IND vs ENG: ಶ್ರೇಯಸ್ಗೆ ಮುಳುವಾಯ್ತ ಐಪಿಎಲ್? ಮೆಕಲಮ್ ತೋಡಿದ ಖೆಡ್ಡಾಕ್ಕೆ ಸುಲಭವಾಗಿ ಬಿದ್ದ ಅಯ್ಯರ್; ವಿಡಿಯೋ
IND vs ENG: ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದರೆ, ಬ್ರಾಂಡನ್ ಮೆಕಲಮ್ ಡ್ರೆಸ್ಸಿಂಗ್ ರೂಮ್‌ನ ಬಾಲ್ಕನಿಯಲ್ಲಿ ಕುಳಿತಿದ್ದರು. ಅವರು ಶ್ರೇಯಸ್ ಅಯ್ಯರ್‌ಗೆ ಶಾರ್ಟ್ ಬಾಲ್ ಎಸೆಯುವಂತೆ ಬೌಲರ್‌ಗಳಿಗೆ ಸೂಚನೆ ನೀಡಿದರು.
ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ನ 2ನೇ ಇನ್ನಿಂಗ್ಸ್ನಲ್ಲೂ ಶ್ರೇಯಸ್ ಅಯ್ಯರ್ (Shreyas Iyer) ಬ್ಯಾಟ್ ರನ್ ಗಳಿಸಲು ಮತ್ತೊಮ್ಮೆ ವಿಫಲವಾಗಿದೆ. 5ನೇ ಟೆಸ್ಟ್‌ನ ನಾಲ್ಕನೇ ದಿನ ಭಾರತ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಅಯ್ಯರ್ ಸುಲಭವಾಗಿ ಆಂಗ್ಲ ಬೌಲರ್‌ಗಳ ಬಲೆಗೆ ಬಿದ್ದರು. ಅಯ್ಯರ್ ಮೊದಲ ಇನ್ನಿಂಗ್ಸ್‌ನಲ್ಲಿ 15 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 19 ರನ್ ಗಳಿಸಿ ಮ್ಯಾಥ್ಯೂ ಪಾಟ್ಸ್‌ಗೆ ಬಿದ್ದರು. ಈ ಮೂಲಕ ಅಯ್ಯರ್ ಅವರ ದೌರ್ಬಲ್ಯ ಮತ್ತೊಮ್ಮೆ ಬಹಿರಂಗವಾಯಿತು. ಪಂದ್ಯದ ವೇಳೆ ಬಾಲ್ಕನಿಯಲ್ಲಿ ಕುಳಿತಿದ್ದ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ (Brendon McCullum) ಅಯ್ಯರ್ ಅವರ ದೌರ್ಬಲ್ಯವನ್ನು ತೆರೆದಿಟ್ಟರು. ಬಳಿಕ ಅವರನ್ನು ಪೆವಿಲಿಯನ್‌ಗೆ ಕಳುಹಿಸಲು ಆಂಗ್ಲ ಬೌಲರ್‌ಗಳಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ವಾಸ್ತವವಾಗಿ, 53 ನೇ ಓವರ್‌ನಲ್ಲಿ ಚೇತೇಶ್ವರ ಪೂಜಾರ (Cheteshwar Pujara) ಔಟಾದ ನಂತರ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಜೊತೆ ಕಣಕ್ಕಿಳಿದಿದ್ದರು.
ಶ್ರೇಯಸ್ ವೀಕ್ನೆಸ್ ಮೆಕಲಮ್‌ಗೆ ಗೊತ್ತು
ಶ್ರೇಯಸ್ ಅಯ್ಯರ್ ಉತ್ತಮ ಶಾಟ್ಗಳ ಮೂಲಕ ಬಿಗ್ ಇನ್ನಿಂಗ್ಸ್ ಆಡುವ ಮುನ್ಸೂಚನೆ ನೀಡಿದ್ದರು. ಜೊತೆಗೆ ರಿಷಭ್ ಪಂತ್ಗೆ ಉತ್ತಮ ಸಾಥ್ ಕೂಡ ನೀಡುತ್ತಿದ್ದರು. ಕೆಲವು ಉತ್ತಮ ಹೊಡೆತಗಳನ್ನು ಆಡುವ ಮೂಲಕ ಬೌಲರ್‌ಗಳನ್ನು ಕಿರಿಕಿರಿಗೊಳಿಸಿದರು. ಆದರೆ 60ನೇ ಓವರ್‌ನಲ್ಲಿ ಮ್ಯಾಥ್ಯೂ ಪಾಟ್ಸ್ ಬಲೆಗೆ ಬಿದ್ದರು. ವಾಸ್ತವವಾಗಿ ಅಯ್ಯರ್ ವಿಕೆಟ್ ಉರುಳಿಸಲು ಕೋಚ್ ಮೆಕಲಮ್ ಬಲೆ ಬೀಸಿದ್ದರು. ಐಪಿಎಲ್ 2022 ರಲ್ಲಿ ಇಬ್ಬರೂ ಒಂದೇ ತಂಡದಲ್ಲಿರುವುದು ಮೆಕಲಮ್‌ಗೆ ಸಹಕಾರಿಯಾಯ್ತು. ಮೆಕಲಮ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದರೆ, ಶ್ರೇಯಸ್ ಅಯ್ಯರ್ ತಂಡದ ನಾಯಕರಾಗಿದ್ದರು. ಹೀಗಾಗಿ ಅಯ್ಯರ್ ಅವರ ದೌರ್ಬಲ್ಯ ಮೆಕಲಮ್‌ಗೆ ತಿಳಿದಿತ್ತು. ಇದರ ಲಾಭ ಪಡೆದ ಮೆಕಲಮ್ ಅಯ್ಯರ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
Fell into the trap ?
Scorecard/Clips: https://t.co/jKoipF4U01
??????? #ENGvIND ?? pic.twitter.com/qLwRAnJs82
— England Cricket (@englandcricket) July 4, 2022
Brendon McCullum straightaway told England to go for the short ball tactic against Shreyas Iyer. pic.twitter.com/rMGluifmMM
— Mufaddal Vohra (@mufaddal_vohra) July 4, 2022
ಶಾರ್ಟ್ ಬಾಲ್ ಎಸೆಯಲು ಸೂಚನೆ
ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದರೆ, ಬ್ರಾಂಡನ್ ಮೆಕಲಮ್ ಡ್ರೆಸ್ಸಿಂಗ್ ರೂಮ್‌ನ ಬಾಲ್ಕನಿಯಲ್ಲಿ ಕುಳಿತಿದ್ದರು. ಅವರು ಶ್ರೇಯಸ್ ಅಯ್ಯರ್‌ಗೆ ಶಾರ್ಟ್ ಬಾಲ್ ಎಸೆಯುವಂತೆ ಬೌಲರ್‌ಗಳಿಗೆ ಸೂಚನೆ ನೀಡಿದರು. ಇದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದನ್ನು ಗಮನಿಸಿದ ಆಂಗ್ಲ ಬೌಲರ್ ತಕ್ಷಣವೇ ಸೂಚನೆಗಳನ್ನು ಅನುಸರಿಸಿ ಶಾರ್ಟ್ ಬಾಲ್ ಎಸೆದರು. ಆ ಎಸೆತವನ್ನು ದಂಡಿಸುವ ಪ್ರಯತ್ನದಲ್ಲಿ ಅಯ್ಯರ್ ಜೇಮ್ಸ್ ಆಂಡರ್ಸನ್ಗೆ ಸುಲಭ ಕ್ಯಾಚ್ ನೀಡಿದರು. ಕಳೆದ ಕೆಲವು ಪಂದ್ಯಗಳಿಂದ ಶ್ರೇಯಸ್ ಅಯ್ಯರ್‌ಗೆ ಶಾರ್ಟ್ ಬಾಲ್ಗಳೇ ವಿಲನ್ ಆಗಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಅಯ್ಯರ್ ಇದೇ ರೀತಿಯ ಎಸೆತಗಳಿಗೆ ತಮ್ಮ ವಿಕೆಟ್ ಒಪ್ಪಿಸಿದ್ದರು.