Crime News: ಅಕ್ರಮವಾಗಿ 1 ಲಕ್ಷಕ್ಕೆ ಮಾರಲು ತಂದಿದ್ದ ಹಂದಿ ಚಿಪ್ಪು ಜಪ್ತಿ; ಇಬ್ಬರ ಬಂಧನ

Crime News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ರಾಷ್ಟ್ರೀಯ ಹೆದ್ದಾರಿ 4ರ ಲೋಹಿತ್ ನಗರ ಬಳಿ, ಅಕ್ರಮವಾಗಿ ಕಸಾಯಿ ಖಾನೆಗೆ ಹಸುಗಳ ಸಾಗಾಟ ಮಾಡುತ್ತಿದ್ದ 8 ಹಸುಗಳ ರಕ್ಷಣೆ ಮಾಡಲಾಗಿದೆ. ದುರಾದೃಷ್ಟವಷಾತ್ ಒಂದು ಹಸು ಉಸಿರುಗಟ್ಟಿ ಸಾವನ್ನಪ್ಪಿದೆ.

Crime News: ಅಕ್ರಮವಾಗಿ 1 ಲಕ್ಷಕ್ಕೆ ಮಾರಲು ತಂದಿದ್ದ ಹಂದಿ ಚಿಪ್ಪು ಜಪ್ತಿ; ಇಬ್ಬರ ಬಂಧನ
ಹಂದಿ ಚಿಪ್ಪು ಜಪ್ತಿ

ಬೆಂಗಳೂರು: ನಗರದಲ್ಲಿ ಹಂದಿ ಚಿಪ್ಪು ಮಾರುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8 ಕೆಜಿ 200 ಗ್ರಾಂ ತೂಕದ ಹಂದಿ ಚಿಪ್ಪು ಜಪ್ತಿ ಮಾಡಲಾಗಿದೆ. ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಅಕ್ರಮ ಪತ್ತೆಯಾಗಿದೆ. ದಕ್ಷಿಣ ಭಾರತದಲ್ಲಿ ಇದು ಅತ್ಯಂತ ದೊಡ್ಡ ಕಾರ್ಯಾಚರಣೆಯಾಗಿದೆ. ಬಳ್ಳಾರಿಯಲ್ಲಿ ಚಿಪ್ಪು ಹಂದಿ ಬೇಟೆಯಾಡಿದ್ದ ದುಷ್ಕರ್ಮಿಗಳು, ಬೆಂಗಳೂರಿನಲ್ಲಿ 1 ಲಕ್ಷಕ್ಕೆ ಮಾರಾಟ ಮಾಡಲು ತಂದಿದ್ದರು ಎಂದು ತಿಳಿದುಬಂದಿದೆ. ಇಬ್ರಾಹಿಂ, ಮರಿಸ್ವಾಮಿ ಎಂಬವರನ್ನು ಬಂಧಿಸಿ ಹಂದಿ ಚಿಪ್ಪು ಜಪ್ತಿ ಮಾಡಿಕೊಂಡಿದ್ದಾರೆ.

ಚೀನಾದಲ್ಲಿ ಹಂದಿ ಚಿಪ್ಪಿಗೆ ಅತ್ಯಂತ ಬೇಡಿಕೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ಅಂದಾಜು 4 ಲಕ್ಷ ರೂಪಾಯಿ ಮೌಲ್ಯವಿದೆ ಎಂದು ತಿಳಿದುಬಂದಿದೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಅಕ್ರಮವಾಗಿ ಹಸುಗಳ ಸಾಗಾಟ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ರಾಷ್ಟ್ರೀಯ ಹೆದ್ದಾರಿ 4ರ ಲೋಹಿತ್ ನಗರ ಬಳಿ, ಅಕ್ರಮವಾಗಿ ಕಸಾಯಿ ಖಾನೆಗೆ ಹಸುಗಳ ಸಾಗಾಟ ಮಾಡುತ್ತಿದ್ದ 8 ಹಸುಗಳ ರಕ್ಷಣೆ ಮಾಡಲಾಗಿದೆ. ದುರಾದೃಷ್ಟವಷಾತ್ ಒಂದು ಹಸು ಉಸಿರುಗಟ್ಟಿ ಸಾವನ್ನಪ್ಪಿದೆ. ಘಟನಾ ಸ್ಥಳದಲ್ಲಿ, ಭಜರಂಗದಳದ ಕಾರ್ಯಕರ್ತರು ವಾಹನ ತಡೆಯುತ್ತಿದ್ದಂತೆ ಚಾಲಕ ಮತ್ತು ಸಹಾಯಕ ಪರಾರಿಯಾಗಲು ಯತ್ನಿಸಿದ್ದಾರೆ. ಪರಾರಿಯಾಗಲು ಯತ್ನಿಸಿದ್ದವರನ್ನ ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ. ಹಸುಗಳ ಜೊತೆ ಕ್ಯಾಂಟರ್ ವಾಹನ ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಟೌನ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ದನದ ಮಾಂಸ ವಶಕ್ಕೆ
ಉಡುಪಿ ಜಿಲ್ಲೆಯ ಕಾರ್ಕಳದ ಸಂಕಲರಿ ಎಂಬಲ್ಲಿ ದನ, ದನದ ಮಾಂಸದ ಜೊತೆ ಆರೋಪಿಯನ್ನು ಬಂಧಿಸಲಾಗಿದೆ. ಸಂಕಲಕರಿಯದಲ್ಲಿ ಆರೋಪಿ ರಹೀಂ ಬಂಧನವಾಗಿದೆ. ಆರೋಪಿಯಿಂದ 5 ದನ, 3 ಕರು, 25 ಕೆಜಿ ದನದ ಮಾಂಸ ವಶಕ್ಕೆ ಪಡೆಯಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಉಡುಪಿ: ಗಾಂಜಾ, ಬ್ರೌನ್ ಶುಗರ್ ಜಪ್ತಿ
ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ 1 ಕೆಜಿ 800 ಗ್ರಾಂ, 1 ಗ್ರಾಂ ಬ್ರೌನ್ ಶುಗರ್ ಗಾಂಜಾ ಜಪ್ತಿ ಮಾಡಲಾಗಿದೆ. ಅಮಲು ಪದಾರ್ಥ ಸಾಗಾಟ ಆರೋಪದಲ್ಲಿ ಅಸ್ಬಾಭಾಗ್​ನ ಮೊಹಮ್ಮದ್ ಜಾಫರ್​ ಗುಡುಮಿಯಾ ಸೆರೆ ಆಗಿದ್ದಾರೆ. ಉತ್ತರಕನ್ನಡ ಜಿಲ್ಲೆ ಕಾರವಾರದ ಅಸ್ಬಾಭಾಗ್​ನ​ ಜಾಫರ್ ಸೆರೆ ಆಗಿದ್ದಾರೆ. ಕುಂದಾಪುರ ಸಿಪಿಐ ಶ್ರೀಕಾಂತ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಮಂಗಳೂರು ಡಿಸಿಪಿ ಕಾರಿನ ಮೇಲೆ ಮರಳು ಲಾರಿ ಹತ್ತಿಸಲು ಯತ್ನ: ಚಾಲಕನ ಬಂಧನ

ಇದನ್ನೂ ಓದಿ: ಪಿಸ್ತೂಲ್ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರ ಬಂಧನ: 2 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶಕ್ಕೆ

Click on your DTH Provider to Add TV9 Kannada