Belagavi Winter Session: ಬೆಳಗಾವಿ ಚಳಿಗಾಲ ಅಧಿವೇಶನ ಪ್ರತಿಭಟನೆಗಳ ಅಬ್ಬರವಷ್ಟೇ, ಏನೆಲ್ಲಾ ಬೇಡಿಕೆಗಳಿದ್ದವು ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 31, 2022 | 5:06 PM

protests: ಒಂಬತ್ತು ದಿನಗಳ ಕಾಲ ನಡೆದ ಅಧಿವೇಶನದ ಸಂದರ್ಭದಲ್ಲಿ (Suvarna soudha) ಎಷ್ಟು ಪ್ರತಿಭಟನೆಗಳು ನಡೆದಿವೆ? ಯಾವೆಲ್ಲಾ ಸಂಘಟನೆಗಳಿಂದ ಹೋರಾಟ ಆಗಿವೆ? ಯಾವೆಲ್ಲಾ ಬೇಡಿಕೆ ಈಡೇರಿದೆ ಎಂಬುದರ ಕುರಿತು ಟಿವಿ9 ಎಕ್ಸ್​​ಕ್ಲೂಸೀವ್ ಡಿಟೇಲ್ಸ್​​ ಇಲ್ಲಿದೆ ನೋಡಿ...

Belagavi Winter Session: ಬೆಳಗಾವಿ ಚಳಿಗಾಲ ಅಧಿವೇಶನ ಪ್ರತಿಭಟನೆಗಳ ಅಬ್ಬರವಷ್ಟೇ, ಏನೆಲ್ಲಾ ಬೇಡಿಕೆಗಳಿದ್ದವು ಗೊತ್ತಾ?
ಬೆಳಗಾವಿ ಚಳಿಗಾಲ ಅಧಿವೇಶ ಪ್ರತಿಭಟನೆಗಳ ಅಬ್ಬರವಷ್ಟೇ
Follow us on

ಹೌದು ಕುಂದಾನಗರಿ ಬೆಳಗಾವಿಯಲ್ಲಿ ನಡೆದ ಹತ್ತನೇ ಚಳಿಗಾಲ ಅಧಿವೇಶನ (Belagavi Winter Session) ಅವಧಿಗೂ ಒಂದು ದಿನ ಮೊದಲೇ ಮುಕ್ತಾಯಗೊಂಡಿದೆ. ಉತ್ತರ ಕರ್ನಾಟಕದ ಸಮಸ್ಯೆಗಳನ್ನ ಚರ್ಚೆ ಮಾಡಿ‌ ಪರಿಹಾರ ನೀಡುವ ಉದ್ದೇಶದಿಂದ ನಡೆಯುವ ಅಧಿವೇಶನ ಈ ಬಾರಿಯೂ ಈಡೇರಿಲ್ಲ. ಸುವರ್ಣ ಸೌಧದಲ್ಲಿ ಒಂದು ಕಡೆ ಅಧಿವೇಶನ ನಡೆದ್ರೇ ಇನ್ನೊಂದು ಕಡೆ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಟನೆಗಳ ಕಾವು ಕೂಡ ಜೋರಾಗಿತ್ತು. ಈ ವರ್ಷ ಕೂಡ ಪ್ರತಿಭಟನೆಗಳ ಅಬ್ಬರ ಜೋರಾಗಿದ್ದು ಹತ್ತಾರು ಸಂಘಟನೆಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೋರಾಟ ಮಾಡಿವೆ. ಅಷ್ಟಕ್ಕೂ ಒಂಬತ್ತು ದಿನಗಳ ಕಾಲ ನಡೆದ ಅಧಿವೇಶನದ ಸಂದರ್ಭದಲ್ಲಿ (Suvarna soudha) ಎಷ್ಟು ಪ್ರತಿಭಟನೆಗಳು (protests) ನಡೆದಿವೆ? ಯಾವೆಲ್ಲಾ ಸಂಘಟನೆಗಳಿಂದ ಹೋರಾಟ ಆಗಿವೆ? ಯಾವೆಲ್ಲಾ ಬೇಡಿಕೆ ಈಡೇರಿದೆ ಎಂಬುದರ ಕುರಿತು ಟಿವಿ9 ಎಕ್ಸ್​​ಕ್ಲೂಸೀವ್ ಡಿಟೇಲ್ಸ್​​ ಇಲ್ಲಿದೆ ನೋಡಿ…

ಒಂಬತ್ತು ದಿನಗಳಲ್ಲಿ ಬರೋಬ್ಬರಿ 93 ಸಂಘಟನೆಗಳು ಹಾಗೂ ಸಮುದಾಯಗಳಿಂದ ಹೋರಾಟ

ಹೌದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಡಿ.29ರಂದು ಅಂತ್ಯವಾಗಿದೆ. ಇದರ ಜತೆಗೆ ಸುವರ್ಣಸೌಧದ ಎದುರಲ್ಲಿ 9ದಿನಗಳ ಕಾಲ ನಡೆದ ಹೋರಾಟಗಳು ಸಹ ಅಂತ್ಯಗೊಂಡಿವೆ. ಹಲವಾರು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಸಂಘಟನೆಗಳಿಗೆ ಮತ್ತೆ ನಿರಾಸೆಯಾಗಿದೆ. ಒಂದಲ್ಲಾ ಎರಡಲ್ಲಾ ಒಂಬತ್ತು ದಿನಗಳಲ್ಲಿ ಬರೋಬ್ಬರಿ 93 ಸಂಘಟನೆಗಳು ಹಾಗೂ ಸಮುದಾಯದಗಳು ತಮ್ಮ ಬೇಡಿಕೆ ಈಡೇರಿಸುವಂತೆ ನಡೆಸಿದ ಹೋರಾಟಕ್ಕೆ ಸರ್ಕಾರ ಮತ್ತದೇ ಹಳೆ ಕಥೆಯನ್ನೇ ಹೇಳಿದ್ದು, ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಹೋರಾಟಗಾರರು ವಾಪಾಸ್ ಆಗಿದ್ದಾರೆ…

ಬೆಳಗಾವಿಯ ಚಳಿಗಾಲದ ಅಧಿವೇಶನ ಅಂತ್ಯವಾಗಿದೆ ನಿರಂತರ ಪ್ರತಿಭಟನೆಗಳು, ಪಾದಯಾತ್ರೆ, ಉಪವಾಸ ಸತ್ಯಾಗ್ರಹ, ರೈತರ ಪ್ರತಿಭಟನೆಗಳು ಸೇರಿ ಹಲವಾರು ಸಂಘಟನೆಗಳ ತಮ್ಮ ಬೇಡಿಕೆಗಾಗಿ ಬೃಹತ್ ಪ್ರತಿಭಟನೆಗೆ ಮುಂದಾಗಿದ್ವು. ಅಧಿವೇಶನದಲ್ಲಾದ್ರೂ ನಮ್ಮ ಬೇಡಿಕೆ ಈಡೇರುತ್ತೆ ಅನ್ನೋ ಭರವಸೆಯಲ್ಲಿದ್ದ ಅನೇಕ ಸಮುದಾಯಗಳು ಹಾಗೂ ಸಂಘಟನೆಗಳಿಗೆ ಮತ್ತದೇ ನಿರಾಸೆ ಎದುರಾಗಿದೆ. ಲಿಂಗಾಯತ ಪಂಚಮಸಾಲಿಯ 2ಎ ಮೀಸಲಾತಿ ಸೇರಿದಂತೆ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಹಾಗೂ ಹಲವು ಸಂಘಟನೆಗಳ ಹಲವಾರು ಬೇಡಿಕೆಗಳು ಈ ಬಾರಿಯೂ ಸಹ ಈಡೇರಿಲ್ಲ. ಕೊನೆಯ ದಿನವೂ ಸಹ ಗಾಣಿಗ ಸಮುದಾಯದವರು ಸಹ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿದ್ದು ಪ್ರಯೋಜನವಾಗಿಲ್ಲ…

ಯಾವೆಲ್ಲಾ ಸಮುದಾಯದಿಂದ ಮೀಸಲಾತಿ ಹೋರಾಟ, ಎಷ್ಟು ಸಂಘಟನೆಗಳಿಂದ ಪ್ರತಿಭಟನೆ ವಿವರ

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಶ್ರೇಯೋಭಿವೃದ್ದಿ ಸಂಘದಿಂದ ಬೃಹತ್ ಹೋರಾಟ ಮಾಡಿದ್ರೂ. ಬೆಂಬಲ‌ ಬೆಲೆ ನಿಗದಿ, ಕೃಷಿ ಇಲಾಖೆಯಲ್ಲಿ ಸೇರಿಸಿರುವ ನಿಲುವು ವಾಪಾಸ್ ಪಡೆಯಬೇಕು, ರೈತರ ಎಲ್ಲ ಸಾಲಾ ಮನ್ನಾ ಮಾಡುವಂತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ರೈತರು ಪ್ರತಿಭಟನೆ ನಡೆಸಿದ್ರೂ. ರಾಜ್ಯ ರೈತ ಸಂಘದಿಂದ ಕೊಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಡೆದಿದ್ದ ಹೋರಾಟ. ರೈತ ಸಂಘದಿಂದ ಎಚ್ ಆರ್ ಬಸವರಾಜಪ್ಪ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ. ಪ್ರತಿ ಟನ್ ಕಬ್ಬಿಗೆ 5500 ರೂಪಾಯಿ ಬೆಲೆ ನಿಗದಿ ಆಗ್ರಹಿಸಿದ್ದರು. 2A ಮೀಸಲಾತಿ ನೀಡಲು ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠ ಸಮೂದಾಯದಿಂದ ಪ್ರತಿಭಟನೆ ನಡೆಸಿದ್ದರು. ಜೆಓಸಿ ನೌಕರರ ಒಕ್ಕೂಟದಿಂದ ಪ್ರತಿಭಟನೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಹೋರಾಟ, ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳು, ನೌಕರರ ಒಕ್ಕೂಟದಿಂದ ಪ್ರತಿಭಟನೆ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದಿಂದ ಹೋರಾಟ, ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ. ನವ ಕರ್ನಾಟಕ ಗೌರವಧನ ಕಾರ್ಯಕರ್ತ ಸಂಘದಿಂದ ಹೋರಾಟ ನಡೆಸಿದ್ರೂ. ರಾಜ್ಯ ವೃತ್ತಿಪರ ನೇಕರಾರರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆದಿತ್ತು.


ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹ. ರಾಜ್ಯ ಮಾದಿಗ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ. ಉತ್ತರ ಕರ್ನಾಟಕ ಅಜುಂಮನ್ ಎ ಇಸ್ಲಾಂ ಹುಬ್ಬಳ್ಳಿ ಸಂಘಟನೆಯಿಂದ ಪ್ರತಿಭಟನೆ. ಅಖಿಲ‌ ಕರ್ನಾಟಕ ಗೋಂಧಳಿ ಸಮಾಜದಿಂದ ಪ್ರತಿಭಟನೆ. ಪೊಲೀಸ್ ಸ್ವೀಪರ್ಸ್ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ. ಮೀಸಲಾತಿಗಾಗಿ ಉಪ್ಪಾರ ಸಮಾಜದಿಂದ ಪ್ರತಿಭಟನೆ. ಟಾಟಾ ಮಾರ್ಕೊ ಪೋಲೊ ಕಾರ್ಮಿಕ ಸಂಘದಿಂದ ಹೋರಾಟ. ನೇಗಿಲಯೋಗಿ ರೈತ ಸಂಘದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ. ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪ್ರತ್ಯೇಕ ತಾಲೂಕಿಗೆ ಆಗ್ರಹ. ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ನಿಂದ ಹೋರಾಟ. ಲವ್ ಜಿಹಾದ್ ವಿರುದ್ಧ ವಿಶೇಷ ಪೊಲೀಸ್ ದಳ ಸ್ಥಾಪಿಸಲು ಆಗ್ರಹಿಸಿ ಹಿಂದು ಜನ ಜಾಗೃತಿ ಸಮಿತಿ ಗೋವಾದಿಂದ ಪ್ರತಿಭಟನೆ. ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಒಂದು ಲಕ್ಷ ಪರಿಹಾರಕ್ಕಾಗಿ ಸ್ವಾಭಿಮಾನಿ ರೈತ ಸಂಘದಿಂದ ಪ್ರತಿಭಟನೆ. ವಸತಿ ಶಿಕ್ಷಕರ ಸಮಸ್ಯೆಗಳ ಪರಿವಾರಕ್ಕೆ ಒತ್ತಾಯಿಸಿ ಹೋರಾಟ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ. ಅಂಕಲಗಿ, ಅಕ್ಕತಂಗೇರಹಾಳ ಪಟ್ಟಣ ಪಂಚಾಯತಿ ವಿಭಜನೆಗೆ ಆಗ್ರಹ. ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ನಿಂದ ಪ್ರತಿಭಟನೆ. ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘದಿಂದ ಹೋರಾಟ. ಕರ್ನಾಟಕ ಯುವ ಜಾಗೃತಿ ವೇದಿಕೆಯಿಂದ ಧರಣಿ ಸತ್ಯಾಗ್ರಹ. ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರವನ್ನು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರಿಸಲು ಆಗ್ರಹಿಸಿ ಹೋರಾಟ. ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ‌ನ್ಯಾ. ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ.‌ ಗುತ್ತಿಗೆ ನರ್ಸ್ ಅಭಿವೃದ್ಧಿ ಸಂಘದಿಂದ ವಿವಿಧ ಈಡೇರಿಕೆಗೆ ಆಗ್ರಹಿಸಿ ಧರಣಿ. ಮಡಿವಾಳ ಜನಾಂಗವನ್ನು ಎಸ್ಟಿಗೆ ಸೇರ್ಪಡೆ ಮಾಡಲು ಆಗ್ರಹಿಸಿ ಧರಣಿ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಂತೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಧರಣಿ. ಅರಣ್ಯ ಒತ್ತುವರಿ ಸಾಗುವಳಿದಾರರ ಬೇಡಿಕೆ ಈಡೇರಿಕೆಗೆ ರೈತ, ಕಾರ್ಮಿಕ, ಮಹಿಳಾ ಸಂಘದ ವತಿಯಿಂದ ಪ್ರತಿಭಟನೆ. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಧಾರವಾಡ ಹಿರಿಯ ನಾಗರಿಕರ ಒಕ್ಕೂಟದ ವತಿಯಿಂದ ಧರಣಿ. ಹೊರಗುತ್ತಿಗೆ ಕಾರ್ಮಿಕರ ಸೇವೆ ಮುಂದುವರಿಕೆ, ಸೇವಾ ಭದ್ರತೆ, ಕನಿಷ್ಠ ವೇತನ ನೀಡಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕ ಸಂಘದಿಂದ ಪ್ರತಿಭಟನೆ. ಪ್ರಥಮ ಚಿಕಿತ್ಸಾ ಪರಿಣಿತರ ಮೇಲೆ ಮಾಧ್ಯಮಗಳ ಕಿರುಕುಳ ತಪ್ಪಿಸಲು ರಾಜ್ಯ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರ ಸಂಘದಿಂದ ಧರಣಿ. ವಸತಿಶಾಲೆ, ವಸತಿನಿಲಯಗಳಲ್ಲಿ ನೌಕರರ ಸೇವಾಭದ್ರತೆ ನೀಡಲು ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ.


ಬಿಸಿಯೂಟ ಕಾರ್ಯಕರ್ತರ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಹೋರಾಟ. ಚಿಕ್ಕೋಡಿ ಜಿಲ್ಲೆ ಮಾಡುವಂತೆ ಆಗ್ರಹಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಪ್ರತಿಭಟನೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಪತ್ತಿನ ಸಹಕಾರಿ ಬ್ಯಾಂಕುಗಳ ಕ್ಷೇಮಾಭಿವೃದ್ಧಿ ಮಹಾಮಂಡಳ ಧರಣಿ. ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ‌ನೌಕರರಿಗೆ ನಿಶ್ಚಿತ ಪಿಂಚಣಿ ನೀಡಲು ಆಗ್ರಹ. ಕರ್ನಾಟಕ ರಾಜ್ಯ ಪಿಂಚಣಿ ವಂಚಿತ ನೌಕರರ ಸಂಘದಿಂದ ಪ್ರತಿಭಟನೆ. ಕೆಹೆಚ್‌ಬಿ ಕಾಲೋನಿಯಿಂದ ಬೆಳಗಾವಿ ನಗರಕ್ಕೆ ನೇರ ರಸ್ತೆ ನಿರ್ಮಾಣಕ್ಕೆ ಬಸವನ ಕುಡಚಿ ಕೆಹೆಚ್‌ಬಿ ಲೇಔಟ್ ರಹವಾಸಿಗಳಿಂದ ಪ್ರತಿಭಟನೆ. ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಲು ಕರ್ನಾಟಕ ಪ್ರದೇಶ ಕುರುಬ ಸಂಘದಿಂದ ಬೃಹತ್ ಹೋರಾಟ. ಮಡಿವಾಳ ಸಮಾಜವನ್ನು ಎಸ್ಪಿಗೆ ಸೇರಿಸಲು ಕರ್ನಾಟಕ ರಾಜ್ಯ ಮಡಿವಾಳ ಸಂಘದಿಂದ ಹಡಪದ ಸಮಾಜಕ್ಕೆ ಎಸ್ಸಿ ಮೀಸಲಾತಿ ನೀಡಲು ಆಗ್ರಹ. ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದಿಂದ ಧರಣಿ. ಸೇವಾ ಕಾಯಂ ಆತಿಗೆ ಆಗ್ರಹಿಸಿ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಕಾರ್ಮಿಕರ ಸಂಘದಿಂದ ಧರಣಿ. ಏರಪೋರ್ಟ್, ಕೈಗಾರಿಕೆಗೆ 2200 ಎಕರೆ ಭೂಸ್ವಾಧೀನ ವಿರೋಧ. ಹಲಕುರಕಿ ಭೂಸ್ವಾಧೀನ ವಿರೋಧಿ ಸಂಘಟನೆಯಿಂದ ಧರಣಿ. ಕಾಲ್ಪನಿಕ ವೇತನ ನೀಡಲು ಒತ್ತಾಯಿಸಿ, ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿಂದ ಹೋರಾಟ. 16 ಸಾವಿರ ಪತ್ರಕರ್ತರಿಗೆ ಮೂಲಭೂತ ಸೌಕರ್ಯಕ್ಕೆ ಒತ್ತಾಯ. ಕರ್ನಾಟಕ ಕಾರ್ಯ‌ನಿರತ ಪತ್ರಕರ್ತರ ಧ್ವನಿ ಬೆಂಗಳೂರು ಸಂಘಟನೆಯಿಂದ ಹೋರಾಟ. ಆಶಾ ಕಾರ್ಯಕರ್ತರಿಗೆ ಮಾಸಿಕ 12 ಸಾವಿರ ವೇತನ ನೀಡಲು ಒತ್ತಾಯಿಸಿ ಧರಣಿ. ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದಿಂದ ಪ್ರತಿಭಟನೆ. ರೈತರ ಬೆಳೆ ಹಾನಿಗೆ ಪರಿಹಾರ ಮಂಜೂರು ಮಾಡಲು ಭಾರತೀಯ ಕಿಸಾನ್ ಸಭಾದಿಂದ ಹೋರಾಟ. ನಿಟ್ಟೂರಿನ ಎಸ್ಸಿ ,ಎಸ್ಟಿ ಸಮಾಜದ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ . ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಹೋರಾಟ. ಅಗ್ರಿ ಗೋಲ್ಡ್ ಕಂಪನಿ ವಂಚನೆ ಖಂಡಿಸಿ ಗ್ರಾಹಕರಿಂದ ಪ್ರತಿಭಟನೆ ನಡೆದಿತ್ತು. ಹೀಗೆ ಇನ್ನೂ ಹತ್ತು ಹಲವು ಸಂಘಟನೆಗಳಿಂದ ಪ್ರತಿಭಟನೆ, ಹೋರಾಟ ನಡೆದಿತ್ತು…

ಮುಂದಿನ ಅಧಿವೇಶನದಲ್ಲಿ ಹೋರಾಟಗಾರರಿಗೆ ಸ್ಪಂದಿಸುತ್ತಾ ಸರ್ಕಾರ

ಒಟ್ಟಾರೆ 9 ದಿನಗಳ ಕಾಲ ನಡೆದ ಈ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಜನರ ಪರವಾಗಿ ಧ್ವನಿಯಾಗಬೇಕಿತ್ತು. ಆದ್ರೆ ಕೇವಲ ನಾಮಕಾವಸ್ಥೆ ರೀತಿಯಲ್ಲಿ ಅಧಿವೇಶನ ಆಗಿದ್ದು, ಇದು ಯಾರ ಖುಷಿಗೆ ಅನ್ನೋದೇ ಜನರ ವಾದ ವಾಗಿದೆ. ಮುಂದಿನ ದಿನದಲ್ಲಾದ್ರೂ ಚಳಿಗಾಲದ ಅಧಿವೇಶನದಲ್ಲಿ ಉತ್ತರದ ಜನರ ಪರವಾಗಿ ಸರ್ಕಾರಗಳು ಕೆಲಸ ಮಾಡಬೇಕಿದೆ. ದೂರದ ಊರುಗಳಿಂದ ಬಂದು‌ ಹೋರಾಟ ಮಾಡುವವರಿಗೆ ಸೂಕ್ತ ಪರಿಹಾರ, ಬೇಡಿಕೆ ಈಡೇರಿಸುವ ಕೆಲಸ ಸರ್ಕಾರ ಮಾಡಲಿ ಎಂಬುದು ಎಲ್ಲರ ಹಕ್ಕೊತ್ತಾಯ…

ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ

Published On - 4:15 pm, Sat, 31 December 22