AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ರೀತಿಯಾಗಿ ಹಣ್ಣು ಮಾರಾಟ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ..?

ಕೆಲ ತಿಂಗಳ ಹಿಂದೆ ದ್ರಾಕ್ಷಿ ಮಾರುವವರ ವಿಡಿಯೋ ಕೂಡ ವೈರಲ್ ಆಗಿತ್ತು. ವಿಡಿಯೋದಲ್ಲಿ ದ್ರಾಕ್ಷಿ ಮಾರಾಟಗಾರನು ತನ್ನ ದ್ರಾಕ್ಷಿಯನ್ನು ಮಾರಲು ಜಿಂಗಲ್ ಹಾಡುವುದನ್ನು ಕೇಳಬಹುದು.

Viral Video: ಈ ರೀತಿಯಾಗಿ ಹಣ್ಣು ಮಾರಾಟ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ..?
ವಿಲಕ್ಷಣ ರೀತಿಯಲ್ಲಿ ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾರಿ.
TV9 Web
| Edited By: |

Updated on: Jul 06, 2022 | 3:58 PM

Share

Viral Video: ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಆಗಾಗ ಕೆಲವು ತಮಾಷೆಯ ಮತ್ತು ಅತ್ಯಂತ ವಿಲಕ್ಷಣವಾದ ವಿಡಿಯೋಗಳನ್ನು ನೋಡುತ್ತೇವೆ. ಇದು ನೆಟಿಗರನ್ನು ನಗೆ ಪಾಟಲಿಗೆ ತಳ್ಳುವುದುಂಟು. ಈಗ ಅದೇ ವಿಲಕ್ಷಣ ರೀತಿಯಲ್ಲಿ ಹಣ್ಣು ಮಾರಾಟಗಾರನ ವಿಡಿಯೋ ಒಂದು ಕಾಣಿಸಿಕೊಂಡಿದೆ. ಅದರಲ್ಲಿ ಅವನು ಹಣ್ಣುಗಳನ್ನು ಅತ್ಯಂತ ವಿಶಿಷ್ಟ ಮತ್ತು ವಿಲಕ್ಷಣ ರೀತಿಯಲ್ಲಿ ಮಾರಾಟ ಮಾಡುವುದರೊಂದಿಗೆ ಹಣ್ಣುಗಳನ್ನು ಅಷ್ಟೇ ವೆರೈಟಿಯಾಗಿ ಹಣ್ಣುಗಳನ್ನು ಕತ್ತರಿಸುತ್ತಾನೆ. ಹಣ್ಣು ಮಾರಾಟಗಾರ ಕಿರುಚುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ನೆಟಿಗರು ಆತನ ಉತ್ಸಾಹ ಮತ್ತು ವಿಲಕ್ಷಣ ರೀತಿಯ ಮಾರಾಟವನ್ನು ನಿಜವಾಗಿಯೂ ಪ್ರಶಂಸಿಸುತ್ತಿದ್ದಾರೆ.

ಈ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಕೌಸಿನ್ ಹಂಚಿಕೊಂಡಿದ್ದು, ನನ್ನ ಹಣ್ಣಿನ ವ್ಯಾಪಾರಿಗೆ ಹಣ್ಣುಗಳ ಬಗ್ಗೆ ಇಷ್ಟವಿಲ್ಲದಿದ್ದರೆ ನನಗೆ ಅದು ಬೇಡ ಎಂಬ ಶೀರ್ಷಿಕೆಯನ್ನು ಸಹ ನೀಡಲಾಗಿದೆ. ವಿಡಿಯೋ 72 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಮತ್ತು 1480 ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಹಣ್ಣು ಮಾರಾಟಗಾರನ ತಂತ್ರಗಾರಿಕೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಬ್ಬ ವ್ಯಕ್ತಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಬೇಕೇಂದರೆ ಈ ರೀತಿಯಾಗಿ ಕಿರುಚಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ; ‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಮೂಲಕ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ಕೊಡಲಿರುವ ನಟಿ ಪ್ರೇಮಾ

ಕೆಲವು ನೆಟಿಗರು ಟಿಜಿಎಸ್ ವ್ಯಕ್ತಿಯನ್ನು ಭೇಟಿಯಾದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ವ್ಯಕ್ತಪಡಿಸಿದ್ದಾರೆ. ನನಗೆ ಆತನ ಉತ್ಸಾಹ ಇಷ್ಟವಾಯಿತು. ಆದರೆ ನಾನು ಹಣ್ಣನ್ನು ಬೇರೆಡೆ ಖರೀದಿಸುತ್ತೇನೆ ಎಂದು ಒಬ್ಬ ಬರೆದುಕೊಂಡರೆ, ಇನ್ನೊಬ್ಬ ವ್ಯಕ್ತಿ ತಾನು ತರಕಾರಿಗಳನ್ನು ಮಾರಾಟ ಮಾಡುತ್ತೀರಾ ಎಂದು ಕೇಳಿದ್ದಾನೆ. ಕೆಲ ತಿಂಗಳ ಹಿಂದೆ ದ್ರಾಕ್ಷಿ ಮಾರುವವರ ವಿಡಿಯೋ ಕೂಡ ವೈರಲ್ ಆಗಿತ್ತು. ವಿಡಿಯೋದಲ್ಲಿ ದ್ರಾಕ್ಷಿ ಮಾರಾಟಗಾರನು ತನ್ನ ದ್ರಾಕ್ಷಿಯನ್ನು ಮಾರಲು ಜಿಂಗಲ್ ಹಾಡುವುದನ್ನು ಕೇಳಬಹುದು. ಜನರು ಇದನ್ನು ಕಚ್ಚಾ ಬದಮ್ ಹಾಡಿಗೆ ಹೋಲಿಸಿದ್ದರು. ಅದು ವೈರಲ್ ಆಗಿತ್ತು. ಹಣ್ಣು ಹಂಪಲು ಅವರ ಸಮರ್ಪಣೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Shocking Video: ಪಟಾಕಿ ಹಚ್ಚಿ ಗೆಳೆಯರ ಸಂಭ್ರಮಾಚರಣೆ ವೇಳೆ ನಡೆಯಿತು ಶಾಕಿಂಗ್ ಘಟನೆ; ವಿಡಿಯೋ ವೈರಲ್