ಆ ಮಹಾನಾಯಕನ ಮೂಲೆಗೆ ತಳ್ಳಲು ಈ ಸಲ ನಿಲ್ತೀನಿ: ಮುಂದಿನ ಬಾರಿ ನಿಮಗೆ ಬಿಟ್ಟಿದ್ದು -ರಾಜಕೀಯ ನಿವೃತ್ತಿ ಬಗ್ಗೆ ರಮೇಶ್ ಜಾರಕಿಹೊಳಿ ಮಾತು
ಆ ಮಹಾನಾಯಕನ ಮೂಲೆಗೆ ಹಚ್ಚುವುದಕ್ಕಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ಇಲ್ಲವಾದ್ರೇ ಈ ಸಲ ನಾನು ಸ್ಪರ್ಧೆ ಮಾಡುತ್ತಿರಲಿಲ್ಲ. ಒಂದು ಷಂಡನಂತೆ ರಾಜಕೀಯ ಮಾಡಿದ್ದಾನೆ.
ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ನಾನಾ ಕಸರತ್ತು ಮಾಡುತ್ತಿದ್ದಾರೆ. ಸದ್ಯ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಚಿವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ(Ramesh Jarkiholi) ಹೊಸ ಬಾಂಬ್ ಸಿಡಿಸಿದ್ದಾರೆ. ಆರು ಬಾರಿ ಶಾಸಕನಾಗಿದ್ದೇನೆ ಏಳನೇ ಬಾರಿ ಶಾಸಕನಾದ ನಂತರ ಎಂಟನೇ ಬಾರಿ ನಿಲ್ಲಬೇಕು, ಬೇಡಾ ಎನ್ನುವ ನಿರ್ಧಾರ ನಿಮ್ಮ ಮೇಲೆ ಬಿಡ್ತೇನಿ ನಾನು ಎಂದು ಹೇಳಿದ್ದಾರೆ. ಈ ಮೂಲಕ ರಾಜಕೀಯ ನಿವೃತ್ತಿಯ ಮಾತನಾಡಿದ್ದಾರೆ.
ಈ ಚುನಾವಣೆ ಅಲ್ಲಾ ಮುಂದಿನ ಬಾರಿ ನಿವೃತ್ತಿಯಾಗಬೇಕು ಅನ್ನೋ ವಿಚಾರ ಇದೆ ನನ್ನದು. ಏಳನೇ ಬಾರಿಯಾದ ಬಳಿಕ ಸಾಕಪ್ಪ ಬೇರೆಯವರಿಗೆ ಚಾನ್ಸ್ ಕೊಡೋಣ. ಮುಂದಿನ ಚುನಾವಣೆ ಮಾತ್ರ ಸ್ಪರ್ಧೆ ಮಾಡಬೇಕು ಅನ್ನೋ ವಿಚಾರ ಇದೆ ನನ್ನದು. ಈ ವಿಚಾರ ನಮ್ಮ ಕಾರ್ಯಕರ್ತರು, ನಾಯಕರಿಗೆ ಬಿಡ್ತೀನಿ. ಈ ಬಾರಿಯೇ ನಾನು ನಿಲ್ಲುತ್ತಿರಲಿಲ್ಲ, ಆ ಮಹಾನಾಯಕನಿಗೆ ಚಾಲೆಂಜ್ ಮಾಡಲು ನಿಂತಿದ್ದೇನೆ. ಆ ಮಹಾನಾಯಕನ ಮೂಲೆಗೆ ಹಚ್ಚುವುದಕ್ಕಾಗಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ಇಲ್ಲವಾದ್ರೇ ಈ ಸಲ ನಾನು ಸ್ಪರ್ಧೆ ಮಾಡುತ್ತಿರಲಿಲ್ಲ. ಒಂದು ಷಂಡನಂತೆ ರಾಜಕೀಯ ಮಾಡಿದ್ದಾನೆ. ಅವನನ್ನ ಪೂರ್ಣ ಪ್ರಮಾಣದಲ್ಲಿ ಮನೆಗೆ ಹಚ್ಚುವವರೆಗೂ ನಾನು ರಾಜಕೀಯ ನಿವೃತ್ತಿಯಾಗುವುದಿಲ್ಲ. ಬಿಜೆಪಿ ಪಕ್ಷಕ್ಕೆ ನನ್ನ ಜೀವನ ಪಣಕ್ಕಿಟ್ಟು 2023ರಲ್ಲಿ ನಮ್ಮ ಸರ್ಕಾರ ಮಾಡಲು ಏನೇ ತ್ಯಾಗ ಮಾಡಲು ಬಂದ್ರೂ ತ್ಯಾಗ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡುತ್ತೇವೆ ಎಂದು ಗೋಕಾಕ್ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಸಿಡಿ ಪ್ರಕರಣದಲ್ಲಿ ಡಿಕೆಶಿ ಕೈವಾಡ ಕುರಿತು ದಾಖಲೆ ಬಿಡುಗಡೆ ಮಾಡಲಿರುವ ರಮೇಶ್
ಇನ್ನು ಮತ್ತೊಂದೆಡೆ ಇಂದು ಬೆಳಗ್ಗೆ 10.30ಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಮಹಾನಾಯಕನಿಗೆ ಸಂಬಂಧಿಸಿದ ಆಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸಿಡಿ ಪ್ರಕರಣದಲ್ಲಿ ಡಿಕೆಶಿ ಕೈವಾಡ ಕುರಿತು ದಾಖಲೆ ಬಿಡುಗಡೆ ಮಾಡಲಿದ್ದಾರೆ. ಡಿಕೆಶಿ ವೈಯಕ್ತಿಕ ವಿಚಾರ ಇದೆ ಮಾತನಾಡುತ್ತೇನೆ ಎಂದು ಈ ಹಿಂದೆ ರಮೇಶ್ ಜಾರಕಿಹೊಳಿ ಹೇಳಿದ್ದರು. ಈ ಬೆನ್ನಲ್ಲೆ ಬೆಳಗ್ಗೆ 10.30ಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ನನ್ನ ಸ್ನೇಹಿತ ರಮೇಶ್ ಜಾರಕಿಹೊಳಿಯನ್ನು ಬೆತ್ತಲೆ ಮಾಡಿದ್ದೇನೆ. ಅದಕ್ಕಾಗಿ 40 ಕೋಟಿ ಹಣ ಖರ್ಚು ಮಾಡಿದ್ದೇನೆ ಅಂದಿದ್ದ ಆಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ‘ಅವಳಿಗೆ 1 ಕೋಟಿ ಕೊಡು’ ಎಂದು ಹೇಳಿರುವ ಆಡಿಯೋ ಇದೆ ಎಂದು ರಮೇಶ್ ಹೇಳಿದ್ದಾರೆ.
ಮಹಾನಾಯಕನ ಷಡ್ಯಂತ್ರ ಬಯಲುಗೊಳಿಸುವುದೇ ನನ್ನ ಟಾರ್ಗೆಟ್. ಮಹಾನಾಯಕನ ಷಂ_ ರಾಜಕೀಯದ ವಿರುದ್ಧ ನನ್ನ ಹೋರಾಟವಿದೆ ಎಂದು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ರೊಚ್ಚಿಗೆದ್ದಿದ್ದರು. 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಯಾವುದೇ ತ್ಯಾಗಕ್ಕೂ ಸಿದ್ಧ. 7ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಈ ಬಾರಿ ನನ್ನ ಸ್ಪರ್ಧೆ ಎಮದು ಹೇಳಿಕೆ ನೀಡಿದ್ದರು. ಇದರ ನಡುವೆ ಇಂದು ಸುದ್ದಿಗೋಷ್ಠಿ ಕರೆದಿದ್ದು ಡಿಕೆ ಶಿವಕುಮಾರ್ ಸಂಬಂಧ ಅನೇಕ ವಿಚಾರಗಳು ಬಹಿರಂಗಗೊಳ್ಳಲಿವೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:41 am, Mon, 30 January 23