Hampi Utsav 2023: ಕನ್ನಡ ಹಾಡು ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ, ಇಬ್ಬರು ಅರೆಸ್ಟ್

ಕನ್ನಡ ಹಾಡು ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಮೇಲೆ ಪ್ರೇಕ್ಷಕರ ಗ್ಯಾಲರಿಯಿಂದ ನೀರಿನ ಬಾಟಲಿ ಎಸೆದು ಅವಮಾನ ಮಾಡಲಾಗಿದೆ.

Hampi Utsav 2023: ಕನ್ನಡ ಹಾಡು ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ, ಇಬ್ಬರು ಅರೆಸ್ಟ್
ಕೈಲಾಶ್ ಖೇರ್
Follow us
TV9 Web
| Updated By: ಆಯೇಷಾ ಬಾನು

Updated on:Jan 30, 2023 | 8:35 AM

ವಿಜಯನಗರ: ಜಿಲ್ಲೆಯಲ್ಲಿ ಹಂಪಿ ಉತ್ಸವದ(Hampi Utsav) ಸಮಾರೋಪ ಸಮಾರಂಭ ಭರ್ಜರಿಯಾಗಿ ನೆರವೇರಿದೆ. ಮಹಾಮಾರಿ ಕೊರೊನಾದಿಂದ(Coronavirus) ತಾತ್ಕಾಲಿಕವಾಗಿ ನಿಂತು ಹೋಗಿದ್ದ ಹಂಪಿ ಉತ್ಸವ ಕಾರ್ಯಕ್ರಮ ಕೊರೊನಾ ಬಳಿಕ ಅದ್ದೂರಿಯಾಗಿ ನೆರವೇರಿದೆ. ಆದ್ರೆ ಈ ಅದ್ದೂರಿ ಸಮಾರಂಭದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಗಾಯಕ ಕೈಲಾಶ್ ಖೇರ್​(Kailash kher) ಮೇಲೆ ಕೆಲ ಕಿಡಿಗೇಡಿಗಳು ಬಾಟಲಿ ಎಸೆದು ದರ್ಪ ಮೆರೆದಿದ್ದಾರೆ.

ಕಿಡಿಗೇಡಿಗಳು ಪೊಲೀಸರ ವಶ

ವಿಜಯನಗರ ಜಿಲ್ಲೆಯ ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕನ್ನಡ ಹಾಡು ಹಾಡಲಿಲ್ಲವೆಂದು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ್ ಖೇರ್ ಮೇಲೆ ಪ್ರೇಕ್ಷಕರ ಗ್ಯಾಲರಿಯಿಂದ ನೀರಿನ ಬಾಟಲಿ ಎಸೆದು ಅವಮಾನ ಮಾಡಲಾಗಿದೆ. ಆದ್ರೆ ಕಿಡಿಗೇಡಿಗಳು ಬಾಡಲಿ ಎಸೆದರೂ ಗಾಯಕ ಕೈಲಾಶ್ ತಮ್ಮ ಗಾಯನ ಮುಂದುವರೆಸಿದ್ದರು. ಸದ್ಯ ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಬಾಟಲ್ ಎಸೆದ ಕಿಡಿಗೇಡಿಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Road Accident: ಖಾಸಗಿ ಬಸ್ ಡಿಕ್ಕಿಯಾಗಿ ಸ್ವಗ್ರಾಮದಿಂದ ಬೆಂಗಳೂರಿಗೆ ಮರಳುತ್ತಿದ್ದ ತಂದೆ-ಮಗಳು ದುರಂತ ಸಾವು

ಕಾಳಾಪುರದಲ್ಲಿ ಸಿರಿಗೆರಿಶ್ರೀ ಬೈಕ್​ ಱಲಿ ವೇಳೆ ಕಲ್ಲುತೂರಾಟ

ಗುರುಬಸವೇಶ್ವರರು ನೆಲಸಿರೋ ಐತಿಹಾಸಿಕ ಪುಣ್ಯ ಕ್ಷೇತ್ರ. ವಿಜಯನಗರ ಜಿಲ್ಲೆಯಲ್ಲಿರೋ ಕೊಟ್ಟೂರಿನಲ್ಲಿ ತರಳುಬಾಳು ಹುಣ್ಣಿಮೆ ಮಹೋತ್ಸವ ನಡೆಯುತ್ತಿದೆ. ನಿನ್ನೆಯಿಂದ ಆರಂಭವಾಗಿರೋ ಸಮಾರಂಭ, ಫೆಬ್ರವರಿ 5 ರಂದು ಅಂತ್ಯವಾಗಲಿದೆ. ಇದೇ ಹುಣ್ಣಿಮೆ ಮಹೋತ್ಸವಕ್ಕೆ ತರಳಬಾಳು ಶ್ರೀಗಳು ಆಗಮಿಸಿದ್ರು. ಶ್ರೀಗಳನ್ನ ಬರಮಾಡಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಬೈಕ್‌ ಱಲಿ ನಡೆಸಿದ್ರು. ಈ ಱಲಿ ನಡೆವೆಯೇ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮಕ್ಕೆ ಱಲಿ ಎಂಟ್ರಿಯಾಗ್ತಿದ್ದಂತೆ ಗ್ರಾಮಸ್ಥರು ಹಾಗೂ ಱಲಿಯಲ್ಲಿ ಬಂದವರ ನಡುವೆ ಮಾತಿನ ಚಕಮಕಿಯಾಗಿದ್ದು, ಅದು ವಿಕೋಪಕ್ಕೆ ತಿರುಗಿ ಬಡಿದಾಟವೇ ನಡೆದು ಹೋಗಿದೆ.

ಉಜ್ಜನಿಪೀಠ ಹಾಗೂ ತರಳಬಾಳು ಮಠದ ಮಧ್ಯೆ ದಶಕಗಳಿಂದಲೂ ಮನಸ್ತಾಪ ಇದೆ. ಇದು ಭಕ್ತರವರೆಗೂ ಬಂದು ನಿಂತಿತ್ತು. ಹಳೇ ದ್ವೇಷವೇ ನಿನ್ನೆ ಸ್ಫೋಟಗೊಂಡಿದೆ ಅಂತಾ ಹೇಳಲಾಗ್ತಿದೆ. ಱಲಿಯಲ್ಲಿ ಬಂದಿದ್ದವರು ಮನೆ ಮನೆಗೂ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬೈಕ್‌ಗಳನ್ನ ಸುಟ್ಟು ಹಾಕಿದ್ದಾರೆ.ಹತ್ತಾರು ಮಂದಿಯನ್ನ ಗಾಯಗೊಳಿಸಿದ್ದಾರೆ ಅಂತಾ ಕಾಳಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನು ನಿನ್ನೆ ಬೈಕ್‌ ಱಲಿ ಬರೋದನ್ನ ಅರಿತಿದ್ದ ಪೊಲೀಸರು, ಉಜ್ಜನಿ ಬಳಿ ಬಿಗಿ ಬಂದೋಬಸ್ತ ಮಾಡಿದ್ದರು. ಇಷ್ಟಾದ್ರೂ ಉಜ್ಜನಿ ಸಮೀಪದ ಕಾಳಾಪುರದಲ್ಲಿ ಕಾಳಗವೇ ನಡೆದು ಹೋಗಿದೆ. ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂಥಾ ವಾತಾವರಣ ಇದ್ದು, ಉಜ್ಜನಿ ಅಕ್ಕಪಕ್ಕದ 9 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೂ ಹೆಚ್ಚಿನ ಭದ್ರತೆ ನೀಡಲಾಗಿದೆ. ಎಸ್‌ಪಿ, ಡಿಸಿ ಸೇರಿದಂತೆ ಎಲ್ರೂ ಗ್ರಾಮಕ್ಕೆ ಭೇಟಿ ನೀಡಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:55 am, Mon, 30 January 23

ಬಿಗ್ ಬಾಸ್​​ನಲ್ಲಿ ಈ ವಾರ ಯಾರು ವೀಕ್ ಸ್ಪರ್ಧಿ? ಯಾರು ಎಲಿಮಿನೇಟ್?
ಬಿಗ್ ಬಾಸ್​​ನಲ್ಲಿ ಈ ವಾರ ಯಾರು ವೀಕ್ ಸ್ಪರ್ಧಿ? ಯಾರು ಎಲಿಮಿನೇಟ್?
ಶಾಸ್ತ್ರದ ಪ್ರಕಾರ ಬಾಳೆ ಎಲೆ ಊಟ ಹೇಗೆ ಮಾಡಬೇಕು? ವಿಡಿಯೋ ನೋಡಿ
ಶಾಸ್ತ್ರದ ಪ್ರಕಾರ ಬಾಳೆ ಎಲೆ ಊಟ ಹೇಗೆ ಮಾಡಬೇಕು? ವಿಡಿಯೋ ನೋಡಿ
Horoscope: ಈ ರಾಶಿಯವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ
Horoscope: ಈ ರಾಶಿಯವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ
ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಹೇಗಿದೆ ಗೊತ್ತಾ?
ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಹೇಗಿದೆ ಗೊತ್ತಾ?
ರಾತ್ರಿ ಬಾರ್​ಗೆ ಕನ್ನ ಹಾಕಿ 2 ಆಲ್ಕೋಹಾಲ್ ಬಾಟಲಿಯನ್ನು ಕದ್ದ ಕಳ್ಳ!
ರಾತ್ರಿ ಬಾರ್​ಗೆ ಕನ್ನ ಹಾಕಿ 2 ಆಲ್ಕೋಹಾಲ್ ಬಾಟಲಿಯನ್ನು ಕದ್ದ ಕಳ್ಳ!
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ಸಿಎಂ, ಡಿಸಿಎಂ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ: ಜಮೀರ್
ಸಿಎಂ, ಡಿಸಿಎಂ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ: ಜಮೀರ್
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ