AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ

ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್​​ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್​​ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್​ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ.

Rafale Jets: ಭಾರತದ ವಾಯುಸೇನೆ ಸೇರಿದ ಮೂರು ರಫೇಲ್​ ಯುದ್ಧವಿಮಾನಗಳು; ಫ್ರಾನ್ಸ್​ನಿಂದ ನಾನ್​-ಸ್ಟಾಪ್​ ಹಾರಾಟ
ರಫೇಲ್​ ಯುದ್ಧ ವಿಮಾನ (ಪ್ರಾತಿನಿಧಿಕ ಚಿತ್ರ)
TV9 Web
| Updated By: Lakshmi Hegde|

Updated on:Jul 22, 2021 | 8:30 AM

Share

ಮತ್ತೆ ಮೂರು ರಫೇಲ್​ ಯುದ್ಧವಿಮಾನ (Rafale Jets)ಗಳು ಬುಧವಾರ ಭಾರತ ಸೇನೆಯನ್ನು ಸೇರ್ಪಡೆಗೊಂಡಿವೆ. ಫ್ರಾನ್ಸ್​ನಿಂದ ಹೊರಟಿದ್ದ ಈ ಜೆಟ್​​ಗಳು ಮಧ್ಯೆ ಎಲ್ಲಿಯೂ ನಿಲುಗಡೆ ಪಡೆಯದೆ, ನೇರವಾಗಿ ಭಾರತೀಯ ವಾಯುಸೇನೆ (Indian Air Force) ತಲುಪಿವೆ. ಇನ್ನು ರಫೇಲ್​ ಜೆಟ್​​ಗಳಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ (UAE)ನ ವಾಯುಪಡೆ ಮಾರ್ಗಮಧ್ಯೆ, ಹಾರಾಟದ ಸ್ಥಿತಿಯಲ್ಲಿ ಇದ್ದಾಗಲೇ ಇಂಧನ ತುಂಬಿದೆ ಎಂದು ಭಾರತೀಯ ವಾಯು ಪಡೆ ಟ್ವೀಟ್​ ಮಾಡಿ ತಿಳಿಸಿದೆ. ಹಾಗೇ, ಮಾರ್ಗ ಮಧ್ಯೆ ಇಂಧನ ತುಂಬಿಕೊಟ್ಟ UAE ವಾಯುಪಡೆಗೆ ಧನ್ಯವಾದವನ್ನೂ ಹೇಳಿದೆ.

ಇದೀಗ ಭಾರತವನ್ನು ತಲುಪಿರುವ ಮೂರು ರಫೇಲ್​​ ಯುದ್ಧವಿಮಾನಗಳು, ವಾಯುಪಡೆಯ ಎರಡನೇ ಸ್ಕ್ವಾಡ್ರನ್​​ ಸೇರಿಕೊಳ್ಳಲಿವೆ. ಈ ಎರಡನೇ ಸ್ಕ್ವಾಡ್ರನ್​ಗಳು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ಜುಲೈ ತಿಂಗಳ ಅಂತ್ಯದಿಂದ ಕಾರ್ಯಾಚರಣೆ ನಡೆಸಲಿವೆ. ಹಾಗೇ, ಮೊದಲನೇ ರಫೇಲ್​ ಸ್ಕ್ವಾಡ್ರನ್​ ಈಗಾಗಲೇ ಅಂಬಾಲಾದ ವಾಯುನೆಲೆಯಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ಪೂರ್ವ ಲಡಾಖ್​ನ ಚೀನಾ ಗಡಿಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಗಸ್ತು ತಿರುಗಲು ಶುರು ಮಾಡಿವೆ. ಹಶಿಮಾರಾ ವಾಯುನೆಲೆಯಿಂದ ಹಲವು ಚೀನಾ ವಾಯುನೆಲೆಗಳು ಸಮೀಪದಲ್ಲೇ ಇದ್ದು, ಇದೀಗ ರಫೇಲ್​ ಜೆಟ್​ನ ಎರಡನೇ ಸ್ಕ್ವಾಡ್ರನ್​​ನಿಂದ ಸಹಜವಾಗಿಯೇ ಇಲ್ಲಿನ ವಾಯುಪಡೆಗೆ ಉತ್ತೇಜನ ದೊರೆಯಲಿದೆ.

ಫ್ರಾನ್ಸ್​ನೊಂದಿಗೆ ಭಾರತ 2016ರಲ್ಲಿ ಮಾಡಿಕೊಂಡ ಅನ್ವಯ ಇಲ್ಲಿಗೆ ಒಟ್ಟು 36 ರಫೇಲ್​ ಜೆಟ್​ಗಳು ಬರಲಿವೆ. ಎರಡು ಇಂಜಿನ್​​ಗಳ ರಫೇಲ್​ ಜೆಟ್​​ಗಳು ನೆಲ ಮತ್ತು ಸಮುದ್ರ ದಾಳಿ, ನ್ಯೂಕ್ಲಿಯರ್​ ಅಟ್ಯಾಕ್​ನಂತಹ ಅಪಾಯಕಾರಿ ದಾಳಿ ವಿರುದ್ಧವೂ ನಿಲ್ಲಬಹುದಾದ ಸಾಮರ್ಥ್ಯಹೊಂದಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ, ಗಾಂಜಾ ನಶೆಯಲ್ಲಿ ರಸ್ತೆ ಬದಿ ನಿಂತಿದ್ದ ವಾಹನಗಳ ಗಾಜು ಪುಡಿ ಪುಡಿ

3 more Rafale jets arrived to India from France

Published On - 8:30 am, Thu, 22 July 21

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ