Viral: ನೀವು ಅನಿವಾಸಿ ಭಾರತೀಯರಾ? ನೆಟ್ಟಿಗರ ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾ ಅವರ ಉತ್ತರ ಏನು ಗೊತ್ತಾ?

ಆನಂದ್ ಮಹೀಂದ್ರಾ ಅವರ ಇತ್ತೀಚಿನ ಪೋಸ್ಟ್ ಒಂದಕ್ಕೆ ನೆಟ್ಟಿಗರು ನೀವು ಅನಿವಾಸಿ ಭಾರತೀಯರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆನಂದ್ ಮಹೀಂದ್ರಾ ಅವರು ನೀಡಿದ ಉತ್ತರ ಎಲ್ಲರ ಗಮನಸೆಳೆಯುತ್ತಿದೆ. ಆನಂದ್ ಮಹೀಂದ್ರಾ ಅವರು ಕೊಟ್ಟ ಉತ್ತರವೇನು ಗೊತ್ತಾ? ಇಲ್ಲಿದೆ ನೋಡಿ

Viral: ನೀವು ಅನಿವಾಸಿ ಭಾರತೀಯರಾ? ನೆಟ್ಟಿಗರ ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾ ಅವರ ಉತ್ತರ ಏನು ಗೊತ್ತಾ?
ಆನಂದ್ ಮಹೀಂದ್ರಾ
TV9kannada Web Team

| Edited By: Rakesh Nayak

Jul 07, 2022 | 11:49 AM

ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ ಮತ್ತು ತಮ್ಮ ಫಾಲೋವರ್​ಗಳ ಜೀವನಕ್ಕೆ ಸ್ಪೂರ್ತಿ ತುಂಬುವ ವಿಡಿಯೋಗಳನ್ನು, ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಅದರಂತೆ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದಕ್ಕೆ ಕೆಲವು ನೆಟ್ಟಿಗರು ನೀವು ಅನಿವಾಸಿ ಭಾರತೀಯರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆನಂದ್ ಮಹೀಂದ್ರಾ ಅವರು ನೀಡಿದ ಉತ್ತರ ಇಂಟರ್ನೆಟ್​ ಬಳಕೆದಾರರ ಗಮನಸೆಳೆಯುತ್ತಿದೆ.

ಇದನ್ನೂ ಓದಿ: Viral Video: ಇಂಗ್ಲೆಂಡ್ ರಾಜಕೀಯ ಬಿಕ್ಕಟ್ಟು: ನೇರಪ್ರಸಾರದ ವೇಳೆ ಮೇಜಿನ ಮೇಲೆ ಕಾಲಿಟ್ಟು ಆರಾಮವಾಗಿ ಕುಳಿತ ಟಿವಿ ನಿರೂಪಕನ ವಿಡಿಯೋ ವೈರಲ್

ಜುಲೈ 4 ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆದ ಆಚರಣೆಗಳ ಚಿತ್ರಗಳನ್ನು ಒಳಗೊಂಡಿರುವ ವಿಡಿಯೋ, ಫೋಟೋಗಳನ್ನು ಆನಂದ್ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. “ಮ್ಯಾನ್‌ಹ್ಯಾಟನ್ 4ನೇ ಜುಲೈ ಸ್ಕೈಲೈನ್” ಎಂದು ಪೋಸ್ಟ್​​ಗೆ ಶೀರ್ಷಿಕೆ ನೀಡಿದ್ದರು. ಮ್ಯಾನ್ಹ್ಯಾಟನ್ ಸುತ್ತಲೂ ನಡೆದ ಆಚರಣೆಗಳನ್ನು ತೋರಿಸುವ ವಿಡಿಯೋ, ಫೋಟೋ ಇದಾಗಿದೆ.

ಅವರ ಒಂದು ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಬಳಕೆದಾರರು ಉದ್ಯಮಿಗೆ “ನೀವು ಅನಿವಾಸಿ ಭಾರತೀಯರಾ (NRI)?” ಎಂದು ಪ್ರಶ್ನಿಸಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಅನೇಕ ಬಳಕೆದಾರರು ಇಂತಹ ಪ್ರಶ್ನೆಗಳಿಗೆ ಗಮನ ಕೊಡಬೇಡಿ ಎಂದು ಮಹೀಂದ್ರಾ ಅವರ ಜೊತೆ ಮನವಿ ಮಾಡಿದ್ದಾರೆ. ಅದಾಗ್ಯೂ ಆನಂದ್ ಮಹೀಂದ್ರಾ ಅವರು ಬಳಕೆದಾರರ ಪ್ರಶ್ನೆಗೆ ಸಖತ್ ಆಗಿಯೇ ಉತ್ತರವನ್ನು ನೀಡಿದ್ದಾರೆ.

ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿದ ಉದ್ಯಮಿ, ”ನ್ಯೂಯಾರ್ಕ್‌ನಲ್ಲಿರುವ ಕುಟುಂಬವನ್ನು ಭೇಟಿ ಮಾಡುತ್ತಿದ್ದೇನೆ. ಹಾಗಾಗಿ ನಾನು HRI. ಹೃದಯ (ಯಾವಾಗಲೂ) ಭಾರತದಲ್ಲೇ ನೆಲೆಸಿದೆ” ಎಂದು ಹೇಳಿದ್ದಾರೆ. ಈ ಟ್ವೀಟ್ ನೆಟ್ಟಿಗರ ಕಣ್ಣಿಗೆ ಬೀಳುತ್ತಿದ್ದಂತೆ ಬೆಂಬಲವಾಗಿ ಮಾತನಾಡಿದ್ದಾರೆ. ಬಳಕೆದಾರರೊಬ್ಬರು, “ಇದು ಒಳ್ಳೆಯದಾಗಿದೆ… ನಾನು ಎಚ್‌ಆರ್‌ಐ ಆಗಿದ್ದೇನೆ, ಇದನ್ನು ನಾಚಿಕೆಯಿಲ್ಲದೆ ಹೇಳುತ್ತೇನೆ” ಎಂದು ಪ್ರತಿಕ್ರಿಯಿಸಿದ್ದೇನೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada