ಸಿಡಿ ಷಡ್ಯಂತ್ರದಲ್ಲಿ ಡಿಕೆ ಶಿವಕುಮಾರ ಭಾಗಿ: ಶಾಸಕರು, ಅಧಿಕಾರಿಗಳ ಸೇರಿದಂತೆ 120 ಜನರ ಸಿಡಿಗಳಿವೆ- ರಮೇಶ ಜಾರಕಿಹೋಳಿ

ಸಿಡಿ ಶಡ್ಯಂತರದಲ್ಲಿ ರಾಜ್ಯದ ನೂರಾರು ನಾಯಕರ, ಅಧಿಕಾರಿಗಳು, ಬೆಂಗಳೂರು ಉನ್ನತ ಅಧಿಕಾರಿಗಳು ಸಿಲುಕಿದ್ದಾರೆ. ನನ್ನ ಬಳಿ 120 ಸಾಕ್ಷ್ಯಗಳಿವೆ, ಯಾವುದನ್ನೂ ಬಿಡುಗಡೆ ಮಾಡಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಸಿಡಿ ತಯಾರಿಸಿ ಬ್ಯ್ಲಾಕ್​ ಮೇಲ್​ ಮಾಡುತ್ತಿದ್ದಾರೆ ಎಂದು ರಮೇಶ ಜಾರಕಿಹೋಳಿ ಹೇಳಿದ್ದಾರೆ

ಸಿಡಿ ಷಡ್ಯಂತ್ರದಲ್ಲಿ ಡಿಕೆ ಶಿವಕುಮಾರ ಭಾಗಿ: ಶಾಸಕರು, ಅಧಿಕಾರಿಗಳ ಸೇರಿದಂತೆ 120 ಜನರ ಸಿಡಿಗಳಿವೆ- ರಮೇಶ ಜಾರಕಿಹೋಳಿ
ರಮೇಶ ಜಾರಿಕಿಹೋಳಿ (ಎಡಚಿತ್ರ) ಡಿಕೆ ಶಿವಕುಮಾರ (ಬಲಚಿತ್ರ)
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 30, 2023 | 12:09 PM

ಬೆಳಗಾವಿ: ಸಿಡಿ ಶಡ್ಯಂತರದಲ್ಲಿ ರಾಜ್ಯದ ನೂರಾರು ನಾಯಕರು, ಅಧಿಕಾರಿಗಳು, ಬೆಂಗಳೂರು ಉನ್ನತ ಅಧಿಕಾರಿಗಳು ಸಿಲುಕಿದ್ದಾರೆ. ನನ್ನ ಬಳಿ 120 ಸಾಕ್ಷ್ಯಗಳಿವೆ, ಯಾವುದನ್ನೂ ಬಿಡುಗಡೆ ಮಾಡಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ (D K Shivakumar) ಸಿಡಿ ತಯಾರಿಸಿ ಬ್ಯ್ಲಾಕ್​ ಮೇಲ್​ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಯವಿಟ್ಟು ಇದನ್ನು ಸಿಬಿಐ ತನಿಖೆ ಕೊಡಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೋಳಿ (Ramesh Jarkiholi) ಒತ್ತಾಯಿಸಿದ್ದಾರೆ.

ಗೋಕಾಕ್​ ಶಾಸಕ ರಮೇಶ್​ ಜಾರಕಿಹೋಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವಿರುದ್ಧ ಸಿಡಿದೆದ್ದಿದ್ದು ಮಹಾನಾಯಕನ ಷಡ್ಯಂತ್ರ ಬಯಲುಗೊಳಿಸುವುದೇ ನನ್ನ ಟಾರ್ಗೆಟ್ ಎಂದು ಶಪಥ ತೊಟ್ಟಿದ್ದಾರೆ. ಈ ಹಿನ್ನೆಲೆ ಇಂದು (ಜ.30) ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಡಿಕೆ ಶಿವಕುಮಾರ ನನ್ನನ್ನು ಟಾರ್ಗೆಟ್ ಮಾಡಿ ನನ್ನನ್ನು ಹೊಡೆದರು. ಕಳೆದ ಒಂದೂವರೆ ವರ್ಷದಿಂದ ನಾನು ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್​ ನಾಲಾಯಕ್​ ಎಂದು ವಾಗ್ದಾಳಿ ಮಾಡಿದರು.

ಡಿಕೆ ಶಿವಕುಮಾರ್​ ಸಿಡಿ ಬಿಡುಗಡೆ ಮಾಡಿ ನನ್ನ ವೈಯಕ್ತಿಕ ಜೀವನ ಹಾಳುಮಾಡಿದ. ಒಬ್ಬ ಮಹಿಳೆ ಮೂಲಕ ನನ್ನ ತೇಜೋವದೆ ಮಾಡಿದ. ಮಾರ್ಚ್ 21ರಂದು ನನ್ನ ಸಿಡಿ ಬಿಡುಗಡೆ ಮಾಡಿ ಹೆಸರು ಕೆಡಿಸಿದ. ನಾನು ಯಾವುದೆ ತಪ್ಪು ಮಾಡದಿದ್ದರೂ ಒಪ್ಪಿಕೊಳ್ಳಬೇಕಾಯಿತು. ಸಿಡಿ ಪ್ರಕರಣದ ಯುವತಿ, ನರೇಶ್ ಸೇರಿದಂತೆ 6 ಜನರನ್ನು ಬಂಧಿಸಿ. ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವೆ. ಎಲ್ಲಾ ದಾಖಲೆಗಳನ್ನು ಸಿಬಿಐಗೆ ವಹಿಸುತ್ತೇನೆ ಎಂದರು.

ಇದನ್ನೂ ಓದಿ: ಆ ಮಹಾನಾಯಕನ ಮೂಲೆಗೆ ತಳ್ಳಲು ಈ ಸಲ ನಿಲ್ತೀನಿ: ಮುಂದಿನ ಬಾರಿ ನಿಮಗೆ ಬಿಟ್ಟಿದ್ದು -ರಾಜಕೀಯ ನಿವೃತ್ತಿ ಬಗ್ಗೆ ರಮೇಶ್ ಜಾರಕಿಹೊಳಿ ಮಾತು

1985ರಲ್ಲಿ ನಾನು, ಡಿಕೆ ಶಿವಕುಮಾರ ಇಬ್ಬರೂ ಒಟ್ಟಿಗೆ ಚುನಾವಣೆಗೆ ಬಂದೆವು. ನಾನು ಉದ್ಯಮ ನಡೆಸಿ ಈ ಹಂತಕ್ಕೆ ಬಂದಿದ್ದೇನೆ. ಡಿ.ಕೆ.ಶಿವಕುಮಾರ್​ ಲೂಟಿ ಮಾಡಿ ಕೋಟ್ಯಂತರ ಹಣ ಮಾಡಿದ್ದಾನೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ನಿಂದ ನನ್ನ ಡಿಕೆ ಶಿವಕುಮಾರ್​ ಸಂಬಂಧ ಹಾಳಾಯ್ತು ಎಂದು ಆರೋಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

Published On - 11:50 am, Mon, 30 January 23

ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಹೇಗಿದೆ ಗೊತ್ತಾ?
ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಹೇಗಿದೆ ಗೊತ್ತಾ?
ರಾತ್ರಿ ಬಾರ್​ಗೆ ಕನ್ನ ಹಾಕಿ 2 ಆಲ್ಕೋಹಾಲ್ ಬಾಟಲಿಯನ್ನು ಕದ್ದ ಕಳ್ಳ!
ರಾತ್ರಿ ಬಾರ್​ಗೆ ಕನ್ನ ಹಾಕಿ 2 ಆಲ್ಕೋಹಾಲ್ ಬಾಟಲಿಯನ್ನು ಕದ್ದ ಕಳ್ಳ!
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಬಾಯ್ಮುಚ್ಚಿಕೊಂಡಿರುವಂತೆ ಬಸನಗೌಡ ಯತ್ನಾಳ್​ರನ್ನು ಎಚ್ಚರಿಸಿದ ರೇಣುಕಾಚಾರ್ಯ
ಬಾಯ್ಮುಚ್ಚಿಕೊಂಡಿರುವಂತೆ ಬಸನಗೌಡ ಯತ್ನಾಳ್​ರನ್ನು ಎಚ್ಚರಿಸಿದ ರೇಣುಕಾಚಾರ್ಯ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಟ್ಟ ಭವ್ಯಾ
ಮಂಜು ವಿರುದ್ಧ ತಂತ್ರ ರೂಪಿಸಿದ ರಜತ್, ತ್ರಿವಿಕ್ರಮ್; ಸಾಥ್ ಕೊಟ್ಟ ಭವ್ಯಾ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ