Viral Video: ನೀರು ತುಂಬಿದ ರಸ್ತೆ ಗುಂಡಿಯಲ್ಲಿ ಕುರ್ಚಿ ಹಾಕಿ ಕುಳಿತು ಹರಟೆ ಹೊಡೆದ ಜನ; ವಿಡಿಯೋ ವೈರಲ್
ಕೊಳಚೆ ನೀರು ತುಂಬಿರುವ ರಸ್ತೆ ಗುಂಡಿಯಲ್ಲಿ ಗಿಡವನ್ನು ನೆಟ್ಟು ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮಧ್ಯಪ್ರದೇಶದ ರಸ್ತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ಮಳೆಯ ಆರ್ಭಟ (Heavy Rainfall) ಹೆಚ್ಚಾಗಿದೆ. ಮಧ್ಯಪ್ರದೇಶದಲ್ಲೂ ಮಳೆಯ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದ ಮಧ್ಯಪ್ರದೇಶದಲ್ಲಿ ರಸ್ತೆಗಳ ಹೊಂಡದಲ್ಲಿ (Madhya Pradesh Potholes) ನೀರು ತುಂಬಿ, ಜನರು ಓಡಾಡಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಚೇರ್ಗಳನ್ನು ಹಾಕಿ ಕುಳಿತುಕೊಂಡು, ಕುಡಿಯುತ್ತಾ, ಹರಟೆ ಹೊಡೆಯುತ್ತಾ ಇರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ಮಳೆ ಶುರುವಾಗುವ ಮೊದಲೇ ರಸ್ತೆಗಳನ್ನು ರಿಪೇರಿ ಮಾಡಬೇಕಾದುದು ಸ್ಥಳೀಯ ಸಂಸ್ಥೆ ಮತ್ತು ಸರ್ಕಾರಗಳ ಜವಾಬ್ದಾರಿ. ಕಳಪೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ರಸ್ತೆಗಳ ತುಂಬ ಹೊಂಡಗಳು ಉಂಟಾಗುತ್ತವೆ. ಈ ಹೊಂಡಗಳಲ್ಲಿ ನಿಂತ ಮಳೆ ನೀರು ಹಾಗೂ ಚರಂಡಿಯ ಕೊಳಚೆ ನೀರಿನಲ್ಲೇ ಕುರ್ಚಿ ಹಾಕಿಕೊಂಡು ಕುಳಿತಿರು ಜನರು ಆ ಕೆಸರು ನೀರಿನಲ್ಲೇ ಕುಳಿತು ಹರಟೆ ಹೊಡೆಯುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
अगर आप ज़िंदादिल हैं तो आपको ईश्वर के अलावा कोई कष्ट नहीं दे सकता। नगर निगम या सरकार को कोसना छोड़िए। अपनी पॉज़िटिवीटी के ‘बीच’ जीवन का आनंद लीजिए।
सड़क के गड्ढे को बीच ? बनाने की ये प्रतिभा मध्य प्रदेश के लोगों ने दिखाई है। ?
— Umashankar Singh उमाशंकर सिंह (@umashankarsingh) July 4, 2022
ಆ ಕೊಳಚೆ ನೀರಿನ ಹೊಂಡದಲ್ಲಿ ಗಿಡವನ್ನು ನೆಟ್ಟು ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮಧ್ಯಪ್ರದೇಶದ ರಸ್ತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ.