ಬೆಳಗಾವಿಯಲ್ಲಿ ತಾರಕಕ್ಕೇರಿದ ಮೂರ್ತಿ ಪಾಲಿಟಿಕ್ಸ್: ಮತ್ತೊಮ್ಮೆ ಮೂರ್ತಿ ಅನಾವರಣಕ್ಕೆ ಸಿದ್ಧತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 06, 2025 | 7:29 PM

ಬೆಳಗಾವಿಯಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆಯ ಅನಾವರಣ ಕಾರ್ಯಕ್ರಮ ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ನಡೆದ ಲೋಕಾರ್ಪಣೆಯನ್ನು ಡಿಸಿ ಅನಧಿಕೃತ ಎಂದು ಘೋಷಿಸಿದ್ದಾರೆ. "ಜೈ ಮಹಾರಾಷ್ಟ್ರ" ಘೋಷಣೆ ಕೂಡ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈಗ ಮತ್ತೊಮ್ಮೆ ಅಧಿಕೃತ ಲೋಕಾರ್ಪಣೆಗೆ ಮುಂದಾಗಿದ್ದು, ರಾಜಕೀಯ ಲೆಕ್ಕಾಚಾರಗಳು ನಡೆದಿವೆ.

ಬೆಳಗಾವಿಯಲ್ಲಿ ತಾರಕಕ್ಕೇರಿದ ಮೂರ್ತಿ ಪಾಲಿಟಿಕ್ಸ್: ಮತ್ತೊಮ್ಮೆ ಮೂರ್ತಿ ಅನಾವರಣಕ್ಕೆ ಸಿದ್ಧತೆ
ಬೆಳಗಾವಿಯಲ್ಲಿ ತಾರಕಕ್ಕೇರಿದ ಮೂರ್ತಿ ಪಾಲಿಟಿಕ್ಸ್: ಮತ್ತೊಮ್ಮೆ ಮೂರ್ತಿ ಅನಾವರಣಕ್ಕೆ ಸಿದ್ದತೆ
Follow us on

ಬೆಳಗಾವಿ, ಜನವರಿ 06: ನಗರದಲ್ಲಿ ಸಂಭಾಜಿ ಮಹಾರಾಜರ ಮೂರ್ತಿ (Sambhaji Maharaj Statue) ಲೋಕಾರ್ಪಣೆ ಇದೀಗ ಮತ್ತೊಂದು ಹಂತದ ತಿರುವು ಪಡೆದುಕೊಂಡಿದೆ. ಜಿಲ್ಲಾಡಳಿತದ ಅನುಮತಿ ನಿರಾಕರಣೆ ಬೆನ್ನಲ್ಲೇ ನಿನ್ನೆ ಅದ್ದೂರಿಯಾಗಿ ಪುತ್ಥಳಿ ಲೋಕಾರ್ಪಣೆ ಮಾಡಿದ್ದರು. ಆದರೆ ಇದೀಗ ಮೂರ್ತಿ ಲೋಕಾರ್ಪಣೆಯೇ ಅನಧಿಕೃತ ಅಂತಾ ಡಿಸಿ ಮೊಹಮ್ಮದ್ ರೋಷನ್ ಹೇಳುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ. ನಿನ್ನೆ ಲೋಕಾರ್ಪಣೆ ಆದರೂ ಮತ್ತೊಮ್ಮೆ ಅಧಿಕೃತ ಲೋಕಾರ್ಪಣೆಗೆ ಜಿಲ್ಲಾಡಳಿತ ಸಜ್ಜಾಗಿದೆ. ಕಾರ್ಯಕ್ರಮದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಡ ಕೇಳಿ ಬಂದಿದ್ದು ಕನ್ನಡಿಗರನ್ನ ಕೆರಳಿಸಿದೆ.

ಮೂರ್ತಿ ಕ್ರೆಡಿಟ್ ಪಾಲಿಟಿಕ್ಸ್​

ಬಹಳ ವಿಜೃಂಬಣೆಯಿಂದ ನಡೆದಿದ್ದ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮವೇ ಇದೀಗ ಅನಧಿಕೃತ ಅಂತಾ ಖುದ್ದು ಡಿಸಿ ಅವರೇ ಹೇಳುವ ಮೂಲಕ ಮೂರ್ತಿ ಕ್ರೆಡಿಟ್ ಪಾಲಿಟಿಕ್ಸ್​ಗೆ ಟ್ವಿಸ್ಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹಿಂದೆ ಹೇಳಿದ್ದನ್ನೇ ಪುನರಾವರ್ತಿಸಿದರು!

ಬೆಳಗಾವಿ ನಗರದ ಅನಗೋಳದ ಡಿವಿಎಸ್ ಚೌಕ್​​ನಲ್ಲಿ ನಿರ್ಮಿಸಿರುವ 21 ಅಡಿ ಎತ್ತರದ ಸಂಭಾಜಿ ಮಹರಾಜರ ಮೂರ್ತಿಯನ್ನ ಹಲವು ವಿರೋಧ ಹಾಗೂ ಜಿಲ್ಲಾಡಳಿತದ ಅನುಮತಿ ನಿರಾಕರಣೆ ನಡುವೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಶಿವಾಜಿ ಮಹರಾಜರ ವಂಶಸ್ಥ, ಮಹಾರಾಷ್ಟ್ರ ಸರ್ಕಾರದ ಸಚಿವ ಶಿವೇಂದ್ರ ರಾಜೆ ಬೋಸಲೆ ಅವರಿಂದ ನಿನ್ನೆ ಉದ್ಘಾಟನೆ ಮಾಡಲಾಗಿದೆ.

ಇಂದು ಅನಗೋಳ ರಹವಾಸಿಗಳು ಬೆಳಗಾವಿಯ ಡಿಸಿ ಕಚೇರಿಗೆ ಆಗಮಿಸಿ ಡಿಸಿ ಅವರನ್ನ ಭೇಟಿಯಾಗಿ ಶಾಸ್ತ್ರೋಕ್ತವಾಗಿ ಮೂರ್ತಿ ಅನಾವರಣ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿ ನಿನ್ನೆ ಆದ ಕಾರ್ಯಕ್ರಮವೇ ಅನಧಿಕೃತ, ಎರಡ್ಮೂರು ತಿಂಗಳಲ್ಲಿ ಅತೀ ವಿಜೃಂಬಣೆಯಿಂದ ಪುತ್ಥಳಿ ಅನಾವರಣ ಮಾಡೋಣ ಅಂತಾ ಭರವಸೆ ನೀಡಿದ್ದಾರೆ.

ಇನ್ನೂ ಅನಗೋಳ ನಿವಾಸಿಗಳ ಜೊತೆಗೆ ಸುಮಾರು ಅರ್ಧಗಂಟೆಗಳ ಕಾಲ ಸಭೆ ಮಾಡಿದ ಡಿಸಿ ಮೊಹಮ್ಮದ್ ರೋಷನ್ ಮತ್ತೊಮ್ಮೆ ಸರ್ಕಾರದ ಕಡೆಯಿಂದ ಮೂರ್ತಿ ಅನಾವರಣ ಮಾಡವುದಾಗಿ ಭರವಸೆ ನೀಡಿ ವಾಪಾಸ್ ಕಳುಹಿಸಿದ್ದಾರೆ. ಇತ್ತ ಮೂರ್ತಿ ಸುತ್ತಮುತ್ತಲು ಬ್ಯಾರಿಕೆಡ್ ಹಾಕಿ ಬಾಕಿ ಇರುವ ಕಾಮಗಾರಿಯನ್ನ ಮುಗಿಸಲು ಸೂಚನೆ ಕೂಡ ನೀಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮ ಹಾಗೂ ಮೂರ್ತಿ ಅನಾವರಣದಲ್ಲಿ ಆದ ಘಟನಾವಳಿಗಳ ಕುರಿತು ಸರ್ಕಾರಕ್ಕೆ ಡಿಸಿ ವರದಿ ರವಾನಿಸಿದ್ದು, ಇತ್ತ ಪ್ರೊಟೊಕಾಲ್ ಪ್ರಕಾರ ಮೂರ್ತಿ ಅನಾವರಣಕ್ಕೆ ಅವಕಾಶ ಮಾಡಿಕೊಡುವಂತೆ ಕೂಡ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕನ್ನಡ ನೆಲದಲ್ಲಿ ನಿಂತು ಜೈ ಮಹಾರಾಷ್ಟ್ರ ಕೂಗು

ಈ ಮೂಲಕ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಾಗೂ ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರು ಸೇರಿ ನಿನ್ನೆ ಮಾಡಿದ ಕಾರ್ಯಕ್ರಮವೇ ಅಧಿಕೃತ ಅಲ್ಲಾ ಅಂತಾ ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಇನ್ನೊಂದು ಕಡೆ ನಿನ್ನೆ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬಂದಿದ್ದ ಮಹಾರಾಷ್ಟ್ರ ಸರ್ಕಾರದ ಲೋಕೊಪಯೋಗಿ ಇಲಾಖೆ ಸಚಿವ ಶಿವೇಂದ್ರ, ಕನ್ನಡ ನೆಲದಲ್ಲಿ ನಿಂತು ಜೈ ಮಹಾರಾಷ್ಟ್ರ ಅಂದಿರುವುದು ಕೂಡ ಕನ್ನಡಿಗರನ್ನ ಕೆರಳಿಸುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಾ ಸಚಿವರ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದು ಈ ನಿಟ್ಟಿನಲ್ಲಿ ಶಾಸಕ ಅಭಯ್ ಪಾಟೀಲ್​​ಗೂ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಅಹಿಂದ ನಾಯಕರ ಜೊತೆ ಡಿನ್ನರ್ ಮೀಟಿಂಗ್ ಡೌನ್ ಪ್ಲೇ ಮಾಡಿದ ಸತೀಶ್ ಜಾರಕಿಹೊಳಿ

ಒಟ್ಟಿನಲ್ಲಿ ಒಂದೇ ಮೂರ್ತಿ ಎರಡೇರಡು ಬಾರಿ ಉದ್ಘಾಟನೆ ಭಾಗ್ಯ ಸಿಗುತ್ತಿದೆ. ನಿನ್ನೆ ಅದ್ದೂರಿಯಾಗಿ ಲೋಕಾರ್ಪಣೆ ಆದರೂ ಸರ್ಕಾರದಿಂದ ಪ್ರೊಟೊಕಾಲ್ ಪ್ರಕಾರ ಮತ್ತೊಮ್ಮೆ ಎಲ್ಲರನ್ನ ಸೇರಿಸಿ ವಿಜೃಂಬಣೆಯಿಂದ ಕಾರ್ಯಕ್ರಮ ಮಾಡಲು ತಯಾರಿ ನಡೆಸಿದ್ದು, ಜನರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುವಂತೆ ಮಾಡಿದೆ. ಅದೇನೆ ಇರಲಿ ವೋಟ್ ಪಾಲಿಟಿಕ್ಸ್ ಗಾಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶಾಸಕ ಅಭಯ್ ಪಾಟೀಲ್ ನಡುವೆ ಫೈಟ್ ನಡೆಯುತ್ತಿದ್ದು, ಆದರೆ ಮಹಾನ್ ನಾಯಕರ ಹೆಸರಲ್ಲಿ ಕಿತ್ತಾಟ ಮಾಡ್ತಿರುವುದು ನಿಜಕ್ಕೂ ವಿಪರ್ಯಾಸ.

ಕರ್ನಾಕಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:28 pm, Mon, 6 January 25