Inspiring Story: ಒಟ್ಟಿಗೇ ಯುದ್ಧ ವಿಮಾನ ಹಾರಿಸಿ ಇತಿಹಾಸ ಸೃಷ್ಟಿಸಿದ ಬೀದರ್ನ ಅಪ್ಪ- ಮಗಳು
ಬೀದರ್ನ ಐಎಎಫ್ ಸ್ಟೇಷನ್ನಲ್ಲಿ ಹಾಕ್-132 ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸಿರುವ ಅನನ್ಯಾ ಹಾಗೂ ಆಕೆಯ ತಂದೆ ಸಂಜಯ್ ಶರ್ಮಾ ಅವರ ಫೋಟೋಗಳು ಭಾರೀ ವೈರಲ್ ಆಗಿವೆ.
ಬೀದರ್: ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯಲ್ಲಿ (Indian Air Force) ತಂದೆ ಮತ್ತು ಮಗಳು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕರ್ನಾಟಕದ ಬೀದರ್ (Bidar) ಜಿಲ್ಲೆಯ ತಂದೆ- ಮಗಳು ಒಟ್ಟಾಗಿ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಫ್ಲೈಯಿಂಗ್ ಆಫೀಸರ್ (Flying Officer Ananya Sharma) ಆಗಿರುವ ಅನನ್ಯಾ ಮತ್ತು ಏರ್ ಕಮೋಡೋರ್ ಆಗಿರುವ ಸಂಜಯ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬೀದರ್ನ ಐಎಎಫ್ ಸ್ಟೇಷನ್ನಲ್ಲಿ ಹಾಕ್-132 ವಿಮಾನವನ್ನು ಒಟ್ಟಿಗೆ ಹಾರಿಸಿರುವ ಅನನ್ಯಾ ಹಾಗೂ ಆಕೆಯ ತಂದೆ ಸಂಜಯ್ ಶರ್ಮಾ (Sanjay Sharma) ಅವರ ಫೋಟೋಗಳು ಭಾರೀ ವೈರಲ್ ಆಗಿವೆ. ಅಪ್ಪ- ಮಗಳ ಈ ಸ್ಫೂರ್ತಿದಾಯಕ ಸಾಧನೆಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.
ಭಾರತೀಯ ವಾಯುಪಡೆಯಲ್ಲಿ ಈ ಸಾಧನೆ ಮಾಡಿದ ಮೊದಲ ತಂದೆ-ಮಗಳ ಜೋಡಿ ಎಂಬ ಹೆಗ್ಗಳಿಕೆಗೆ ಇವರಿಬ್ಬರೂ ಪಾತ್ರರಾಗಿದ್ದಾರೆ. ಫ್ಲೈಯಿಂಗ್ ಆಫೀಸರ್ ಆಗಿರುವ ಅನನ್ಯಾ ಯುದ್ಧ ವಿಮಾನದಲ್ಲಿ ಪದವಿ ಪಡೆದು, ತರಬೇತಿ ಪಡೆದುಕೊಳ್ಳುತ್ತಿರುವ ಮೊದಲ ತರಬೇತುದಾರರಾಗಿದ್ದಾರೆ. ಮಗಳೊಂದಿಗೆ ಸಂಜಯ್ ಶರ್ಮಾ ಫೈಟರ್ ಜೆಟ್ ಎದುರು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
#fatherdaughter duo created #history on 30 May 2022
Flew in same formation of Hawk-132 ✈ at #AirForce Stn Bidar, where Flying Officer Ananya Sharma is undergoing training before graduating ? onto faster & more superior fighter aircraft of @IAF_MCC@TwitterIndia @AviationWeek pic.twitter.com/72LyWRZFpo
— PRO Defence Gujarat (@DefencePRO_Guj) July 5, 2022
ಭಾರತೀಯ ವಾಯುಪಡೆ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದ ಬೀದರ್‌ನಲ್ಲಿ ಮೇ 30ರಂದು ಈ ಅಪ್ಪ- ಮಗಳು ಒಟ್ಟಿಗೆ ಯುದ್ಧ ವಿಮಾನವನ್ನು ಹಾರಿಸಿದ್ದಾರೆ. IAF ನೀಡಿದ ಮಾಹಿತಿ ಪ್ರಕಾರ, “ಬೀದರ್‌ನಲ್ಲಿ ಹಾಕ್-132ರ ರಚನೆಯಲ್ಲಿ ಹಾರಾಟ ನಡೆಸಲಾಯಿತು. ಅಲ್ಲಿ ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ IAFನ ವೇಗದ ಮತ್ತು ಹೆಚ್ಚು ಉನ್ನತ ಯುದ್ಧ ವಿಮಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ” ಎಂದು ರಕ್ಷಣಾ ಸಚಿವಾಲಯದ ಗುಜರಾತ್ ವಿಭಾಗ ಟ್ವೀಟ್ ಮಾಡಿದೆ.
ಇದನ್ನೂ ಓದಿ: IAF Group C Recruitment 2022: 10ನೇ ತರಗತಿ ಪಾಸಾದವರಿಗೆ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ
There has not been any previous instance in @IAF_MCC where #fatherdaughter hv been part of same #Fighter formation in a #mission
Air Cmde Sanjay & Fg Offr Ananya were more than just father & daughter….they were comrades who had full faith in each other as fellow wingmen would pic.twitter.com/kUUzIZzbxO
— PRO Defence Gujarat (@DefencePRO_Guj) July 5, 2022
“ಭಾರತೀಯ ವಾಯುಪಡೆಯಲ್ಲಿ ತಂದೆ ಮತ್ತು ಅವರ ಮಗಳು ಒಂದೇ ಯುದ್ಧವಿಮಾನದಲ್ಲಿ ಕಾರ್ಯಾಚರಣೆ ನಡೆಸಿದ ಯಾವುದೇ ಉದಾಹರಣೆಗಳಿಲ್ಲ” ಎಂದು ವಾಯುಪಡೆ ತಿಳಿಸಿದೆ. ಹೀಗಾಗಿ, ಬೀದರ್ನ ಅಪ್ಪ- ಮಗಳ ಜೋಡಿ ಇದೀಗ ಇತಿಹಾಸ ನಿರ್ಮಿಸಿದೆ. ಅನನ್ಯಾ ಶರ್ಮ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಟೆಕ್ ಮುಗಿಸಿ, ಐಎಎಫ್‌ನಲ್ಲಿ ತರಬೇತಿಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಅವರು ಫೈಟ್ ಪೈಲಟ್ ಆಗಿ ಆಯ್ಕೆಯಾಗಿದ್ದರು. ಆಕೆಯ ತಂದೆ ಏರ್ ಕಮೋಡೋರ್ ಸಂಜಯ್ ಶರ್ಮಾ 1989ರಿಂದ ವಾಯುಪಡೆಯ ಫೈಟರ್ ಸ್ಟ್ರೀಮ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.