Ramesh Jarkiholi: ಅಣ್ಣ ತಮ್ಮಂದಿರಂತಿದ್ದ ಡಿಕೆಶಿ ಮತ್ತು ನನ್ನ ಸಂಬಂಧ ಹಾಳಾಗಿದ್ದೇ ಬೆಳಗಾವಿ ಗ್ರಾಮಾಂತರ ಶಾಸಕಿ, ವಿಷಕನ್ಯೆಯಿಂದ – ರಮೇಶ್ ಜಾರಕಿಹೊಳಿ

| Updated By: ಆಯೇಷಾ ಬಾನು

Updated on: Jan 30, 2023 | 3:09 PM

ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ ನಡುವೆ ವೈಯಕ್ತಿಕ ಜಿದ್ದು ಹೆಚ್ಚಾಗಿದೆ. ನನ್ನನ್ನು ಟಾರ್ಗೆಟ್ ಮಾಡಿ ಡಿಕೆಶಿ ಹೊಡೆದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಾನೂ ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿ.ಕೆ. ಶಿವಕುಮಾರ್​ ನಾಲಾಯಕ್ ಎಂದು ರಮೇಶ್ ಜಾರಕಿಹೊಳಿ ಗರಂ ಆಗಿದ್ದಾರೆ.

Ramesh Jarkiholi: ಅಣ್ಣ ತಮ್ಮಂದಿರಂತಿದ್ದ ಡಿಕೆಶಿ ಮತ್ತು ನನ್ನ ಸಂಬಂಧ ಹಾಳಾಗಿದ್ದೇ ಬೆಳಗಾವಿ ಗ್ರಾಮಾಂತರ ಶಾಸಕಿ, ವಿಷಕನ್ಯೆಯಿಂದ - ರಮೇಶ್ ಜಾರಕಿಹೊಳಿ
ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ (ಸಂಗ್ರಹ ಚಿತ್ರ)
Follow us on

ಬೆಳಗಾವಿ: ಬಿಜೆಪಿ ಶಾಸಕ, ಮಾಜಿ ಮಂತ್ರಿ, ಸಿಡಿ ಕೇಸ್​​ ಆರೋಪಿ ರಮೇಶ್ ಜಾರಕಿಹೊಳಿ ನಗರದ ಖಾಸಗಿ ಹೋಟೆಲ್​ನಲ್ಲಿ  ಸುದ್ದಿಗೋಷ್ಠಿ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಡಿಕೆಶಿ, ರಮೇಶ್ ಜಾರಕಿಹೊಳಿ ನಡುವೆ ವೈಯಕ್ತಿಕ ಜಿದ್ದು ಹೆಚ್ಚಾಗಿದೆ. ನನ್ನನ್ನು ಟಾರ್ಗೆಟ್ ಮಾಡಿ ಡಿಕೆ ಶಿವಕುಮಾರ್ ಹೊಡೆದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಾನೂ ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್​ ನಾಲಾಯಕ್. ನನ್ನ ಬಳಿ 128 ಸಾಕ್ಷ್ಯಗಳಿವೆ ಎಂದು ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ. ರಮೇಶ್ ಜಾರಕಿಹೊಳಿ ಮಾಡಿದ ಆರೋಪಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ಆರೋಪ

  1. ‘ಡಿಕೆಶಿ ಹರಿದ ಚಪ್ಪಲಿ ಹಾಕಿದ್ದ.. ಲೂಟಿ, ಹಗರಣ ಮಾಡಿ ಬಂದಿದ್ದಾನೆ’: 1985ರಲ್ಲಿ ನಾನು, ಡಿಕೆ ಶಿವಕುಮಾರ್ ಇಬ್ಬರೂ ಒಟ್ಟಿಗೆ ಚುನಾವಣೆಗೆ ಬಂದೆವು. ನಾನು ಉದ್ಯಮ ನಡೆಸಿ ಈ ಹಂತಕ್ಕೆ ಬಂದಿದ್ದೇನೆ. ಡಿ.ಕೆ.ಶಿವಕುಮಾರ್​ ಲೂಟಿ ಮಾಡಿ ಕೋಟ್ಯಂತರ ಹಣ ಮಾಡಿದ್ದಾನೆ. ನಾನು ಕಾಂಗ್ರೆಸ್​ನಲ್ಲಿ ಸ್ಪರ್ಧೆ ಮಾಡಿದಾಗ, ಡಿಕೆಶಿ ಹರಿದ ಚಪ್ಪಲಿ ಹಾಕುತ್ತಿದ್ದ. ಈಗ ಸಾವಿರಾರು ಕೋಟಿ ಒಡೆಯ, ರಾಜ್ಯ ಲೂಟಿ ಮಾಡಿ ಬಂದಿದ್ದಾನೆ ಅಂತ ಏಕವಚನದಲ್ಲೇ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.
  2. ಜಲಸಂಪನ್ಮೂಲ ಇಲಾಖೆ ಸಚಿವನಾಗಿದ್ದಾಗ ಟೆಂಡರ್​ಗೆ ಒತ್ತಡ: ನಾನು ಜಲಸಂಪನ್ಮೂಲ ಇಲಾಖೆ ಸಚಿವನಾಗಿದ್ದಾಗ ಅವರು ಹೇಳಿದವರಿಗೆ ಟೆಂಡರ್​ ನೀಡುವಂತೆ ಒತ್ತಾಯಿಸುತ್ತಿದ್ದರು. ಅವರು ಹೇಳಿದಂತೆ ಇಲಾಖೆಯನ್ನು ಒಪ್ಪಿಸಲು ನಾನು ನಿರಾಕರಿಸಿದೆ. ಅವರು ಹೇಳಿದಂತೆ ಕೇಳದಿದ್ದಾಗ ಸಿ.ಡಿ. ಬಿಡುಗಡೆ ಮಾಡಿದರು ಎಂದು ಸಿ.ಡಿ. ಪ್ರಕರಣದ ಬಗ್ಗೆ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
  3. ‘ಡಿಕೆಶಿ, ಹೆಬ್ಬಾಳ್ಕರ್​ಗೆ ಟಿಕೆಟ್ ಬೇಡ ಎಂದಿದ್ರು.. ನಾನೇ ಟಿಕೆಟ್ ಕೊಡಿಸಿದ್ದೆ’: ಹಿಂದೆ ಒಮ್ಮೆ ಡಿಕೆಶಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಟಿಕೆಟ್​ ಕೊಡೋದು ಬೇಡ ಅಂತ ಹೇಳಿದ್ರು. ಆಗ ಡಿಕೆಶಿಗೆ ಟಿಕೆಟ್​ ಕೊಡ್ಬೇಕು ಅಂತ ಹೇಳಿದ್ದೆ ಎಂದು ಸ್ವತಃ ಸಾಹುಕಾರ್​ ಹೇಳ್ತಿದ್ದಾರೆ.
  4. ‘ಬೆಳಗಾವಿ ಗ್ರಾಮೀಣ ಶಾಸಕಿಯಿಂದಲೇ ಡಿಕೆ, ನನ್ನ ಸಂಬಂಧ ಹಾಳಾಗಿದ್ದು’: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ವಿರುದ್ಧ ರಮೇಶ್​ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಮೊದಲು ನಾನೂ ಮತ್ತು ಡಿ.ಕೆ ಶಿವಕುಮಾರ್ ಚೆನ್ನಾಗಿಯೇ ಇದ್ವಿ. ಆದ್ರೆ ಬೆಳಗಾವಿ ಗ್ರಾಮೀಣ ಶಾಸಕಿಯಿಂದ ನಮ್ಮ ಸಂಬಂಧ ಹಾಳಾಯ್ತು ಅಂತ ಹೆಬ್ಬಾಳ್ಕರ್​ ಹೆಸರೇಳದೇ ಕೌಂಟರ್​ ಕೊಟ್ಟಿದ್ದಾರೆ. ಅಣ್ಣ ತಮ್ಮಂದಿರಂತಿದ್ದ ಡಿಕೆಶಿ, ರಮೇಶ್ ಜಾರಕಿಹೊಳಿ ಸಂಬಂಧ ಹಾಳಾಗಿದ್ದೇ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿಯಿಂದ ಎಂದಿದ್ದಾರೆ.
  5. ‘ಡಿ.ಕೆ ಶಿವಕುಮಾರ್​ ನಾನು ಒಳ್ಳೆಯ ಮಿತ್ರರು.. ಅಣ್ಣ ತಮ್ಮರಂತೆ ಇದ್ವಿ’: ಸ್ನೇಹ ಸಂಬಂಧಗಳನ್ನ ಮೆಲುಕು ಹಾಕುತ್ತಾ ಹೆಬ್ಬಾಳ್ಕರ್​ ವಿರುದ್ಧ ರಮೇಶ್ ಜಾರಕಿಹೊಳಿ ಕೆಂಡಕಾರಿದ್ದಾರೆ. ಡಿ.ಕೆ ಶಿವಕುಮಾರ್​ ನಾನು ಒಳ್ಳೆಯ ಮಿತ್ರರು. ಉಷಾ ಶಿವಕುಮಾರ್ ಅಂದ್ರೆ ಡಿಕೆಶಿ ಪತ್ನಿ ನನಗೆ ಪಕ್ಷ ಬಿಡಬೇಡ ಅಂತ ಮನವೊಲಿಸಿದ್ರು. ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಮನವೊಲಿಕೆಗೆ ಯತ್ನಿಸಿದ್ದರು. ನಿನ್ನ ಪತಿ ಸರಿಯಿಲ್ಲ ತಂಗಿ, ಹಾಗಾಗಿ ಪಕ್ಷ ತೊರೆಯುವೆ ಎಂದು ಡಿ.ಕೆ.ಶಿವಕುಮಾರ್ ಪತ್ನಿಗೆ ಹೇಳಿ ನಾನು ಕಾಂಗ್ರೆಸ್​ ಪಕ್ಷ ತೊರೆದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
  6. ನನ್ನ ಹೆಸರು ಹಾಳುಮಾಡಲು ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ: ಆಪರೇಷನ್​ ಕಮಲ ನಂತರ ಬಾಂಬೆಗೆ ತೆರಳಿದ್ದ ವೇಳೆ ಒಂದು ಕರೆ ಬಂತು. ಈ ವೇಳೆ ಡ್ಯಾಶ್​ ಡ್ಯಾಶ್ ಅವಾಚ್ಯ ಪದಗಳಿಂದ ಬೈದಿದ್ದೆ. ಅದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ಸೇರಿಸಿ ಈಗಿನ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ನನ್ನ ಹೆಸರು ಹಾಳು ಮಾಡಲು ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
  7. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ವಿಷಕನ್ಯೆಯೇ ಕಾರಣ: 2000ನೇ ಇಸವಿಯಿಂದ ರಾಜ್ಯದಲ್ಲಿ ಸಿಡಿ ಪ್ರಕರಣ ನಡೆಯುತ್ತಿದೆ. ಹಲವಾರು ರಾಜಕಾರಣಿಗಳು, ಅಧಿಕಾರಿಗಳನ್ನು ಸಿಲುಕಿಸಿದ್ದಾರೆ. ಸಿಡಿ ತೋರಿಸಿ ಬ್ಲಾಕ್​ಮೇಲ್​ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಕೋ ಆಪರೇಟಿವ್ ಬ್ಯಾಂಕ್​ನಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ವಿಷಕನ್ಯೆಯೇ ಕಾರಣ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
  8. ಶಾಸಕರು, ಅಧಿಕಾರಿಗಳು ಸೇರಿದಂತೆ 120 ಜನರ ಸಿಡಿಗಳಿವೆ: ಇನ್ನು ರಮೇಶ್ ಜಾರಕಿಹೊಳಿ ಮಾತು ಮುಂದುವರೆಸಿದ್ದು ಆರೋಪಗಳ ಸುರಿಮಳೆಗೈದಿದ್ದಾರೆ. ಷಡ್ಯಂತ್ರಮಾಡಿ 120ಕ್ಕೂ ಹೆಚ್ಚು ಜನರ ಸಿಡಿ ಮಾಡಿದ್ದಾರೆ. 2000ನೇ ಇಸವಿಯಿಂದ ರಾಜ್ಯದಲ್ಲಿ ಸಿಡಿ ರಾಜಕಾರಣ ನಡೆಯುತ್ತಿದೆ. ನನ್ನ ಬಳಿ 20 ಸಿಡಿಗಳಿವೆ, ಎಲ್ಲವನ್ನೂ ಸಿಬಿಐಗೆ ನೀಡುತ್ತೇನೆ. ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರ ಸಿಡಿ ಮಾಡಿದ್ದಾರೆ. ಸಿಡಿ ತೋರಿಸಿಯೇ ಎಲ್ಲ ನಾಯಕರ ಬಾಯಿ ಮುಚ್ಚಿಸುತ್ತಿದ್ದಾರೆ. ಅವರ ವಿರುದ್ಧ ಮಾತಾಡಿದರೆ ಸಿಡಿ ಬಿಡುಗಡೆ ಧಮ್ಕಿ ಹಾಕುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ & ಕಂಪನಿ ಬಂಧನವಾಗಬೇಕು. ಯುವತಿ, ಶ್ರವಣ್ ಕುಮಾರ್ ಸೇರಿದಂತೆ ಎಲ್ಲರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
  9. ನನಗಿಂತ ಎತ್ತರಕ್ಕೆ ಬೆಳೆಯುತ್ತಾನೆಂದು ಸಂಚು ರೂಪಿಸಿ ಮುಗಿಸಿದ್ರು: ರಾಜಕೀಯವಾಗಿ ಬೆಳೆದುಬಿಡುತ್ತಾನೆಂದು ಸಿಡಿ ಮಾಡಿ ಬಿಡುಗಡೆ ಮಾಡಿದ್ದಾರೆ. ಸಿಡಿ ಕೇಸ್​ನಲ್ಲಿ ಬಂಧನವಾದರೆ ರಾಜಕೀಯ ಜೀವನ ಹಾಳು. ಸಿಡಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಕೊಡಬೇಕೆಂದು. ಸಿಎಂ ಬೊಮ್ಮಾಯಿ ಸಿಬಿಐ ತನಿಖೆಗೆ ಆದೇಶ ಮಾಡಿದರೆ ಆಯ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಇದಕ್ಕೂ ಸಂಬಂಧವಿಲ್ಲ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
  10. ‘ಸಿಡಿ ಯುವತಿ’ ಬೆಂಗಳೂರಿನಲ್ಲೇ ಇದ್ದಾಳೆ, ಆಕೆಯನ್ನು ಬಂಧಿಸಿ: ಕಾಂಗ್ರೆಸ್ ಪಕ್ಷದ ಮಹಿಳಾ ಪದಾಧಿಕಾರಿ ಮನೆಯಲ್ಲಿ ‘ಸಿಡಿ ಯುವತಿ’ ಇದ್ದಾರೆ. ಆಕೆಯನ್ನು ಬಂಧಿಸಿದರೆ ಎಲ್ಲಾ ಷಡ್ಯಂತ್ರ ಬಯಲಾಗುತ್ತದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ರು.
  11. ರಾಜಕಾರಣದಲ್ಲಿ ಯಾರೇ ಆದರೂ ವೈಯಕ್ತಿಕ ದಾಳಿ ಮಾಡಬಾರದು: ಯಾರಾದರೂ ದಾರಿ ತಪ್ಪಿದರೆ ಸರಿದಾರಿಗೆ ತರಲು ಪ್ರಯತ್ನಿಸಬೇಕು. ಯಾರನ್ನೇ ಆದರೂ ಟಾರ್ಗೆಟ್ ಮಾಡಿ ಮುಗಿಸಲು ಯತ್ನಿಸಬಾರದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ರಾಜಕೀಯದಲ್ಲಿರಲು ನಾಲಾಯಕ್ ಎಂದು ಡಿ.ಕೆ.ಶಿವಕುಮಾರ್​ ವಿರುದ್ಧ ರಮೇಶ್ ಜಾರಕಿಹೊಳಿ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.