ಬೆಳಗಾವಿ: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ ಘಟನೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅಭ್ಯರ್ಥಿಗಳಿಬ್ಬರು ಸೇರಿ 14 ಜನ ಸೆರೆಯಾಗಿದ್ದಾರೆ. ರಾಮತೀರ್ಥ ನಗರದ ಎಸ್.ಎಸ್. ಡೆಕೋರೆಟರ್ ಹಾಗೂ ಇವೆಂಟ್ ಪ್ಲ್ಯಾನರ್ ಕಚೇರಿ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಬ್ಲ್ಯೂಟೂತ್ ಮೂಲಕ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ 33 ಮೊಬೈಲ್, 9 ಮಾಸ್ಟರ್ ಕಾರ್ಡ್, 19 ಬ್ಲ್ಯೂಟೂತ್, 1 ಟ್ಯಾಬ್, ಲ್ಯಾಪ್ ಟಾಪ್, ಪ್ರಿಂಟರ್, ಕಾರು ಹಾಗೂ 3 ಬೈಕ್ ಜಪ್ತಿ ಮಾಡಲಾಗಿದೆ. ವನಿತಾ ವಿದ್ಯಾಲಯದಲ್ಲಿ ಓರ್ವ ಮಹಿಳಾ ಅಭ್ಯರ್ಥಿ ಬಂಧನವಾಗಿದೆ. ಸರ್ದಾರ್ ಪಿಯು ಕಾಲೇಜಿನಲ್ಲಿ ಓರ್ವ ಅಭ್ಯರ್ಥಿ ಬಂಧನವಾಗಿದೆ. ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೊಲೀಸರು ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ನಗರದ ಮಾಳಮಾರುತಿ, ಖಡೇಬಜಾರ್ ಠಾಣೆ ಕ್ಯಾಂಪ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಪರೀಕ್ಷೆ ವೇಳೆ ಅಭ್ಯರ್ಥಿ ಬಳಿ ಮೊಬೈಲ್ ಪತ್ತೆ
ಕಾನ್ಸ್‌ಟೇಬಲ್ ಪರೀಕ್ಷೆ ವೇಳೆ ಅಭ್ಯರ್ಥಿ ಬಳಿ ಮೊಬೈಲ್ ಪತ್ತೆ ಆದ ಘಟನೆ ಬೆಂಗಳೂರಿನ ಸಪ್ತಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಪರೀಕ್ಷೆ ಬರೆಯುತ್ತಿದ್ದ ಬೆಳಗಾವಿಯ ಮಲ್ಲಪ್ಪ ಬಳಿ ಮೊಬೈಲ್ ಪತ್ತೆ ಆಗಿದೆ. ಅಭ್ಯರ್ಥಿ ಮಲ್ಲಪ್ಪನನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 3,533 ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಬೆಂಗಳೂರಿನ 76 ಕೇಂದ್ರಗಳಲ್ಲಿ ಕಾನ್ಸ್‌ಟೇಬಲ್ ಪರೀಕ್ಷೆ ನಡೆದಿತ್ತು.
ಇದನ್ನೂ ಓದಿ: Crime News: ಅಕ್ರಮವಾಗಿ 1 ಲಕ್ಷಕ್ಕೆ ಮಾರಲು ತಂದಿದ್ದ ಹಂದಿ ಚಿಪ್ಪು ಜಪ್ತಿ; ಇಬ್ಬರ ಬಂಧನ
ಇದನ್ನೂ ಓದಿ: Ananya Pandey: ಆರ್ಯನ್ ಖಾನ್ ಬಂಧನ ಪ್ರಕರಣ; ಎನ್ಸಿಬಿ ವಿಚಾರಣೆ ವೇಳೆ ಭಯಗೊಂಡು ಕಣ್ಣೀರಿಟ್ಟಿದ್ದ ಅನನ್ಯಾ ಪಾಂಡೆ