IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರೋಹಿತ್-ವಿರಾಟ್​ಗೆ ವಿಶ್ರಾಂತಿ, ಧವನ್​ಗೆ ನಾಯಕತ್ವ

India Squad for West Indies: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ತಂಡದ ನಾಯಕತ್ವವನ್ನು ಶಿಖರ್ ಧವನ್‌ಗೆ ನೀಡಲಾಗಿದೆ.

IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರೋಹಿತ್-ವಿರಾಟ್​ಗೆ ವಿಶ್ರಾಂತಿ, ಧವನ್​ಗೆ ನಾಯಕತ್ವ
ಶಿಖರ್ ಧವನ್
Follow us
TV9 Web
| Updated By: ಪೃಥ್ವಿಶಂಕರ

Updated on:Jul 06, 2022 | 4:56 PM

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ತಂಡದ ನಾಯಕತ್ವವನ್ನು ಶಿಖರ್ ಧವನ್‌ (Shikhar Dhawan)ಗೆ ನೀಡಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಹಿರಿಯ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್ ವಿರುದ್ಧದ ಈ 3 ಪಂದ್ಯಗಳ ಸರಣಿಗೆ ಜುಲೈ 6 ಬುಧವಾರದಂದು ತಂಡವನ್ನು ಪ್ರಕಟಿಸಿದೆ. ಊಹಿಸಿದಂತೆ, ತಂಡದ ಪ್ರಮುಖ ಹಿರಿಯ ಮತ್ತು ಬಹು-ಫಾರ್ಮ್ಯಾಟ್ ಆಟಗಾರರಿಗೆ ಈ ಪ್ರವಾಸದಲ್ಲಿ ವಿಶ್ರಾಂತಿ ನೀಡಲಾಗಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ( Rohit Sharma, Virat Kohli, Rishabh Pant, Jasprit Bumrah and Mohammed Shami ) ಅವರ ಹೆಸರುಗಳು ಪ್ರಮುಖವಾಗಿವೆ. ಅದೇ ಸಮಯದಲ್ಲಿ, ಶುಭಮನ್ ಗಿಲ್ ಏಕದಿನ ತಂಡಕ್ಕೆ ಮರಳಿದ್ದಾರೆ.

ಧವನ್​ಗೆ ಎರಡನೇ ಬಾರಿಗೆ ನಾಯಕತ್ವ

ಇದನ್ನೂ ಓದಿ
Image
IND vs ENG, 1st T20, Match Preview: ಟಿ20 ಸರಣಿಯಲ್ಲಿ ಆಂಗ್ಲರನ್ನು ಸೋಲಿಸುವ ಶಕ್ತಿ ಟೀಂ ಇಂಡಿಯಾಕ್ಕಿದೆಯಾ?
Image
MS Dhoni Birthday: ಧೋನಿಯ 41ನೇ ಜನ್ಮದಿನಕ್ಕೆ ಅಭಿಮಾನಿಯಿಂದ ಸಿದ್ದವಾಯ್ತು 41 ಅಡಿಯ ಕಟೌಟ್; ಫೋಟೋ ವೈರಲ್
Image
ICC Test Ranking: 2053 ದಿನಗಳ ನಂತರ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ರಿಂದ ಹೊರಬಿದ್ದ ವಿರಾಟ್ ಕೊಹ್ಲಿ..!

ಎಡಗೈ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಧವನ್‌ಗೆ ಎರಡನೇ ಬಾರಿಗೆ ಟೀಂ ಇಂಡಿಯಾದ ನಾಯಕತ್ವ ನೀಡಲಾಗಿದೆ. ಇದಕ್ಕೂ ಮುನ್ನ ಕಳೆದ ವರ್ಷ ಶ್ರೀಲಂಕಾಕ್ಕೆ ತೆರಳಿದ್ದ ದ್ವಿತೀಯ ದರ್ಜೆ ಭಾರತ ತಂಡದ ನಾಯಕರಾಗಿ ಧವನ್ ಆಯ್ಕೆಯಾಗಿದ್ದರು. ಬಳಿಕ ಧವನ್​ಗೆ ODI ಮತ್ತು T20 ಸರಣಿಗಳಲ್ಲಿ ನಾಯಕತ್ವ ನೀಡಲಾಗಿತ್ತು. ಮತ್ತೊಂದೆಡೆ, ರವೀಂದ್ರ ಜಡೇಜಾ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಲಾಗಿದ್ದು, ಅವರು ಮೊದಲ ಬಾರಿಗೆ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ವರ್ಷದ ಆರಂಭದಲ್ಲಿ ಐಪಿಎಲ್‌ನಲ್ಲಿ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕನನ್ನಾಗಿ ಮಾಡಲಾಯಿತು, ಆದರೆ ಅಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ.

ಇದನ್ನೂ ಓದಿ: IND VS IRE: ಧವನ್​ ನಿಂಗ್ ವಯಸ್ಸಾಯ್ತೋ! ಐಪಿಎಲ್​ನಲ್ಲಿ ಮಿಂಚಿದರೂ ಟಿ20 ತಂಡದಲ್ಲಿ ಗಬ್ಬರ್​ಗಿಲ್ಲ ಸ್ಥಾನ

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ

ಶಿಖರ್ ಧವನ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಅರ್ಶ್ದೀಪ್ ಸಿಂಗ್.

ಒಂದೂವರೆ ವರ್ಷದ ನಂತರ ಗಿಲ್ ವಾಪಸ್

ಈ ಪ್ರವಾಸಕ್ಕಾಗಿ ಭಾರತ ತಂಡ ನೇರವಾಗಿ ಇಂಗ್ಲೆಂಡ್‌ನಿಂದ ಕೆರಿಬಿಯನ್‌ಗೆ ತೆರಳಲಿದೆ. ಹೀಗಿರುವಾಗ ಅದೇ ತಂಡವನ್ನು ಕಣಕ್ಕಿಳಿಸಲಾಗುತ್ತಿದೆ. ಆದರೆ, ಹಿರಿಯ ಆಟಗಾರರ ಅನುಪಸ್ಥಿತಿಯನ್ನು ತುಂಬಲು ಇತ್ತೀಚಿನ ದಿನಗಳಲ್ಲಿ ಐರ್ಲೆಂಡ್‌ನಲ್ಲಿ ನಡೆದ ಟಿ20 ಸರಣಿಯ ಭಾಗವಾಗಿರುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ವಿಶೇಷವೆಂದರೆ ಶುಭಮನ್ ಗಿಲ್ ಕೂಡ ಸುಮಾರು ಒಂದೂವರೆ ವರ್ಷಗಳ ಬಳಿಕ ಏಕದಿನ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮೊದಲು, ಗಿಲ್ ತನ್ನ ಕೊನೆಯ ODI ಪಂದ್ಯವನ್ನು ಡಿಸೆಂಬರ್ 2020 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ್ದರು.

ಸ್ಯಾಮ್ಸನ್ ರಿಟರ್ನ್, ಅವೇಶ್-ಅರ್ಷದೀಪ್​ಗೆ ಅವಕಾಶ

ಅವರಲ್ಲದೆ, ಕಳೆದ ವರ್ಷ ಶ್ರೀಲಂಕಾದಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್ ಕೂಡ ಈ ಸರಣಿಗೆ ಆಯ್ಕೆಯಾಗಿದ್ದಾರೆ. ಇತ್ತೀಚಿನ ಐರ್ಲೆಂಡ್ ಪ್ರವಾಸದಲ್ಲಿ ಅವರು ಉತ್ತಮ ಇನ್ನಿಂಗ್ಸ್ ಆಡಿದ್ದರು. ಅವರಲ್ಲದೆ, ಇಂಗ್ಲೆಂಡ್ ನಂತರ ಈ ಸರಣಿಗೆ ಅರ್ಷದೀಪ್ ಸಿಂಗ್ ಕೂಡ ಆಯ್ಕೆಯಾಗಿದ್ದಾರೆ. ಭುವನೇಶ್ವರ್ ಕುಮಾರ್ ಇಲ್ಲದ ಕಾರಣ ಅವೇಶ್ ಖಾನ್ ಅವರನ್ನು ಮೊದಲ ಬಾರಿಗೆ ಏಕದಿನ ತಂಡಕ್ಕೆ ಸೇರಿಸಲಾಗಿದೆ. ಹೀಗಿರುವಾಗ ಅವರಿಗೆ ಚೊಚ್ಚಲ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇದೆ.

ಸರಣಿ ವೇಳಾಪಟ್ಟಿ

ಜುಲೈ 22 ರಂದು ಟ್ರಿನಿಡಾಡ್‌ನಲ್ಲಿ ಪ್ರಾರಂಭವಾಗುವ ODI ಪಂದ್ಯದೊಂದಿಗೆ ಸರಣಿಯು ಪ್ರಾರಂಭವಾಗುತ್ತದೆ. ನಂತರ ಟೀಂ ಇಂಡಿಯಾ ಎರಡು ಬಾರಿಯ ವಿಶ್ವ ಚಾಂಪಿಯನ್‌ನರ ವಿರುದ್ಧ ಐದು T20 ಪಂದ್ಯಗಳನ್ನು ಸಹ ಆಡಲಿದೆ. ಟ್ರಿನಿಡಾಡ್, ಸೇಂಟ್ ಕಿಟ್ಸ್, ಲಾಡರ್ಹಿಲ್ (ಫ್ಲೋರಿಡಾ) ನಲ್ಲಿ ಪಂದ್ಯಗಳು ನಡೆಯಲಿವೆ. ಆದರೆ ಕೊನೆಯ ಎರಡು ಟಿ20 ಪಂದ್ಯಗಳು ಆಗಸ್ಟ್ 6 ಮತ್ತು 7ರಂದು ಅಮೆರಿಕದಲ್ಲಿ ನಡೆಯಲಿದೆ.

Published On - 3:51 pm, Wed, 6 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ