ಬೆಳಗಾವಿ, ಜನವರಿ 10: ಬೆಳಗಾವಿಯಲ್ಲಿ (Belagavi) ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಬೆಳಗಾವಿ ತಾಲೂಕಿನ ಗಣೇಶಪುರದ ಹೊರವಲಯದಲ್ಲಿ ಅಪರಿಚಿತರು ರೌಡಿಶೀಟರ್ ಪ್ರಫುಲ್ ಪಾಟೀಲ್ ಮೇಲೆ ಫೈರಿಂಗ್ (Firing) ಮಾಡಿ ಹತ್ಯೆಗೆ ಯತ್ನಿಸಿದ್ದಾರೆ. ರೌಡಿಶೀಟರ್ ಪ್ರಫುಲ್ ಪಾಟೀಲ್ ಬೆಳಗುಂದಿ ಗ್ರಾಮದಿಂದ ಮನೆಗೆ ಹೋಗುವಾಗ ಅಪರಿಚಿತರು ಚಲಿಸುವ ಕಾರಿನ ಮೇಲೆಯೇ ಫೈರಿಂಗ್ ಮಾಡಿದ್ದಾರೆ. ಇದರಿಂದ, ಗುಂಡು ಗಾಜಿಗೆ ತಗುಲಿದ್ದರಿಂದ ರೌಡಿಶೀಟರ್ ಪ್ರಫುಲ್ ಪಾಟೀಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾರಿನ ಗಾಜುಗಳು ಚೂರುಗಳು ಚುಚ್ಚಿ ಪ್ರಫುಲ್ ಮುಖ ಮತ್ತು ತಲೆಭಾಗಕ್ಕೆ ಗಾಯವಾಗಿದೆ. ರೌಡಿಶೀಟರ್ ಪ್ರಫುಲ್ ಪಾಟೀಲ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆಸ್ಪತ್ರೆಗೆ ಗ್ರಾಮೀಣ ಠಾಣೆ ಎಸಿಪಿ ಗಂಗಾಧರ್, ಪಿಐ ಮತ್ತು ಅವರ ತಂಡ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದೆ.
ಇದನ್ನೂ ಓದಿ: ಪೆಟ್ರೋಲ್ ಬಂಕ್ನಲ್ಲಿ ತನ್ನದೇ ಕ್ಯುಆರ್ ಕೋಡ್ ಇಟ್ಟ ಸಿಬ್ಬಂದಿ! ಆಮೇಲೇನಾಯ್ತು?
ರೌಡಿಶೀಟರ್ ಪ್ರಫುಲ್ ಪಾಟೀಲ್ ಬೆಳಗುಂದಿ 2024 ಜೂನ್ 16ರಂದು ರಾಜು ಕಡೋಲ್ಕರ್ ಎಂಬಾತನ ಮೇಲೆ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ರೌಡಿಶೀಟರ್ ಪ್ರಫುಲ್ ಪಾಟೀಲ್ ಬಂಧನವಾಗಿದ್ದನು. ಬಳಿಕ ಪೊಲೀಸರು ಪ್ರಫುಲ್ ಪಾಟೀಲ್ ಮೇಲೆ ರೌಡಿಶೀಟರ್ ತೆರೆದು ಆರು ತಿಂಗಳು ಗಡಿ ಪಾರು ಮಾಡಿದ್ದರು. ಪ್ರಫುಲ್ ಪಾಟೀಲ್ ಮೇಲೆ ಪ್ರಕರಣಗಳು ದಾಖಲಾಗಿವೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಪ್ರಫುಲ್ ಪಾಟೀಲ್ನನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ