ಬೆಂಗಳೂರು: ಬೆಳಗಾವಿ (Belagavi) ಜಿಲ್ಲೆ ಸವದತ್ತಿ (Savadatti) ತಾಲೂಕಿನ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ (Renuka Yellamma Devi Temple) ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (CM Basavaraj Bommai) ವಿಧಾನಸೌದದಲ್ಲಿ ಶಾಸಕ ಆನಂದ್ ಮಾಮನಿ (Anand Mamani) ಮತ್ತು ದೇವಸ್ಥಾನದ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ವರದಿ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ. ವಿಧಾನಸೌಧದ ಮುಖ್ಯಮಂತ್ರಿ ಕೊಠಡಿಯಲ್ಲಿ ಸಭೆ ನಡೆದಿದ್ದು, ಅಂದಾಜು 26 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿದ್ದಾರೆ.
ಇದನ್ನು ಓದಿ: ಚಾಮುಂಡಿ ಬೆಟ್ಟಕ್ಕೆ ರೋಪ್ವೇ ಪ್ರಸ್ತಾವ ಕೈಬಿಟ್ಟ ಮೈಸೂರು ಜಿಲ್ಲಾಡಳಿತ
ಸಭೆಯಲ್ಲಿ ಕೆಲ ಸಲಹೆ ಸೂಚನೆ ನೀಡಿರುವ ಮುಖ್ಯಮಂತ್ರಿಗಳು ಸದ್ಯ ವಾಸ್ತವ್ಯಕ್ಕೆ 400 ಕೊಠಡಿಗಳಿದ್ದು,ಇನ್ನೂ 200 ಕೊಠಡಿ ಹೆಚ್ಚಿಸಿ, ವಸತಿ ಸಮುದಾಯದಗಳ ಕೆಳಗೆ ಅನ್ನದಾಸೋಹ ಕೇಂದ್ರ ತೆರೆಯಿರಿ. ಸ್ನಾನಗೃಹ, ಶೌಚ ಗೃಹ ನಿರ್ಮಾಣ ಮಾಡಿ. ದೇವಸ್ಥಾನದಲ್ಲಿ 2 ಪ್ರತ್ಯೇಕ ಸರತಿ ಸಾಲು ನಿರ್ಮಾಣ ಮಾಡಿ. ಅದರಲ್ಲಿ ಒಂದು ವಿಶೇಷ ದರ್ಶನಕ್ಕೆ ಸರತಿ ಸಾಲಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದ್ದಾರೆ.
ಫುಟ್‌ಪಾತ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ. ದೇವಸ್ಥಾನದ ಸುತ್ತಲಿನ 3 ಜಾಗಗಳಲ್ಲಿ ಪಾರ್ಕಿಂಗೆ ವ್ಯವಸ್ಥೆ ಮಾಡಿ. ವ್ಯಾಪಾರಿಗಳಿಗೆ ಅಂಗಡಿ ತೆರೆಯಲು ಸ್ಥಳಾವಕಾಶ ಮಾಡಿಕೊಡಿ. ದೇವಸ್ಥಾನದ ಸ್ವಚ್ಛತೆಗೆ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ನೇಮಕ ಮಾಡಿ ಎಂದು ಸೂಚಿಸಿದ್ದಾರೆ.
ಇದನ್ನು ಓದಿ: ಬೀದರ್ನಲ್ಲಿ ಸುರಿಯದ ಮಳೆರಾಯನನ್ನು ಸಂಪ್ರೀತಗೊಳಿಸಲು ಗೊಂಬೆಗಳ ಮದುವೆ ಮತ್ತು ಮೆರವಣಿಗೆ
ಈ ಸಂಬಂಧ ಜುಲೈ 20ರಂದು ಶಾಸಕ ಆನಂದ್ ಮಾಮನಿ ನೇತೃತ್ವದಲ್ಲಿ, ಮತ್ತೊಂದು ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ಅಂತಿಮ ವರದಿ ಸಲ್ಲಿಸಲಿದ್ದಾರೆ.