Viral Video: ಮ್ಯಾಂಗ್ರೋವ್ ಕಾಡುಗಳ ಮರುಸ್ಥಾಪಿಸುವ ಫಿಶ್‌ಬೋನ್ ಚಾನೆಲ್ ಪ್ಲಾಂಟೇಶನ್ ವಿಧಾನದ ವಿಡಿಯೋ ವೈರಲ್
ಕ್ಷೀಣಿಸುತ್ತಿರುವ ಮ್ಯಾಂಗ್ರೋವ್ ಕಾಡುಗಳನ್ನು ಮರುಸ್ಥಾಪಿಸುವ ಫಿಶ್‌ಬೋನ್ ಚಾನೆಲ್ ಪ್ಲಾಂಟೇಶನ್ ವಿಧಾನವನ್ನು ಅಳವಡಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
ಬೆಳೆಯುತ್ತಿರುವ ಕೈಗಾರಿಕೀಕರಣ ಮತ್ತು ಹವಾಮಾನ ಬದಲಾವಣೆಯ ನಡುವೆ ಹಾನಿಗೊಳಗಾಗುತ್ತಿರುವ ಭಾರತದಲ್ಲಿನ ಮ್ಯಾಂಗ್ರೋವ್ ಕಾಡುಗಳ ಸೂಕ್ಷ್ಮ ಪರಿಸರವನ್ನು ಕೆಲವೊಂದು ವಿಧಾನಗಳ ಮೂಲಕಜ ಮರುಸ್ಥಾಪಿಸಲಾಗುತ್ತಿದೆ. ಕ್ಷೀಣಿಸುತ್ತಿರುವ ಮ್ಯಾಂಗ್ರೋವ್‌ಗಳನ್ನು ಮರುಸ್ಥಾಪಿಸುವ ಫಿಶ್‌ಬೋನ್ ಚಾನೆಲ್ ಪ್ಲಾಂಟೇಶನ್ ವಿಧಾನವನ್ನು ಅಳವಡಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ, 10ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Viral Video: ಈ ರೀತಿಯಾಗಿ ಹಣ್ಣು ಮಾರಾಟ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ..?
ವೀಡಿಯೊವನ್ನು ಹಂಚಿಕೊಳ್ಳುವಾಗ, ಸುಸಂತ ನಂದಾ ಅವರು, “ಭಿತರ್ಕಾನಿಕಾದಲ್ಲಿನ ತೊರೆಗಳ ನೀರನ್ನು ಮೀನಿನ ಮೂಳೆಯ ಆಕಾರದ ಕಾಲುವೆಗಳ ಮೂಲಕ ಮ್ಯಾಂಗ್ರೋವ್‌ಗಳ ಅಂತರಕ್ಕೆ ತಿರುಗಿಸಲಾಗುತ್ತಿದೆ. ಇದರಿಂದಾಗಿ ಲವಣಯುಕ್ತ ಬಂಜರು ಭೂಮಿಯನ್ನು ನೆಟ್ಟ ಮ್ಯಾಂಗ್ರೋವ್ ಜಾತಿಗಳನ್ನು ಬೆಂಬಲಿಸಲು ಫಲವತ್ತಾಗುತ್ತದೆ. ಆಕಾರವು ಪ್ರದೇಶದ ಪ್ರತಿಯೊಂದು ಮೂಲೆಯನ್ನು ತಲುಪಲು ಅನುವು ಮಾಡಿಕೊಡುತ್ತದೆ” ಎಂದು ಬರೆದುಕೊಂಡಿದ್ದಾರೆ.
The water from creeks in Bhitarkanika are being diverted to gaps in mangroves through fish bone shaped channels, so that the saline barren land becomes fertile to support planted mangrove species.The shape allows the water to reach every nook and corner of the area.VC: J D Pati pic.twitter.com/y197bH7XAH
— Susanta Nanda IFS (@susantananda3) July 5, 2022
ಗುಜರಾತ್ ಅರಣ್ಯ ಇಲಾಖೆಯ ಪ್ರಕಾರ, ನಿಯಮಿತವಾಗಿ ಉಬ್ಬರವಿಳಿತದ ಪ್ರವಾಹವನ್ನು ಪಡೆಯದ ಪ್ರದೇಶಗಳನ್ನು ಕೃತಕವಾಗಿ ಮುಳುಗಿಸಲು ಫಿಶ್‌ಬೋನ್ ಚಾನಲ್ ಪ್ಲಾಂಟೇಶನ್ ತಂತ್ರವನ್ನು ಬಳಸಲಾಗುತ್ತದೆ. ಉಬ್ಬರವಿಳಿತದ ವಲಯಗಳ ಬಳಿ ಒಣಗಿದ ಜೌಗು ಪ್ರದೇಶಗಳನ್ನು ಪ್ರವಾಹ ಮಾಡುವ ಮೂಲಕ ಹೊಸ ಮ್ಯಾಂಗ್ರೋವ್‌ಗಳನ್ನು ಮರು ಅರಣ್ಯಗೊಳಿಸಬಹುದು.
ಇದನ್ನೂ ಓದಿ: Viral Video: ನೀರು ತುಂಬಿದ ರಸ್ತೆ ಗುಂಡಿಯಲ್ಲಿ ಕುರ್ಚಿ ಹಾಕಿ ಕುಳಿತು ಹರಟೆ ಹೊಡೆದ ಜನ; ವಿಡಿಯೋ ವೈರಲ್
ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಸ್ಟಡೀಸ್‌ನಲ್ಲಿ ಪ್ರಕಟವಾದ ವರದಿ ಹೇಳುವಂತೆ, ಆಂಧ್ರಪ್ರದೇಶದ ಕೃಷ್ಣಾ ವನ್ಯಜೀವಿ ಅಭಯಾರಣ್ಯದಲ್ಲಿನ ಮ್ಯಾಂಗ್ರೋವ್ ಹೊದಿಕೆಯನ್ನು ಪುನರುಜ್ಜೀವನಗೊಳಿಸಲು ಫಿಶ್‌ಬೋನ್ ಚಾನೆಲ್ ಪ್ಲಾಂಟೇಶನ್ ತಂತ್ರವು ಸಹಾಯ ಮಾಡಿದೆ.
ನವೀನ ಸಂರಕ್ಷಣಾ ತಂತ್ರದ ಕುರಿತು ನಂದಾ ಅವರು ಹಂಚಿಕೊಂಡಿರುವ ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬೆಳಕೆದಾರರೊಬ್ಬರು ಪ್ರತಿಕ್ರಿಯಿಸಿ, ”ವರದಿಗಳ ಪ್ರಕಾರ, ಮ್ಯಾಂಗ್ರೋವ್‌ಗಳು ಅಪಾಯಕಾರಿ ದರದಲ್ಲಿ ಕಡಿಮೆಯಾಗುತ್ತಿವೆ. ಆದ್ದರಿಂದ ಮ್ಯಾಂಗ್ರೋವ್ ತೋಟವನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮವು ಮೆಚ್ಚುಗೆಗೆ ಅರ್ಹವಾಗಿದೆ” ಎಂದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಉತ್ತಮ ಪರಿಕಲ್ಪನೆ. ಮ್ಯಾಂಗ್ರೋವ್‌ಗಳನ್ನು ಸಂರಕ್ಷಿಸಲು ಸಂಪೂರ್ಣವಾಗಿ ಅವಶ್ಯಕ” ಎಂದಿದ್ದಾರೆ.
ಇದನ್ನೂ ಓದಿ: Viral Video: ಬ್ಯಾಡ್ಮಿಂಟನ್ ಆಡಿ ಖುಷಿಪಟ್ಟ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್
Published On - 10:20 am, Thu, 7 July 22