Shocking Video: ಪಟಾಕಿ ಹಚ್ಚಿ ಗೆಳೆಯರ ಸಂಭ್ರಮಾಚರಣೆ ವೇಳೆ ನಡೆಯಿತು ಶಾಕಿಂಗ್ ಘಟನೆ; ವಿಡಿಯೋ ವೈರಲ್
ಪುರುಷರು ಪಟಾಕಿ ಹಚ್ಚಲು ಪ್ರಯತ್ನಿಸುತ್ತಿದ್ದರೆ ಮಹಿಳೆಯರು ಮಕ್ಕಳನ್ನು ಆಡಿಸಿಕೊಂಡು ಅಲ್ಲೇ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಏನಾದರೂ ಖುಷಿಯ ಸಂದರ್ಭದಲ್ಲಿ ಪಟಾಕಿ ಹಚ್ಚಿ, ಸಂಭ್ರಮಿಸುವುದು ರೂಢಿ. ಪಟಾಕಿ ಸಿಡಿಸಿದಾಗ ಹಬ್ಬದ ವಾತಾವರಣ ಉಂಟಾಗುತ್ತದೆ. ಆದರೆ, ಪಟಾಕಿಗಳೊಂದಿಗೆ ಸಂಭ್ರಮಾಚರಣೆ ಮಾಡುವ ಜನರು ಅವುಗಳನ್ನು ಸಿಡಿಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಕುಟುಂಬದ ಸ್ನೇಹಿತರ ಗುಂಪು ಪಟಾಕಿ ಹಾರಿಸಿ ಸಂಭ್ರಮಿಸುವಾಗ ಭಾರೀ ಎಡವಟ್ಟೊಂದು ಘಟಿಸಿದೆ.
ರೆಡ್ಡಿಟ್‌ನಲ್ಲಿ “ಡ್ಯಾಮ್ ಗುಡ್ ಫಿನಾಲೆ” ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 31 ಸೆಕೆಂಡ್‌ಗಳ ವಿಡಿಯೋದಲ್ಲಿ ಜನರ ಗುಂಪು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸುತ್ತಿರುವುದನ್ನು ನೋಡಬಹುದು. ಪುರುಷರು ಪಟಾಕಿ ಹಚ್ಚಲು ಪ್ರಯತ್ನಿಸುತ್ತಿದ್ದರೆ ಮಹಿಳೆಯರು ಮಕ್ಕಳನ್ನು ಆಡಿಸಿಕೊಂಡು ಅಲ್ಲೇ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಅವರಲ್ಲಿ ಒಬ್ಬ ವ್ಯಕ್ತಿಯು ತನ್ನೊಂದಿಗೆ ತಂದ ಪಟಾಕಿಗಳಿರುವ ದೊಡ್ಡ ಪೆಟ್ಟಿಗೆಯಿಂದ ಸುಮಾರು 10 ಅಡಿ ದೂರದಲ್ಲಿ ರಾಕೆಟ್ ಪಟಾಕಿ ಹಚ್ಚುತ್ತಾನೆ. ಪಕ್ಕದಲ್ಲಿ ನಿಲ್ಲಿಸಿದ ಕಾರಿನ ಕೆಳಗೆ ಪಟಾಕಿಯ ಬಾಕ್ಸ್ ಇಡಲಾಗಿತ್ತು. ಒಂದು ಪಟಾಕಿ ಹಚ್ಚಿದಾಗ ಅದರ ಕಿಡಿ ಪಕ್ಕದಲ್ಲೇ ಇದ್ದ ಮಹಿಳೆಯರು ಮತ್ತು ಮಕ್ಕಳ ಮೇಲೆ ಹಾರಿತು. ಆ ಕಿಡಿ ಕಾರಿನ ಬಳಿಯಿದ್ದ ಪಟಾಕಿ ಪೆಟ್ಟಿಗೆಯ ಮೇಲೆ ಹಾರಿ ಆ ಪಟಾಕಿಗಳೆಲ್ಲ ಒಮ್ಮೆಲೇ ಸ್ಫೋಟಗೊಂಡವು.
ಇದನ್ನೂ ಓದಿ: Viral Video: ತಡವಾಗಿ ಬಂದ ಶಿಕ್ಷಕಿಗೆ ಚಪ್ಪಲಿಯಲ್ಲಿ ಥಳಿಸಿದ ಪ್ರಿನ್ಸಿಪಾಲ್; ಶಾಕಿಂಗ್ ವಿಡಿಯೋ ವೈರಲ್
ಆಗ ಪಟಾಕಿ ಪೆಟ್ಟಿಗೆಗಳ ಸುತ್ತಲೂ ನಿಂತಿರುವ ಮಕ್ಕಳು ದೂರ ಜಿಗಿಯುತ್ತಾರೆ. ಮಹಿಳೆಯರು ತಕ್ಷಣವೇ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಓಡಿ ಹೋಗುತ್ತಾರೆ. ಯಾವುದೇ ಮುನ್ನೆಚ್ಚರಿಕೆಯಿಲ್ಲದೆ ಪಟಾಕಿ ಸಿಡಿಸಿ, ಅನಾಹುತ ಮಾಡಿದವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ 10,000ಕ್ಕೂ ಹೆಚ್ಚು ಲೈಕ್ಗಳು ಮತ್ತು ಸುಮಾರು 600 ಕಾಮೆಂಟ್‌ಗಳನ್ನು ಪಡೆದಿದೆ.