MS Dhoni Birthday: ಧೋನಿಯ 41ನೇ ಜನ್ಮದಿನಕ್ಕೆ ಅಭಿಮಾನಿಯಿಂದ ಸಿದ್ದವಾಯ್ತು 41 ಅಡಿಯ ಕಟೌಟ್; ಫೋಟೋ ವೈರಲ್

MS Dhoni Birthday: ಇತ್ತೀಚೆಗಷ್ಟೇ ಧೋನಿ ಪತ್ನಿ ಸಾಕ್ಷಿ ಜತೆ ಇಂಗ್ಲೆಂಡ್‌ಗೆ ತೆರಳಿದ್ದು, ಜುಲೈ 4 ರಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಇಂಗ್ಲೆಂಡ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಆದರೆ ಈಗ ಧೋನಿ ತಮ್ಮ 41 ನೇ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

MS Dhoni Birthday: ಧೋನಿಯ 41ನೇ ಜನ್ಮದಿನಕ್ಕೆ ಅಭಿಮಾನಿಯಿಂದ ಸಿದ್ದವಾಯ್ತು 41 ಅಡಿಯ ಕಟೌಟ್; ಫೋಟೋ ವೈರಲ್
ಎಂಎಸ್ ಧೋನಿ
Follow us
TV9 Web
| Updated By: ಪೃಥ್ವಿಶಂಕರ

Updated on: Jul 06, 2022 | 2:57 PM

ಎಂಎಸ್ ಧೋನಿ (MS Dhoni) ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು ಆದರೆ ಅಭಿಮಾನಿಗಳ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ. ಇವತ್ತಿಗೂ ಧೋನಿಯ ಕ್ರೇಜ್ ಅವರು ಕ್ರಿಕೆಟ್ ಆಡುವ ದಿನಗಳಲ್ಲಿ ಇದ್ದಂತೆಯೇ ಇದೆ. ಭಾರತದಲ್ಲಿ ಧೋನಿ ಅಭಿಮಾನಿಗಳ ಕೊರತೆ ಇಲ್ಲ, ಅಭಿಮಾನಿಯೊಬ್ಬರು ಅವರ 41 ಅಡಿ ಉದ್ದದ ಕಟೌಟ್ (cutout) ಮಾಡಿದ್ದು ಇದಕ್ಕೆ ಹೊಸ ಉದಾಹರಣೆಯಾಗಿದೆ. ಏಕೆ ಕೇವಲ 41 ಅಡಿ ಕಟೌಟ್ ಎಂದು ನೀವು ಕೇಳಬಹುದು. ಏಕೆಂದರೆ ಧೋನಿಗೆ ನಾಳೆಗೆ (ಅಂದರೆ ಜುಲೈ 7ಕ್ಕೆ) 41 ವರ್ಷ ತುಂಬಲಿದೆ. ಧೋನಿ ಜುಲೈ 7 ರಂದು ಅಂದರೆ ಗುರುವಾರ ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೇ ಧೋನಿ ಪತ್ನಿ ಸಾಕ್ಷಿ ಜತೆ ಇಂಗ್ಲೆಂಡ್‌ಗೆ ತೆರಳಿದ್ದು, ಜುಲೈ 4 ರಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಇಂಗ್ಲೆಂಡ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಆದರೆ ಈಗ ಧೋನಿ ತಮ್ಮ 41 ನೇ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಇದನ್ನೂ ಓದಿ
Image
ICC Test Ranking: 2053 ದಿನಗಳ ನಂತರ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ರಿಂದ ಹೊರಬಿದ್ದ ವಿರಾಟ್ ಕೊಹ್ಲಿ..!
Image
IND vs ENG: ಶ್ರೇಯಸ್​ಗೆ ಮುಳುವಾಯ್ತ ಐಪಿಎಲ್? ಮೆಕಲಮ್ ತೋಡಿದ ಖೆಡ್ಡಾಕ್ಕೆ ಸುಲಭವಾಗಿ ಬಿದ್ದ ಅಯ್ಯರ್; ವಿಡಿಯೋ
Image
IND vs ENG: ರಿಷಬ್ ಪಂತ್ ಆಟಕ್ಕೆ 69 ವರ್ಷಗಳ ಹಳೆಯ ದಾಖಲೆ ಉಡೀಸ್! ಆದರೆ..?

41 ಅಡಿಯ ಧೋನಿ 41 ನೇ ಹುಟ್ಟುಹಬ್ಬಕ್ಕೆ ಗಿಫ್ಟ್

ಎಂಎಸ್ ಧೋನಿ ಅವರ 41 ಅಡಿ ಕಟೌಟ್ ಸಿದ್ಧಪಡಿಸಿರುವ ವಿಜಯವಾಡ ಜಿಲ್ಲೆಯ ನಿವಾಸಿyಆಗಿರುವ ಅಭಿಮಾನಿ, ಅಲ್ಲಿ ಧೋನಿಯನ್ನು ಉದ್ದನೆಯ ಕಟೌಟ್‌ನಲ್ಲಿ ರೂಪಿಸಿದ್ದಾರೆ. ಈ ಕಟೌಟ್​ನಲ್ಲಿ ಧೋನಿ ತಮ್ಮ ಸಿಗ್ನೇಚರ್ ಶಾಟ್, ಹೆಲಿಕಾಪ್ಟರ್ ಶಾಟ್ ಅನ್ನು ಆಡುತ್ತಿರುವಂತೆ ಚಿತ್ರಿಸಲಾಗಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಕಟೌಟ್‌ ಸುದ್ದಿಯಾದ ನಂತರ, ಅನೇಕ ಜನರು ಅದರ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡುತ್ತಿದ್ದಾರೆ.

ಎಂಎಸ್ ಧೋನಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚು ಜನಪ್ರಿಯವಾಗಲು ಕಾರಣ ಅವರು ಭಾರತೀಯ ಕ್ರಿಕೆಟ್‌ಗಾಗಿ ಮಾಡಿದ ಕೆಲಸ. ವಿಶ್ವ ಕ್ರಿಕೆಟ್‌ನಲ್ಲಿ ಭಾರತಕ್ಕೆ ಧೋನಿ ತಂದಿರುವ ಹೆಸರು ಮತ್ತು ಗೌರವ ಇದಕ್ಕೆ ಪ್ರಮುಖ ಕಾರಣ. ಧೋನಿ ನಾಯಕತ್ವದಲ್ಲಿ ಭಾರತ ಟೆಸ್ಟ್‌ನಲ್ಲಿ ನಂಬರ್ ಒನ್ ಆಯಿತು. ಐಸಿಸಿಯ ಎಲ್ಲಾ ಮೂರು ದೊಡ್ಡ ಪ್ರಶಸ್ತಿಗಳನ್ನು ವಶಪಡಿಸಿಕೊಂಡಿತು. ಇದಲ್ಲದೇ ಇಂದು ದೇಶದ ಜವಾಬ್ದಾರಿ ಹೊತ್ತಿರುವ ವಿರಾಟ್, ರೋಹಿತ್​ರಂತಹ ಉತ್ತಮ ಆಟಗಾರರನ್ನು ದೇಶಕ್ಕೆ ನೀಡಿದರು.

ಧೋನಿ ಕ್ರಿಕೆಟ್ ಬದುಕು

ಧೋನಿ ಭಾರತ ಪರ 90 ಟೆಸ್ಟ್, 350 ODI ಮತ್ತು 98 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಅವರು 6 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 4876 ರನ್ ಗಳಿಸಿದ್ದಾರೆ. 10 ಶತಕ ಮತ್ತು 73 ಅರ್ಧ ಶತಕಗಳ ನೆರವಿನೊಂದಿಗೆ ಏಕದಿನದಲ್ಲಿ ಒಟ್ಟು 10773 ರನ್ ಗಳಿಸಿದ್ದಾರೆ. ಆದರೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು 2 ಅರ್ಧಶತಕಗಳ ಸಹಾಯದಿಂದ 1617 ರನ್ ಗಳಿಸಿದ್ದಾರೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ