ಬೆಳಗಾವಿ: ಬಣ್ಣ ಬಣ್ಣದ ಸೀರೆಯುಟ್ಟು ಮಹಿಳೆಯರ ಭವ್ಯ ಮೆರವಣಿಗೆ. ಕಣ್ಣಾಯಿಸಿದಷ್ಟು ದೂರ ಜನಸಾಗರ. ಎಲ್ಲರ ತಲೆಯ ಮೇಲೊಂದು ಬಿಳಿ ಬಣ್ಣದ ಮೂಟೆ. ಇದರ ಜೊತೆ ಜೊತೆಗೆ ದೇವರ ನಾಮಸ್ಮರಣೆ. ಅರ್ರೆ ಇದೆನಪ್ಪಾ, ಎಲ್ರು ತಲೆ ಮೇಲೆ ಮೂಟೆ ಇಟ್ಕೊಂಡು ಬರ್ತಿದ್ದಾರೆ.
9ನೇ ದಿನ ನಡೆಯುವ ರೊಟ್ಟಿ ಜಾತ್ರೆ:
ಪ್ರಸಾದ ಹಂಚಿ ತಿನ್ನುವುದೇ ಜಾತ್ರೆ ವಿಶೇಷ:
ಇನ್ನು, ಖಡಕ್ ರೊಟ್ಟಿಯ ಕಮಾಲ್ ಒಂದ್ಕಡೆ ಆಗಿದ್ರೆ, ಮತ್ತೊಂದ್ಕಡೆ ಗ್ರಾಮೀಣ ಸೊಗಡಿನ ಲೋಕವೇ ಸೃಷ್ಟಿಯಾಗಿತ್ತು. ಗುಡಿಸಲಿನಲ್ಲಿ ರೊಟ್ಟಿ ಮಾಡುವುದು. ಗೋದಿಯನ್ನ ಕುಟ್ಟುವುದು. ಬಾವಿಯಿಂದ ನೀರು ಸೇದುವುದರ ಜೊತೆಗೆ ಹಳ್ಳಿ ಕಟ್ಟೆಯೂ ಸಿದ್ಧವಾಗಿತ್ತು. ಅದೇನೆ ಇರಲಿ, ಜಾತ್ರೆ ಅಂದ್ರೆ ಕೇವಲ ದೇವರ ಆರಾಧನೆ ಮಾಡಿ ಪ್ರಸಾದ ಸೇವಿಸುವುದಲ್ಲ. ಬದ್ಲಿಗೆ ಪ್ರಸಾದವನ್ನ ತಾವೇ ತಂದು ಹಂಚಿ ತಿನ್ಬೇಕು ಎನ್ನುವುದೇ ಈ ಜಾತ್ರೆಯ ವಿಶೇಷ.