AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mirage Fighter Jet: ಭಾರತೀಯ ವಾಯುಪಡೆಗೆ ‘ಮಿರಾಜ್–2000’ ಯುದ್ಧ ವಿಮಾನದ ಮೇಲೆ ವ್ಯಾಮೋಹವೇಕೆ?

Indian Air Force: ಭಾರತೀಯ ವಾಯುಪಡೆಯು ಫ್ರಾನ್ಸ್ ನಿರ್ಮಿತ ‘ಮಿರಾಜ್–2000’ ಯುದ್ಧ ವಿಮಾನಗಳತ್ತ ಹಾಗೂ ಅತ್ಯಾಧುನಿಕ ‘ರಫೇಲ್‌’ ಯುದ್ಧ ವಿಮಾನಗಳತ್ತ ದೃಷ್ಟಿ ನೆಟ್ಟಿದೆ. ಅದಕ್ಕೆ ಕಾರಣವೇನು?

Mirage Fighter Jet: ಭಾರತೀಯ ವಾಯುಪಡೆಗೆ ‘ಮಿರಾಜ್–2000’ ಯುದ್ಧ ವಿಮಾನದ ಮೇಲೆ ವ್ಯಾಮೋಹವೇಕೆ?
ಮಿರಾಜ್ ಯುದ್ಧವಿಮಾನImage Credit source: The Print
TV9 Web
| Updated By: ಸುಷ್ಮಾ ಚಕ್ರೆ|

Updated on: Jun 29, 2022 | 8:25 AM

Share

ಭಾರತೀಯ ವಾಯುಪಡೆಯು (ಐಎಎಫ್‌) 2 ಸೆಕೆಂಡ್ ಹ್ಯಾಂಡ್ ‘ಮಿರಾಜ್–2000’ (Mirage 2000) ಯುದ್ಧ ವಿಮಾನಗಳನ್ನು ಕಳೆದ ವರ್ಷ ಗ್ವಾಲಿಯರ್‌ ವಾಯುನೆಲೆಗೆ ಬರಮಾಡಿಕೊಂಡಿತ್ತು. ವಾಯುಪಡೆಯ ಬತ್ತಳಿಕೆಯಲ್ಲಿ ‘ಸುಖೋಯ್–30 ಎಂಕೆಐ’, ‘ಮಿಗ್–29’ರ ಮೇಲ್ದರ್ಜೆಗೇರಿಸಿದ ಆವೃತ್ತಿಯ (ಮಿಗ್–29 ಯುಪಿಜಿ) ಯುದ್ಧ ವಿಮಾನಗಳು ಹೇಗೂ ಇವೆ. ರಷ್ಯಾ ನಿರ್ಮಿತ ಈ ಅತ್ಯಾಧುನಿಕ ಯುದ್ಧ ವಿಮಾನಗಳು (Fighter Jets) ಹಲವು ಆಯಾಮಗಳಿಂದ ಹೋರಾಡಬಲ್ಲ ಸಾಮರ್ಥ್ಯ ಹೊಂದಿರುವುದಲ್ಲದೆ, ಶತ್ರು ದೇಶದ ಭೂಪ್ರದೇಶದೊಳಕ್ಕೆ ನುಗ್ಗಿ ಹೊಡೆಯಬಲ್ಲ ಶಕ್ತಿಯಿಂದ ಕೂಡಿವೆ. ಇದರ ಜತೆಗೆ ಇನ್ನೂ ಅನೇಕ ಯುದ್ಧಸಾಮಗ್ರಿಗಳನ್ನು ರಷ್ಯಾದಿಂದ ಭಾರತ ಖರೀದಿಸುತ್ತಿದೆ. ಆದರೂ, ಭಾರತೀಯ ವಾಯುಪಡೆಯು (Indian Air Force) ಫ್ರಾನ್ಸ್ ನಿರ್ಮಿತ ‘ಮಿರಾಜ್–2000’ ಯುದ್ಧ ವಿಮಾನಗಳತ್ತ ಹಾಗೂ ಅತ್ಯಾಧುನಿಕ ‘ರಫೇಲ್‌’ ಯುದ್ಧ ವಿಮಾನಗಳತ್ತ ದೃಷ್ಟಿ ನೆಟ್ಟಿದೆ. ಯಾಕೆ?

ಶತ್ರುವಿನ ಭೂಪ್ರದೇಶದ ಮೇಲೆ ನಿಖರವಾದ ದಾಳಿ ನಡೆಸುವುದಕ್ಕಾಗಿ ಈ ಹಿಂದೆ ಹಲವು ಬಾರಿ ‘ಮಿರಾಜ್–2000’ ಯುದ್ಧ ವಿಮಾನವನ್ನು ಬಳಸಲಾಗಿದೆ. ಈ ವಿಮಾನದ ಬಗ್ಗೆ ವಾಯುಪಡೆಗೆ ತೃಪ್ತಿಯೂ ಇದೆ. ‘ಮಿರಾಜ್–2000’ ಯುದ್ಧ ವಿಮಾನವು 1980ರಿಂದಲೂ ಸೇವೆಯಲ್ಲಿದೆ. ಕಾರ್ಗಿಲ್ ಯುದ್ಧದಿಂದ ತೊಡಗಿ ಬಾಲಾಕೋಟ್‌ನಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ ಅಡಗುದಾಣದ ಮೇಲೆ ದಾಳಿ ನಡೆಸುವಲ್ಲಿವರೆಗೆ ‘ಮಿರಾಜ್–2000’ ಮಹತ್ತರ ಪಾತ್ರ ವಹಿಸಿದೆ.

ಆದರೆ, ಇತರ ಅತ್ಯಾಧುನಿಕ ಯುದ್ಧ ವಿಮಾನಗಳಿಗೆ ಹೋಲಿಸಿದರೆ ‘ಮಿರಾಜ್–2000’ ತುಂಬಾ ಹಳೆಯದಾಗಿದೆ ಎಂಬುದು ವಾಸ್ತವ. ಹೀಗಾಗಿ ಅದರ ಸೇವೆಯನ್ನು ಸ್ಥಗಿತಗೊಳಿಸಬಹುದು ಎಂಬ ಅಭಿಪ್ರಾಯ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ, ಪಾಕಿಸ್ತಾನದಂತೆಯೇ ಭಾರತವೂ ಸೆಕೆಂಡ್ ಹ್ಯಾಂಡ್ ‘ಮಿರಾಜ್–2000’ ಖರೀದಿಸುವತ್ತ ಮನವ ಮಾಡಿದೆ. ಭಾರತೀಯ ವಾಯುಪಡೆಗೇಕೆ ‘ಮಿರಾಜ್–2000’ ಮೇಲೆ ಇಷ್ಟೊಂದು ವ್ಯಾಮೋಹ? ಇದರ ಹಿಂದಿರುವ ಲೆಕ್ಕಾಚಾರವೇನು?

ಇದನ್ನೂ ಓದಿ: Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ

ಒಟ್ಟಾರೆಯಾಗಿ, ಫ್ರಾನ್ಸ್‌ನಿಂದ 24 ಸೆಕೆಂಡ್ ಹ್ಯಾಂಡ್ ‘ಮಿರಾಜ್–2000’ ಖರೀದಿಸಲು ವಾಯುಪಡೆ ಮುಂದಾಗಿದ್ದು, ಪ್ರಕ್ರಿಯೆಗಳು ನಡೆಯುತ್ತಿವೆ. ಈ ಪೈಕಿ ಮೊದಲ ಬ್ಯಾಚ್‌ನ ಎರಡು ‘ಮಿರಾಜ್–2000’ಗಳು ಕಳೆದ ವರ್ಷವೇ ವಾಯುಪಡೆ ಸೇರಿವೆ. ಕೆಲವು ವರದಿಗಳ ಪ್ರಕಾರ, ಇವು ಸಂಪೂರ್ಣ ಯುದ್ಧ ಸಾಮರ್ಥ್ಯ ಹೊಂದಿದ್ದು, ಯಾವುದೇ ಕ್ಷಣದಲ್ಲಿಯೂ ಬಳಕೆಗೆ ಅನುಕೂಲಕರವಾಗಿ ಇವೆ.

ಫ್ರಾನ್ಸ್‌ ವಾಯುನೆಲೆಯಲ್ಲಿ ತರಬೇತಿಗೆ ಬಳಸುತ್ತಿದ್ದ ಈ ‘ಮಿರಾಜ್–2000’ಗಳನ್ನು ಇತ್ತೀಚಿನ ಗುಣಮಟ್ಟಗಳಿಗೆ ಅನುಗುಣವಾಗಿ ಎಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಮೇಲ್ದರ್ಜೆಗೇರಿಸಲಿದೆ. ರಷ್ಯಾದ ‘ಆರ್–73 ಎಎಎಂ’ ಮದ್ದುಗುಂಡುಗಳನ್ನು ಬಳಸುವಂತೆ ರೂಪಿಸಲಿದೆ.

ಈ ಎರಡು ವಿಮಾನಗಳನ್ನು ಮೇಲ್ದರ್ಜೆಗೇರಿಸಿ ನಿಯೋಜನೆಗೊಳಿಸಿದರೆ, ವಾಯುಪಡೆಯಲ್ಲಿರುವ ‘ಮಿರಾಜ್–2000’ ವಿಮಾನಗಳ ಸಂಖ್ಯೆ 49ಕ್ಕೆ ಏರಿಕೆಯಾಗಲಿದೆ. ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಂತೂ ಇದ್ದೇ ಇದೆ. ಈ ಹಿಂದೆ ವಾಯುಪಡೆಯಲ್ಲಿ 50 ‘ಮಿರಾಜ್–2000’ ಯುದ್ಧ ವಿಮಾನಗಳು ಇದ್ದವು. ಕೆಲವು ವಿಮಾನಗಳು ಪತನಗೊಂಡು ಸಂಖ್ಯೆ 47ಕ್ಕೆ ಇಳಿಕೆಯಾಗಿತ್ತು.

ಈ ವರ್ಷ ಸೆಪ್ಟೆಂಬರ್‌ – ನವೆಂಬರ್‌ ವೇಳೆಗೆ ವಾಯುಪಡೆಯು ಫ್ರಾನ್ಸ್‌ನಿಂದ ಒಟ್ಟು 24 ಸೆಕೆಂಡ್ ಹ್ಯಾಂಡ್ ‘ಮಿರಾಜ್–2000’ ಯುದ್ಧ ವಿಮಾನಗಳನ್ನು ಖರೀದಿಸಲಿದೆ. ಸರಾಸರಿ 11.25 ಲಕ್ಷ ಯುರೋಗಳಂತೆ 2.7 ಕೋಟಿ ಯುರೊಗಳಿಗೆ (ಅಂದಾಜು 3.165 ಡಾಲರ್) ಈ ವಹಿವಾಟು ನಡೆದಿದೆ. 13 ವಿಮಾನಗಳು ಇಂಟ್ಯಾಕ್ಟ್ ಏರ್‌ಫ್ರೇಮ್‌ಗಳು ಮತ್ತು ಎಂಜಿನ್‌ಗಳನ್ನು ಹೊಂದಿದ್ದು, ಇವುಗಳಲ್ಲಿ 8 ಅನ್ನು ದುರಸ್ತಿಗೊಳಿಸಬಹುದಾಗಿದೆ. 13 ವಿಮಾನಗಳು ಭಾಗಶಃ ಸನ್ನದ್ಧ ಸ್ಥಿತಿಯಲ್ಲಿವೆ.

ಇದನ್ನೂ ಓದಿ: ತರಬೇತಿ ವೇಳೆ ಮನೆಗೆ ಅಪ್ಪಳಿಸಿದ ಚೀನಾದ ವಾಯುಪಡೆಯ ಯುದ್ಧ ವಿಮಾನ; ಓರ್ವ ಸಾವು

8 ವಿಮಾನಗಳನ್ನು ದುರಸ್ತಿಯ ಬಳಿಕ ಬಳಸಬಹುದಾಗಿದ್ದರೆ 13 ವಿಮಾನಗಳನ್ನು ಸೇವೆಯಲ್ಲಿರುವ ಇತರ ವಿಮಾನಗಳಿಗೆ ಬಿಡಿ ಭಾಗಗಳ ಪೂರೈಕೆಗಾಗಿ ಬಳಸಲು ಉದ್ದೇಶಿಸಲಾಗಿದೆ. ಸೆಕೆಂಡ್ ಹ್ಯಾಂಡ್ ‘ಮಿರಾಜ್–2000’ ಯುದ್ಧ ವಿಮಾನಗಳನ್ನು ಖರೀದಿಸಿ ಅವುಗಳ ಬಿಡಿ ಭಾಗಗಳನ್ನು ಬಳಸಿಕೊಂಡು ಸದ್ಯ ಸೇವೆಯಲ್ಲಿರುವ ‘ಮಿರಾಜ್–2000’ಗಳಿಗೆ ದೀರ್ಘಾವಧಿಗೆ ಜೀವ ತುಂಬಬಹುದು. ಇವುಗಳನ್ನು ಮೇಲ್ದರ್ಜೆಗೆ ಏರಿಸಬಹುದು ಎಂಬುದು ವಾಯುಪಡೆಯ ಲೆಕ್ಕಾಚಾರ.

ಅದ್ಭುತವಾಗಿ ಕಾರ್ಯನಿರ್ವಹಿಸಬಲ್ಲ ಫ್ರಾನ್ಸ್‌ನ ಇತರೆಲ್ಲ ಯುದ್ಧ ವಿಮಾನಗಳಂತೆಯೇ ‘ಮಿರಾಜ್–2000’ ಕೂಡ ಅತ್ಯಂತ ಸಮರ್ಥ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಒಟ್ಟಾರೆ ದೃಷ್ಟಿಯಿಂದ ನೋಡುವುದಾದರೆ ಸದ್ಯ ಬಿಡಿ ಭಾಗಗಳ ಪೂರೈಕೆ ವಿಚಾರದಲ್ಲಿ ‘ಮಿರಾಜ್–2000’ ಜಗತ್ತಿನಾದ್ಯಂತ ಸಮಸ್ಯೆ ಎದುರಿಸುತ್ತಿದೆ.

ಫ್ರಾನ್ಸ್‌ನಿಂದ ಬಿಡಿ ಭಾಗಗಳ ಪೂರೈಕೆ ಪ್ರಕ್ರಿಯೆಯಂತೂ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ದೀರ್ಘಾವಧಿಗೆ ಬಿಡಿ ಭಾಗಗಳು ದೊರೆಯದೇ ಇರುವುದು ವಿಮಾನದ ಯುದ್ಧ ಸಾಮರ್ಥ್ಯವನ್ನು ಕುಂದುವಂತೆ ಮಾಡುತ್ತಿದೆ. ಹಲವು ದೇಶಗಳು ‘ಮಿರಾಜ್–2000’ ಯುದ್ಧ ವಿಮಾನವನ್ನು ಸೇವೆಯಿಂದ ನಿವೃತ್ತಿಗೊಳಿಸುತ್ತಿರುವುದಕ್ಕೆ ಇದುವೇ ಬಹು ಮುಖ್ಯ ಕಾರಣ ಎಂಬುದು ಗಮನಾರ್ಹ.

ಹೀಗಾಗಿ, ಭಾರತೀಯ ವಾಯುಪಡೆ ಜಾಣ ನಡೆ ಅನುಸರಿಸುತ್ತಿದೆ. ಸೆಕೆಂಡ್‌ ಹ್ಯಾಂಡ್ ‘ಮಿರಾಜ್-2000’ ಯುದ್ಧ ವಿಮಾನಗಳನ್ನು ಖರೀದಿಸಿ, ತನ್ನ ಬಳಿ ಈಗಾಗಲೇ ಇರುವ ವಿಮಾನಗಳಿಗೆ ಬಲ ತುಂಬುವ ಕಾಯಕದಲ್ಲಿ ನಿರತವಾಗಿದೆ.

ವಿಶೇಷ ಲೇಖನ: ಗಿರೀಶ್ ಲಿಂಗಣ್ಣ

(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ