೀಮರ ಗ್ಯಾಂಗ್. ಇವರು ಫೀಲ್ಡಿಗಿಳಿದರು ಅಂದ್ರೆ ಸ್ಕೆಚ್​​ ಹಾಕಿದ್ದು ಮಿಸ್​​ ಆಗೋ ಮಾತೇ ಇರಲಿಲ್ಲ. ಹೀಗಿದ್ದ ಟೀಂನ ಕೊನೆಗೂ ಬೆಳಗಾವಿಯ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸುಳಿವೇ ಇಲ್ಲದ ರೀತಿ ಕಳ್ಳತನ ಮಾಡ್ತಿದ್ದ ಇವರು ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದು ಹೇಗೆ? ಎಂಬ ಮಾಹಿತಿ ಇಲ್ಲಿದೆ.

ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ಕಳ್ಳತನ: ಅಂತಾರಾಜ್ಯ ಗ್ಯಾಂಗ್​ ಪೊಲೀಸ್​​ ಬಲೆಗೆ
ಜಪ್ತಿ ಮಾಡಲಾದ ವಾಹನಗಳು
Image Credit source: Google
Edited By:

Updated on: Mar 09, 2026 | 5:41 PM

ಬೆಳಗಾವಿ, ಮಾರ್ಚ್​​ 09: ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ವಾಹನ ಕಳವು ಮಾಡುತ್ತಿದ್ದ ಖತರ್ನಾಕ್​​ ಅಂತಾರಾಜ್ಯ ಕಳ್ಳರ ಗ್ಯಾಂಗ್​​ನ ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ಸು ಕಂಡಿದ್ದಾರೆ. ವಾಹನವೊಂದರ ಕಳ್ಳತನ ಪ್ರಕರಣದ ಬೆನ್ನು ಬಿದ್ದ ಖಾಕಿ ಬರೋಬ್ಬರಿ 1 ಕೋಟಿ ಮೌಲ್ಯದ 21 ವಾಹನಗಳನ್ನ ಜಪ್ತಿ ಮಾಡಿದೆ. ಒಟ್ಟು 8 ಜನ ಆರೋಪಿಗಳ ಪೈಕಿ ಐವರನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ಉಳಿದ ಮೂವರು ಆರೋಪಿಗಳಿಗಾಗಿಯೂ ಬಲೆ ಬೀಸಿದೆ.

ಯುಸೂಫ್ ಖಾನ್, ಜಾಕೀರ್ ಹುಸೇನ್, ಶಫೀಕ್ ಅಹಮ್ಮದ್, ಆಜಾದ್ ಹಾಗೂ ಬಶೀರ್ ಅಹಮ್ಮದ್ ಬಂಧಿತ ಆರೋಪಿಗಳು. ಇವರು ಕರ್ನಾಟಕ ಮತ್ತು ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೂಲದವರು ಎಂಬುದು ಗೊತ್ತಾಗಿದೆ. ಆರೋಪಿಗಳಿಂದ 8 ಮಿನಿ ಗೂಡ್ಸ್​​ ವಾಹನ, ರಾಯಲ್​​ ಎನ್​​ಫೀಲ್ಡ್ ಮತ್ತು ಹೋಂಡಾ ಸೇರಿ ಒಟ್ಟು 8​​ ಬೈಕ್​ಗಳು, 5 ಸ್ಕೂಟರ್​​ಗಳನ್ನು ಜಪ್ತಿ ಮಾಡಲಾಗಿದೆ. ಒಂದು ವಾಹನ ಕಳ್ಳತನವಾಗಿದೆ ಅಂತಾ ಹುಡುಕಾಟ ಶುರು ಮಾಡಿದ್ದ ಪೊಲೀಸರ ಬಲೆಗೆ ದೊಡ್ಡ ತಿಮಿಂಗಲವೇ ಬಿದ್ದಿದೆ.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ!

ಮೂರು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಒಂದು ಮಿನಿ ಗೂಡ್ಸ್ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಮಾರಿಹಾಳ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಬೈಕ್ ಮೇಲೆ ಬಂದಿದ್ದ ನಾಲ್ಕು ಜನ ಮಿನಿ ಗೂಡ್ಸ್ ವಾಹನ ಕದ್ದು ಪರಾರಿಯಾಗಿರೋದು ಗೊತ್ತಾಗಿತ್ತು. ಆರೋಪಿಗಳು ಬಂದಿದ್ದ ಬೈಕ್ ನಂಬರ್​​ನ ಮಾಹಿತಿಗಾಗಿ ಪೊಲೀಸರು ಬೆನ್ನುಬಿದ್ದಾಗ ಆ ಬೈಕ್ ಕೂಡ ಕಳ್ಳತನ ಆಗಿರೋದು ಎನ್ನುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆರೋಪಿಗಳು ಕದ್ದ ವಾಹನಗಳನ್ನೇ ಬಳಸಿಕೊಂಡು ಮತ್ತೊಂದು ವಾಹನ ಕಳ್ಳತನ ಮಾಡುತ್ತಿರುವ ವಿಚಾರ ತಿಳಿದ ಪೊಲೀಸರು, ಸಿಸಿಟಿವಿ ಹಾಗೂ ಟೆಕ್ನಿಕಲ್ ಎವಿಡನ್ಸ್ ಆಧಾರದ ಮೇಲೆ ಕೊನೆಗೂ ಐದು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾಗಿದ್ದ ತಮ್ಮ ವಾಹನಗಳು ಮರಳಿ ಸಿಕ್ಕ ಹಿನ್ನೆಲೆ ಅವುಗಳ ಮಾಲೀಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:38 pm, Mon, 9 March 26

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us