ಬೆಳಗಾವಿ ಬೈಎಲೆಕ್ಷನ್​​ಗೆ ಸತೀಶ್ ಜಾರಕಿಹೊಳಿ? ಪಕ್ಷದ ಪ್ರಯತ್ನಕ್ಕೆ ಸತೀಶ್ ಜಾರಕಿಹೊಳಿ ನಿರಾಸಕ್ತಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿಸಲು ಭಾರಿ ಸರ್ಕಸ್ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಜತೆ ಈ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು ಶತಪ್ರಯತ್ನ ಪಡುತ್ತಿದ್ದಾರೆ.

ಬೆಳಗಾವಿ ಬೈಎಲೆಕ್ಷನ್​​ಗೆ ಸತೀಶ್ ಜಾರಕಿಹೊಳಿ? ಪಕ್ಷದ ಪ್ರಯತ್ನಕ್ಕೆ ಸತೀಶ್ ಜಾರಕಿಹೊಳಿ ನಿರಾಸಕ್ತಿ
ಸತೀಶ್ ಜಾರಕಿಹೊಳಿ
Updated By: ಸಾಧು ಶ್ರೀನಾಥ್​

Updated on: Jan 27, 2021 | 1:34 PM

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿಸಲು ಭಾರಿ ಸರ್ಕಸ್ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಜತೆ ಈ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು ಶತಪ್ರಯತ್ನ ಪಡುತ್ತಿದ್ದಾರೆ.

ಒಂದು ಕಡೆ ಸಿದ್ದರಾಮಯ್ಯ ಪ್ರಯತ್ನ ಪಟ್ರೆ ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರಿಂದಲೂ ಒತ್ತಡ ಹೆಚ್ಚಾಗುತ್ತಿದೆ. ಅಲ್ಲದೆ ಸತೀಶ್ ಜಾರಕಿಹೊಳಿಯನ್ನು ಕಣಕ್ಕಿಳಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್‌ನಿಂದಲೂ ಸೂಚನೆ ಬಂದಿದೆ. ಆದರೆ ಈ ಬಗ್ಗೆ ಸತೀಶ್ ಜಾರಕಿಹೊಳಿ ಮಾತ್ರ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಸತೀಶ್ ಕಣಕ್ಕಿಳಿದರೆ ಸಹೋದರರಿಂದಲೇ ಪರೋಕ್ಷವಾಗಿ ಸಹಾಯ ಸಿಗಬಹುದೆಂದು ‘ಕೈ’ ಲೆಕ್ಕಾಚಾರ ಹಾಕಿಕೊಂಡಿದೆ. ಜೊತೆಗೆ ಲಿಂಗಾಯತ ಸಮುದಾಯದ ಹೊರತಾಗಿ ಅಹಿಂದ ಮತಗಳು ಕ್ರೋಡೀಕರಣವಾಗುತ್ತೆಂಬ ಲೆಕ್ಕಾಚಾರವಿದೆ. ಸಂಪನ್ಮೂಲ ಕ್ರೋಡೀಕರಣದಲ್ಲೂ ಸತೀಶ್ ಎತ್ತಿದ ಕೈ ಎಂಬುವುದು ಕೈ ನಾಯಕರ ನಿಲುವು. ಸತೀಶ್ ಜಾರಕಿಹೊಳಿಗಿಂತ ಬೇರೆ ಉತ್ತಮ ಅಭ್ಯರ್ಥಿ ಇಲ್ಲ. ಹೀಗಾಗಿ ಸತೀಶ್ ಜಾರಕಿಹೊಳಿ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.

ಡಿ.5ರ ಬಂದ್​ಗೆ ಕಾಂಗ್ರೆಸ್ ಬೆಂಬಲ ಖಂಡಿತ ಇಲ್ಲ: ಸತೀಶ್ ಜಾರಕಿಹೊಳಿ ಸ್ಪಷ್ಟನೆ

Published On - 1:33 pm, Wed, 27 January 21