ಬೆಳಗಾವಿ: ಡ್ಯೂಟಿ ಬದಲಿಸಿದ್ದಕ್ಕೆ ಠಾಣೆಯಲ್ಲಿ ಆತ್ಮಹತ್ಯೆ ಡ್ರಾಮಾ ಮಾಡಿದ ಕಾನ್ಸ್​ಟೇಬಲ್! ಆಮೇಲೇನಾಯ್ತು?

| Updated By: Ganapathi Sharma

Updated on: Jan 02, 2025 | 8:07 AM

ಡ್ಯೂಟಿಯಿಂದ ತಪ್ಪಿಸಿಕೊಳ್ಳಬೇಕೆಂದು ಪೊಲೀಸ್ ಕಾನ್ಸ್​ಟೇಬಲ್ ಒಬ್ಬರು ಆತ್ಮಹತ್ಯೆ ನಾಟಕವಾಡಿದ ವಿಚಿತ್ರ ಘಟನೆ ಬೆಳಗಾವಿಯ ಉದ್ಯಮಬಾಗ ಪೊಲಿಸ್ ಠಾಣೆಯಲ್ಲಿ ನಡೆದಿದೆ. ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದಾಗ ಅಸಲಿ ಸತ್ಯ ಗೊತ್ತಾಗಿದೆ. ಆದರೆ, ಅಷ್ಟರಲ್ಲಿ ಪಿಐಗೆ ಲೋ ಬಿಪಿಯಾಗಿ ಕಂಗಾಲಾಗಿದ್ದಾರೆ. ಆಮೇಲೇನಾಯ್ತು? ತಿಳಿಯಲು ಮುಂದೆ ಓದಿ.

ಬೆಳಗಾವಿ: ಡ್ಯೂಟಿ ಬದಲಿಸಿದ್ದಕ್ಕೆ ಠಾಣೆಯಲ್ಲಿ ಆತ್ಮಹತ್ಯೆ ಡ್ರಾಮಾ ಮಾಡಿದ ಕಾನ್ಸ್​ಟೇಬಲ್! ಆಮೇಲೇನಾಯ್ತು?
ಪೊಲೀಸ್ ಕಾನ್ಸ್​ಟೇಬಲ್ ಮುದಕಪ್ಪ ಉದಗಟ್ಟಿ
Follow us on

ಬೆಳಗಾವಿ, ಜನವರಿ 2: ಡ್ಯೂಟಿ ಬದಲಿಸಿದ್ದಕ್ಕೆ ಪೊಲೀಸ್ ಕಾನ್ಸ್​ಟೇಬಲ್ ಮುದಕಪ್ಪ ಉದಗಟ್ಟಿ ಎಂಬವರು ಆತ್ಮಹತ್ಯೆಯ ನಾಟಕ ಮಾಡಿದ ವಿಚಿತ್ರ ಘಟನೆ ಬೆಳಗಾವಿಯ ಉದ್ಯಮಬಾಗ ಠಾಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮುದಕಪ್ಪ ಅವಾಂತರದಿಂದಾಗಿ ಠಾಣೆಯ ಪಿಐ ಡಿಕೆ ಪಾಟೀಲ್ ಲೋ ಬಿಪಿ ಆಗಿ ಆಸ್ಪತ್ರೆ ಸೇರುವಂಥ ಆಗಿದೆ! ಘಟನೆ ಬಗ್ಗೆ ಇದೀಗ ಬೆಳಗಾವಿ ಪೊಲೀಸ್ ಆಯುಕ್ತ ಯುಡಾ ಮಾರ್ಟಿನ್ ಅವರಿಗೂ ಮಾಹಿತಿ ನೀಡಲಾಗಿದೆ.

ಠಾಣೆಯಲ್ಲಿ ನಡೆಯಿತು ಹೈಡ್ರಾಮಾ

ಮುದಕಪ್ಪ ಎರಡು ದಿನ ರಜೆ ಹೋಗಿ ಬಂದಿದ್ದರು. ಹೀಗಾಗಿ ಅವರಿಗೆ ಪಿಐ ಡ್ಯೂಟಿ ಬದಲಿಸಿದ್ದರು. ಕರ್ತವ್ಯ ನಿಯೋಜಿಸಿದ ಜಾಗಕ್ಕೆ ಹೋಗಬೇಕೆಂದು ಸೂಚನೆ ನೀಡಿದ್ದರು. ಆದರೆ ಇದಕೊಪ್ಪದ ಮುದಕಪ್ಪ, ವಿಷ ಸೇವಿಸುತ್ತೇನೆ ಎಂದು ಹೇಳಿದ್ದಲ್ಲದೆ ದಾಳಿಯಲ್ಲಿ ಬಿದ್ದು ಹೊರಳಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಯಲಾಗಿದ್ದು ಆರೋಗ್ಯ ತಪಾಸಣೆ ಮಾಡಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು, ಮುದಕಪ್ಪ ವಿಷ ಸೇವಿಸಿಲ್ಲ ಎಂದು ದೃಢಪಡಿಸಿದ್ದಾರೆ. ಬಳಿಕ ಮೇಲಧಿಕಾರಿಗಳು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು, ಗರ್ಭಿಣಿ ಸಾವು: ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆಗೆ ಯತ್ನ

ಆದರೆ ಇಷ್ಟೆಲ್ಲ ಆಗುವಾಗ ಪಿಐ ಡಿಕೆ ಪಾಟೀಲ್ ಅಸ್ವಸ್ಥಗೊಂಡಿದ್ದಾರೆ. ಅವರಿಗೆ ಲೋ ಬಿಪಿ ಆಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವಿಚಾರ ತಿಳಿದು ಎಸಿಪಿ ಶೇಖರಪ್ಪ ಉದ್ಯಮಬಾಗ ಠಾಣೆಗೆ ಆಗಮಿಸಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ನಂತರ ಬೆಳಗಾವಿ ಪೊಲೀಸ್ ಕಮಿಷನರ್ ಅವರಿಗೂ ವಿವರಗಳನ್ನು ತಿಳಿಸಿದರು.

ಇದೇ ಮೊದಲಲ್ಲ!

ಅಂದಹಾಗೆ, ಉದ್ಯಮಬಾಗ ಠಾಣೆಯಲ್ಲಿಈ ರೀತಿಯ ವಿಚಿತ್ರ ನಡೆಯುತ್ತಿರುವುದು ಇದೇ ಮೊದಲಲ್ಲ. ಒಂದು ತಿಂಗಳ ಹಿಂದೆ ಇದೇ ಠಾಣೆಯಲ್ಲಿ ಪೊಲೀಸ್ ಪೇದೆ ವಿಠ್ಠಲ್ ಮುನಿಹಾಳ ಎಂಬವರು ಡೆತ್ ನೋಟ್ ಬರೆದಿಟ್ಟು ಹೋಗಿದ್ದರು. ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟು ಹೋಗಿದ್ದರು. ಸಿಪಿಐ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 am, Thu, 2 January 25