ಬೆಳಗಾವಿ: ನಮ್ಮ ದೇಶದಲ್ಲಿ ಗ್ರಹಣದ ಸುತ್ತ ಸಾಕಷ್ಟು ಆಚಾರ ಮತ್ತು ನಂಬಿಕೆಗಳಿದೆ. ಇವುಗಳಲ್ಲಿ ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದು ಎಂಬುದು ಸಹ ಒಂದು. ಆದರೆ, ಇದನ್ನು ಬಹಳಷ್ಟು ವಿಚಾರವಾದಿಗಳು ಒಪ್ಪಿಕೊಳ್ಳೋದಿಲ್ಲ.
ಹಾಗಾಗಿ ಇದರ ವಿರುದ್ಧ ಜನರಿಗೆ ಅರಿವು ಮೂಡಿಸಲು ಜಿಲ್ಲೆಯ ನೆಹರು ನಗರದಲ್ಲಿ ಇಂದು ಗ್ರಹಣ ಕಾಲದಲ್ಲಿ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ಅಯೋಜಿಸಲಾಗಿದ್ದ ಈ ಔತಣಕೂಟದಲ್ಲಿ ವೇದಿಕೆಯ ಸದಸ್ಯರಲ್ಲದೆ ಸಾಕಷ್ಟು ಜನ ಭಾಗಿಯಾಗಿ ಗ್ರಹಣ ಮೋಕ್ಷದ ಸಮಯದಲ್ಲಿ ಬಾಡೂಟವನ್ನ ಸವಿದರು. ಗ್ರಹಣಕಾಲದಲ್ಲಿ ಆಹಾರ ಸೇವಿಸಬಾರದು ಎಂಬ ಮೌಢ್ಯತ್ವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವೇದಿಕೆಯ ಸಂಚಾಲಕ ರವೀಂದ್ರ ನಾಯ್ಕರ್ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.