ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾದ ಜಿಲ್ಲಾಡಳಿತ: ರೈತರು ಮಾಡಿದ್ದೇನು ಗೊತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Nov 16, 2023 | 7:24 PM

Belagavi News: ಅಲ್ಪಸ್ವಲ್ಪ ಭೂಮಿಯಲ್ಲೇ ರೈತರು ಬದುಕು ಕಟ್ಟಿಕೊಳುತ್ತಿದ್ದರು. ಜಿಲ್ಲಾಡಳಿತ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗುತ್ತೆ. ಸರಿಯಾಗಿ ಪರಿಹಾರ ಕೂಡ ನೀಡದೆ ಕೆಲಸ ಆರಂಭಿಸಿದ್ದಕ್ಕೆ ಇದೀಗ ರೈತರು ಬೀದಿಗಿಳಿದಿದ್ದಾರೆ. ಪರಿಹಾರ ನೀಡುವವರೆಗೂ ಕಾಮಗಾರಿ ಮಾಡಲು ಬಿಡುವುದಿಲ್ಲ ಅಂತಾ ಪಟ್ಟು ಹಿಡಿದು ಎಲ್ಲ ಕಾರ್ಮಿಕರನ್ನ ಹೊರ ಹಾಕಿದ್ದಾರೆ.

ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾದ ಜಿಲ್ಲಾಡಳಿತ: ರೈತರು ಮಾಡಿದ್ದೇನು ಗೊತ್ತಾ?
ರೈತರು ಆಕ್ರೋಶ
Follow us on

ಬೆಳಗಾವಿ, ನವೆಂಬರ್​​​ 16: ಅಲ್ಲಿ ರೈತರ (farmers) ವಿರೋಧದ ನಡುವೆಯೂ ಫಲವತ್ತಾದ ಭೂಮಿಯನ್ನ ಪಡೆದುಕೊಳ್ಳಲಾಗಿತ್ತು. ಇರುವ ಅಲ್ಪಸ್ವಲ್ಪ ಭೂಮಿಯಲ್ಲೇ ರೈತರು ಬದುಕು ಕಟ್ಟಿಕೊಳುತ್ತಿದ್ದರು. ಜಿಲ್ಲಾಡಳಿತ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗುತ್ತೆ. ಸರಿಯಾಗಿ ಪರಿಹಾರ ಕೂಡ ನೀಡದೆ ಕೆಲಸ ಆರಂಭಿಸಿದ್ದಕ್ಕೆ ಇದೀಗ ರೈತರು ಬೀದಿಗಿಳಿದಿದ್ದಾರೆ. ಅಷ್ಟಕ್ಕೂ ಆಕ್ರೋಶಗೊಂಡ ರೈತರು ಇಂದು ಮಾಡಿದ್ದೇನೂ? ತಮ್ಮದೇ ಕ್ಷೇತ್ರದ ರೈತರಿಗೆ ಹೆಬ್ಬಾಳ್ಕರ್ ಕೊಟ್ಟ ಭರವಸೆ ಏನು ಎಂದು ತಿಳಿಯಲು ಮುಂದೆ ಓದಿ.

ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ 2019ರಲ್ಲಿ ಹಲಗಾ ಗ್ರಾಮದ ಹೊರ ವಲಯದಲ್ಲಿ 128 ಎಕರೆ ಜಮೀನಿನಲ್ಲಿ ಜಿಲ್ಲಾಡಳಿತದ ವತಿಯಿಂದ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮಾಡಲು ಮುಂದಾಗುತ್ತೆ. ಇದಕ್ಕೆ ಭತ್ತ ಬೆಳೆಯುವ ಫಲವತ್ತಾದ ಭೂಮಿ ನೀಡಲು ರೈತರು ಅಂದು ವಿರೋಧ ಮಾಡಿರುತ್ತಾರೆ. ಆದರೆ ಇದನ್ನ ಧಿಕ್ಕರಿಸಿಯೂ ಜಿಲ್ಲಾಡಳಿತ ರೈತರ ಜಮೀನು ಕಬ್ಜಾ ಮಾಡಿ ಕಾಮಗಾರಿ ಆರಂಭಿಸುತ್ತಾರೆ.

ಇದನ್ನೂ ಓದಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಭ್ರಷ್ಟಾಚಾರ ಆರೋಪ: ಮನೆ ಕಟ್ಟಿಸಿಕೊಡೋದಾಗಿ ಹಣ ಪಾವತಿಸಿಕೊಂಡು ಮೋಸ

ಈ ವೇಳೆ 150ಕ್ಕೂ ಅಧಿಕ ರೈತರ ಪೈಕಿ ಎಂಬತ್ತಕ್ಕೂ ಅಧಿಕ ರೈತರಿಗೆ ಅಲ್ಪ ಪ್ರಮಾಣದಲ್ಲಿ ಅಂದರೆ ಎಕರೆಗೆ ಕೇವಲ ಮೂರುವರೆ ಲಕ್ಷ ರೂ. ಪರಿಹಾರ ಕೊಟ್ಟು ಕೈ ತೊಳೆದುಕೊಂಡಿರುತ್ತಾರೆ. ಅಂದಿನಿಂದ ಇಂದಿನವರೆಗೂ ಎಲ್ಲರಿಗೂ ಪರಿಹಾರ ಕೊಡ್ತೇವಿ ಹೆಚ್ಚುವರಿ ಪರಿಹಾರ ಕೊಡ್ತೇವಿ ಅಂತಾ ಭಾಗಶಃ ಕೆಲಸ ಮುಗಿಸಿದ್ದಾರೆ. ಆದರೆ ಈ ವರೆಗೂ ಪರಿಹಾರ ಬಂದಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಇಂದು ಕಾಮಗಾರಿ ಬಂದ್ ಮಾಡಿದರು, ಅಷ್ಟೇ ಅಲ್ಲದೇ ಟಿಪ್ಪರ್ ಮೇಲೆ ಕಲ್ಲೇಸೆದು ಆಕ್ರೋಶ ಹೊರ ಹಾಕಿದರು. ಪರಿಹಾರ ನೀಡುವವರೆಗೂ ಕಾಮಗಾರಿ ಮಾಡಲು ಬಿಡುವುದಿಲ್ಲ ಅಂತಾ ಪಟ್ಟು ಹಿಡಿದು ಎಲ್ಲ ಕಾರ್ಮಿಕರನ್ನ ಹೊರ ಹಾಕಿದ್ದಾರೆ.

ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಅಲರ್ಟ್ ಆದ ಸ್ಥಳೀಯ ಶಾಸಕಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರೈತರೊಂದಿಗೆ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಡಿಸಿ ಮತ್ತು ಜಮೀನು ಕಳೆದುಕೊಂಡ ರೈತರ ಜತೆಗೆ ಸಭೆ ನಡೆಸಿದರು. ಈ ವೇಳೆ ಕೂಡ ರೈತರು ಸಚಿವೆ ಮತ್ತು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆಗ್ರಹ; ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದ ಸಾರ್ವಜನಿಕರು

ಐದು ವರ್ಷ ಆಗ್ತಾ ಬಂದ್ರೂ ಈ ವರೆಗೂ ಪರಿಹಾರ ಕೊಟ್ಟಿಲ್ಲ, ಅಧಿಕಾರಿಗಳು ಯಾವುದಕ್ಕೂ ಸ್ಪಂದನೆ ಮಾಡುತ್ತಿಲ್ಲ. ಎಕರೆಗೆ ನಾಲ್ಕು ಕೋಟಿ ಹಣ ನೀಡುವಂತೆ ಪಟ್ಟು ಹಿಡಿದು ಕುಳಿತ್ರೂ. ಇದಕ್ಕೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ವಿಚಾರವನ್ನ ಸಚಿವ ಸಂಪುಟ ಸಭೆಯಲ್ಲಿಟ್ಟು ಹೆಚ್ಚಿನ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಅಂತಾ ಹೇಳಿದ್ದಾರೆ. ಈ ಕಾರಣಕ್ಕಾಗಿ ಸದ್ಯ ರೈತರು ಹೋರಾಟದಿಂದ ಹಿಂದೆ ಸರಿದಿದ್ದಾರೆ.

ಫಲವತ್ತಾದ ಭೂಮಿಯನ್ನ ರೈತರಿಂದ ಕಸಿದುಕೊಂಡು ಬಳಿಕ ಕವಡೆ ಕಾಸಿನಲ್ಲಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಅಧಿಕಾರಿಗಳ ವಿರುದ್ದ ಇದೀಗ ರೈತರು ಬೀದಿಗಿಳಿದಿದ್ದಾರೆ. ಒಂದು ಕಡೆ ಭೂಮಿ ಇಲ್ಲಾ, ಪರಿಹಾರವೂ ಸಿಗದ ಹಿನ್ನೆಲೆ ಕಂಗಾಲಾಗಿರುವ ರೈತರು ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡಲ್ಲಾ ಅಂತಿದ್ದು ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಡುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.