ವಾಷಿಂಗ್ಟನ್​ನ ಟಕೋಮಾದಲ್ಲಿ ಗುಂಡಿನ ದಾಳಿ; ನಾಲ್ವರ ಹತ್ಯೆ

ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ವಾಷಿಂಗ್ಟನ್​ನ ಟಕೋಮಾದಲ್ಲಿ ಗುಂಡಿನ ದಾಳಿ; ನಾಲ್ವರ ಹತ್ಯೆ
ವಾಷಿಂಗ್ಟನ್​ನಲ್ಲಿ ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಪೊಲೀಸರು

ವಾಷಿಂಗ್ಟನ್: ಅಮೆರಿಕದ ಟಕೋಮಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಿನ್ನೆ ಸಂಜೆಯ ವೇಳೆಗೆ ಆತನ ಕೂಡ ಸಾವನ್ನಪ್ಪಿದ್ದಾರೆ ಎಂದು ಟಕೋಮಾ ಪೊಲೀಸರು ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ಈ ಗುಂಡಿನ ದಾಳಿ ನಡೆದಿದೆ. ಸಾವನ್ನಪ್ಪಿರುವವರೆಲ್ಲರೂ 35 ವರ್ಷದೊಳಗಿನವರಾಗಿದ್ದಾರೆ. ಟಕೋಮಾ ನಗರದ ಈಸ್ಟ್ ಸೈಡ್ ಸಮೀಪದ ಎವೆರೆಟ್ ಸ್ಟ್ರೀಟ್ ನ 4200 ಬ್ಲಾಕ್ ನಲ್ಲಿ ಈ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ 5 ಗಂಟೆಯ ವೇಳೆಗೆ ಗುಂಡಿನದ ದಾಳಿ ನಡೆದಿದ್ದು, ಇದಕ್ಕೆ ಕಾರಣವೇನೆಂಬುದು ಪತ್ತೆಯಾಗಿಲ್ಲ. ದಾಳಿಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ವ್ಯಕ್ತಿ ಸಂಜೆ 6.30ರ ವೇಳೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ.

ಅಮೆರಿಕದ ಯೂನಿವರ್ಸಿಟಿಯೊಂದರಲ್ಲಿ ಕೆಲವು ದಿನಗಳ ಹಿಂದೆ ಗುಂಡಿನ ದಾಳಿಯಾಗಿದ್ದು, ಈ ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದ. ಏಳು ಮಂದಿ ಗಾಯಗೊಂಡಿದ್ದರು. ಲೂಯಿಸಿಯಾನ ರಾಜ್ಯದ ಗ್ರಾಂಬ್ಲಿಂಗ್​ ಸ್ಟೇಟ್​ ವಿಶ್ವವಿದ್ಯಾಲಯದಲ್ಲಿ ಈ ಗುಂಡಿನ ದಾಳಿ ನಡೆದಿದ್ದು, ಅಕ್ಟೋಬರ್​ 13ರಂದು ಇದೇ ವಿಶ್ವವಿದ್ಯಾಲಯದಲ್ಲಿ ದುಷ್ಕರ್ಮಿಗಳು ಫೈರಿಂಗ್​ ನಡೆಸಿದ್ದರು.

ಇದನ್ನೂ ಓದಿ: ಪೂಂಚ್​​ನಲ್ಲಿ 12ನೇ ದಿನಕ್ಕೆ ಕಾಲಿಟ್ಟ ಉಗ್ರರ ವಿರುದ್ಧದ ಕಾರ್ಯಾಚರಣೆ; ಸೇನೆಯಿಂದ ಗುಂಡಿನ ದಾಳಿ

ಯುಎಸ್​​ನ ಈ ವಿಶ್ವವಿದ್ಯಾಲಯದಲ್ಲಿ ಒಂದೇ ವಾರದಲ್ಲಿ 2ನೇ ಬಾರಿ ಗುಂಡಿನ ದಾಳಿ; ಒಬ್ಬ ಸಾವು, ಏಳುಮಂದಿಗೆ ಗಾಯ

Click on your DTH Provider to Add TV9 Kannada