Viral Video: ಇಂಗ್ಲೆಂಡ್ ರಾಜಕೀಯ ಬಿಕ್ಕಟ್ಟು: ನೇರಪ್ರಸಾರದ ವೇಳೆ ಮೇಜಿನ ಮೇಲೆ ಕಾಲಿಟ್ಟು ಆರಾಮವಾಗಿ ಕುಳಿತ ಟಿವಿ ನಿರೂಪಕನ ವಿಡಿಯೋ ವೈರಲ್

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಂಪುಟದ ಮಂತ್ರಿಗಳು ರಾಜೀನಾಮೆ ನೀಡಿದ ಬಗ್ಗೆ ನೇರಪ್ರಸಾರದ ವರದಿ ವೇಳೆ ಬಿಬಿಸಿ ನಿರೂಪಕರೊಬ್ಬರು ತಮ್ಮ ಕಾಲುಗಳನ್ನು ಮೇಜಿನ ಮೇಲೆ ಇಟ್ಟು ಮೊಬೈಲ್ ಒತ್ತುತ್ತಿರುವ ಪ್ರಸಂಗವೊಂದು ನಡೆದಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ಇಂಗ್ಲೆಂಡ್ ರಾಜಕೀಯ ಬಿಕ್ಕಟ್ಟು: ನೇರಪ್ರಸಾರದ ವೇಳೆ ಮೇಜಿನ ಮೇಲೆ ಕಾಲಿಟ್ಟು ಆರಾಮವಾಗಿ ಕುಳಿತ ಟಿವಿ ನಿರೂಪಕನ ವಿಡಿಯೋ ವೈರಲ್
ಬಿಬಿಸಿ ನಿರೂಪಕ
Follow us
| Updated By: Rakesh Nayak Manchi

Updated on:Jul 07, 2022 | 11:06 AM

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ಮಂತ್ರಿಗಳು ಸಾಮೂಹಿಕ ರಾಜೀನಾಮೆ ನೀಡಿದ ನಂತರ ಅವರ ಕುರ್ಚಿ ಅಲುಗಾಡಲು ಆರಂಭಿಸಿದೆ. ಈ ವಿಚಾರವನ್ನು ನೇರಪ್ರಸಾರ ಮಾಡುವ ವೇಳೆ ಬಿಬಿಸಿ ನಿರೂಪಕ ಟಿಮ್ ವಿಲ್‌ಕಾಕ್ಸ್ ಅವರು ತಮ್ಮ ಕಾಲುಗಳನ್ನು ಮೇಜಿನ ಮೇಲೆ ಇಟ್ಟು ಮೊಬೈಲ್ ಒತ್ತುತ್ತಿರುವ ಪ್ರಸಂಗವೊಂದು ನಡೆದಿದೆ. ಈ ಪ್ರಮಾದವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರೆ ನೆಟ್ಟಿಗರ ಬಾಯಿಗೆ ಮನರಂಜನೆಯ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ: Viral Video: ಮ್ಯಾಂಗ್ರೋವ್ ಕಾಡುಗಳ ಮರುಸ್ಥಾಪಿಸುವ ಫಿಶ್​ಬೋನ್ ಚಾನೆಲ್ ಪ್ಲಾಂಟೇಶನ್ ವಿಧಾನದ ವಿಡಿಯೋ ವೈರಲ್

ಬಿಬಿಸಿ ವರದಿಗಾರ ರಾಸ್ ಅಟ್ಕಿನ್ಸ್ ಡೌನಿಂಗ್ ಸ್ಟ್ರೀಟ್‌ನಿಂದ  ಕ್ಯಾಬಿನೆಟ್ ಮಂತ್ರಿಗಳ ಸಂಖ್ಯೆ 10ಕ್ಕೆ ಇಳಿದ ಬಗ್ಗೆ ವರದಿ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಟುಡಿಯೋ ಕ್ಯಾಮರ ಆನ್​ ಆಗಿದೆ. ಈ ವೇಳೆ ನಿರೂಪಕ ಟಿಮ್ ವಿಲ್‌ಕಾಕ್ಸ್ ಅವರು ಕನ್ನಡಕವನ್ನು ಹಾಕಿಕೊಂಡು ತಮ್ಮ ಎರಡೂ ಕಾಲುಗಳನ್ನು ಮೇಜಿನ ಮೇಲೆ ಇಟ್ಟು ಮೊಬೈಲ್ ಒತ್ತುತ್ತಾ ಲೈವ್​ ಫೀಡ್​ ವೀಕ್ಷಿಸುತ್ತಿದ್ದರು. ಈ ವೇಳೆ ತಾನು ಕೂಡ ಪ್ರಸಾರವಾಗುತ್ತಿದ್ದೇನೆ ಎಂದು ಅರಿತ ಟಿಮ್ ವಿಲ್​ಕಾಕ್ಸ್, ಕನ್ನಡಕ ತೆಗೆದು ಕಾಲುಗಳನ್ನು ಮೇಜಿನ ಮೇಲಿಂದ ಕೆಳಗಿಳಿಸಿದ್ದಾರೆ.

ಮುಜುಗರದ ಕ್ಷಣವು ಕೆಲವೇ ಸೆಕೆಂಡುಗಳ ಕಾಲ ನಡೆಯಿತಾದರೂ ಹದ್ದಿನ ಕಣ್ಣಿನ ವೀಕ್ಷಕರಿಗೆ ದೃಶ್ಯವನ್ನು ಸೆರೆಹಿಡಿಯಲು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಇದು ಸಾಕಾಗಿತ್ತು. ನಿರೂಪಕ ಟಿಮ್ ಅವರ ಪ್ರಮಾದದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಸ್ಯವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ದಿ ಟೈಮ್ಸ್‌ ವರದಿಯ ಪ್ರಕಾರ,  ರಾಜೀನಾಮೆ ನೀಡುವಂತೆ ತಮ್ಮದೇ ಸಚಿವ ಸಂಪುಟದ ಒಳಗಿನ ಕರೆಗಳನ್ನು ಬೋರಿಸ್ ಜಾನ್ಸನ್ ತಿರಸ್ಕರಿಸಿದ್ದಾರೆ. ಇದು ರಾಜಕೀಯ ಅಸ್ಥಿರತೆಗೆ ಕಾರಣವಾಗಬಹುದು ಎಂದು ಹೇಳಿದೆ. ”ಕಷ್ಟಕರ ಸಂದರ್ಭಗಳಲ್ಲಿ ಪ್ರಧಾನ ಮಂತ್ರಿಯ ಕೆಲಸ ಮುಂದುವರಿಯುವುದು ಮತ್ತು ಅದನ್ನೇ ನಾನು ಮಾಡಲಿದ್ದೇನೆ” ಎಂದು ಜಾನ್ಸನ್ ಬುಧವಾರ ಶಾಸಕರಿಗೆ ಹೇಳಿದ್ದಾರೆ. “ನಾವು ಜನಾದೇಶವನ್ನು ನೀಡಲಿದ್ದೇವೆ ಮತ್ತು ಮತ್ತೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ, ಇಬ್ಬರು ಪ್ರಮುಖ ಮಂತ್ರಿಗಳಾದ ಸಾಜಿದ್ ಜಾವಿದ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿಯ ರಾಜ್ಯ ಕಾರ್ಯದರ್ಶಿ ಮತ್ತು ಖಜಾನೆಯ ಕುಲಪತಿ ರಿಷಿ ಸುನಕ್ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು.

ಇದನ್ನೂ ಓದಿ: Viral Video: ಈ ರೀತಿಯಾಗಿ ಹಣ್ಣು ಮಾರಾಟ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ..?

Published On - 11:06 am, Thu, 7 July 22

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’