ಬೀದರ್ನಲ್ಲಿ ಸುರಿಯದ ಮಳೆರಾಯನನ್ನು ಸಂಪ್ರೀತಗೊಳಿಸಲು ಗೊಂಬೆಗಳ ಮದುವೆ ಮತ್ತು ಮೆರವಣಿಗೆ
ಮೀನಕೇರಾ ಗ್ರಾಮದ ನಿವಾಸಿಗಳು ಮಳೆರಾಯನಿಗೆ ‘ಸುರಿಯೋ’ ಅಂತ ಪ್ರಾರ್ಥಿಸಿ ಗೊಂಬೆಗಳ ಮದುವೆ ಶಾಸ್ತ್ರ ನೆರವೇರಿಸಿದರು, ಮತ್ತು ಊರೆಲ್ಲ ಗೊಂಬೆಗಳ ಮೆರವಣಿಗೆ ಮಾಡಿದರು. ನಂತರ ಗ್ರಾಮಸ್ಥರೆಲ್ಲ ಸೇರಿ ಔತಣ ಏರ್ಪಡಿಸಿಕೊಂಡರು.
ಬೀದರ್ನಲ್ಲಿ ರೈತಾಪಿ ಸಮುದಾಯ (farming community) ಕೊರತೆ ಮಳೆಯಿಂದಾಗಿ ಕಂಗಾಲಾಗಿದ್ದಾರೆ. ಕಳೆದ ವಾರ ಜಿಲ್ಲ್ಲೆಯ ಹುಮನಾಬಾದ್ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರು ತಮ್ಮ ಹೊಲ್ಲದಲ್ಲಿ ಬಾರೋ ಬಾರೋ ಮಳೆರಾಯ ಅಂತ ಡ್ಯಾನ್ಸ್ ಮಾಡಿದ್ದನ್ನು ನಾವು ತೋರಿಸಿದೆವು. ಮಂಗಳವಾರ ಜಿಲ್ಲೆಯ ಚಿಟಗುಪ್ಪಾ (Chitguppa) ತಾಲ್ಲೂಕಿನ ಮೀನಕೇರಾ ಗ್ರಾಮದ ನಿವಾಸಿಗಳು ಮಳೆರಾಯನಿಗೆ ‘ಸುರಿಯೋ’ ಅಂತ ಪ್ರಾರ್ಥಿಸಿ ಗೊಂಬೆಗಳ ಮದುವೆ ಶಾಸ್ತ್ರ ನೆರವೇರಿಸಿದರು, ಮತ್ತು ಊರೆಲ್ಲ ಗೊಂಬೆಗಳ ಮೆರವಣಿಗೆ (procession) ಮಾಡಿದರು. ನಂತರ ಗ್ರಾಮಸ್ಥರೆಲ್ಲ ಸೇರಿ ಔತಣ ಏರ್ಪಡಿಸಿಕೊಂಡರು. ಅವರೆಲ್ಲ ಬಿತ್ತನೆ ಕಾರ್ಯ ಮುಗಿಸಿ ಕಾತುರತೆಯಿಂದ ಮಳೆಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: Viral Video: ನೀರು ತುಂಬಿದ ರಸ್ತೆ ಗುಂಡಿಯಲ್ಲಿ ಕುರ್ಚಿ ಹಾಕಿ ಕುಳಿತು ಹರಟೆ ಹೊಡೆದ ಜನ; ವಿಡಿಯೋ ವೈರಲ್
Latest Videos