ದೇವರನ್ನು ಒಲಿಸಿಕೊಳ್ಳಲು ನಾನಾ ಕಸರತ್ತು, ಮುಂಚೆ ಬೆರಳು, ಈಗ ನಾಲಿಗೆ ಕಟ್ ಮಾಡಿಕೊಂಡ ಅಂಧ ಭಕ್ತ: ವಿಚಿತ್ರ ಘಟನೆಗೆ ಸಾಕ್ಷಿಯ್ತು ಬಳ್ಳಾರಿ
ಅಂಧ ಭಕ್ತನೊಬ್ಬ ತನ್ನ ನಾಲಿಗೆ ಕಟ್ ಮಾಡಿ ದೇವರಿಗೆ ಅರ್ಪಿಸಿರುವಂತಹ ಘಟನೆ ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬಳ್ಳಾರಿ: ಇತ್ತೀಚೆಗೆ ಪೂಜಾರಿಯೊಬ್ಬರು ದೇವರ ವಿಗ್ರಹದ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದು ಎಲ್ಲೆಡೆ ವೈರಲ್ ಆಗಿತ್ತು. ಅದೇ ರೀತಿಯಾಗಿ ಕಣ್ಣುಗಳನ್ನು ನೀಡಿರುವಂತಹ ಘಟನೆಗಳು ಸಹ ನಡೆದಿದ್ದವು. ಸದ್ಯ ಇಂತಹದೇ ಒಂದು ವಿಚಿತ್ರ ಘಟನೆ ನಡೆದಿದೆ. ಅಂಧ ಭಕ್ತನೊಬ್ಬ ತನ್ನ ನಾಲಿಗೆ (tongue) ಕಟ್ ಮಾಡಿ ದೇವರಿಗೆ ಅರ್ಪಿಸಿರುವಂತಹ ಘಟನೆ ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ವೀರೇಶ್ ನಾಲಿಗೆ ಕಟ್ ಮಾಡಿಕೊಂಡ ಭಕ್ತ. ಇದೇ ಭಕ್ತ ಒಂದು ವರ್ಷದ ಹಿಂದೆ ಬೆರಳು ಕಟ್ ಮಾಡಿಕೊಂಡು ದೇವರ ತಲೆಯ ಮೇಲೆ ಇಟ್ಟಿದ್ದ. ಈವಾಗ ತಮ್ಮ ನಾಲಿಗೆ ಕಟ್ ಮಾಡಿಕೊಳ್ಳುವ ಮೂಲಕ ಅಂಧ ಭಕ್ತಿ ಪ್ರದರ್ಶಿಸಿದ್ದಾನೆ.
ಬಲಕುಂದಿ ಗ್ರಾಮದ ಗುಡ್ಡದ ಮೇಲೆ ಇರುವ ಶಂಕರಪ್ಪ ದೇವಸ್ಥಾನದಲ್ಲಿ ಭಕ್ತ ವಿರೇಶ್ ಪ್ರತಿ ದಿನ ಪೂಜೆ ಮಾಡುತ್ತಿದ್ದ. ದೇವರನ್ನು ಒಲಿಸಿಕೊಳ್ಳಲು ನಾಲಗೆ ಕತ್ತರಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಚಾಕುವಿನಿಂದ ನಾಲಗೆ ಕತ್ತರಿಸಿಕೊಂಡಿದ್ದ ಯುವಕ ವೀರೇಶ್ ನಾಲಗೆ ಸಮೇತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಭಕ್ತನ ಹುಚ್ಚಾಟಕ್ಕೆ ಗ್ರಾಮಸ್ಥರು ಕಿಡಿಕಾರಿದ್ದು, ದೇವರಲ್ಲಿ ನಂಬಿಕೆ ಇರ್ಬೇಕು ಈ ರೀತಿ ಹುಚ್ಚು ನಂಬಿಕೆ ಇರಬಾರದು ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ವಿಜಯಪುರ: ಮೂವರು ಮಕ್ಕಳ ಜೊತೆ ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ನಂದಿಗಿರಿಧಾಮದ ದುರ್ಗಮ ಹಾದಿಯಲ್ಲಿ ಸಿಲುಕಿದ್ದ ಯುವಕರ ರಕ್ಷಣೆ
ಚಿಕ್ಕಬಳ್ಳಾಫುರ: ಟ್ರಕ್ಕಿಂಗ್ ಬಂದು ನಂದಿಗಿರಿಧಾಮದ ದುರ್ಗಮ ಹಾದಿಯಲ್ಲಿ ಸಿಲುಕಿದ್ದ ಯುವಕರನ್ನು ಅಗ್ನಿಶಾಮಕದಳ ಪೊಲೀಸರು ಹಾಗೂ ಸ್ಥಳಿಯರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ದೊಡ್ಡಬಳ್ಳಾಪುರ ಮೂಲದ ಯುವಕ ಮನೋಜ್ ಹಾಗೂ ಮಂಜುನಾಥ್ ರಕ್ಷಣೆ ಮಾಡಲಾಗಿದೆ. ಜಾರಿಬಿದ್ದ ರಭಸಕ್ಕೆ ಮನೋಜ್ ಗಾಯವಾಗಿದೆ. ಎರಡು ಮೂರು ಕಿಲೋ ಮೀಟರ್ನಿಂದ ಮನೋಜ್ ನನ್ನು ಸಿಬ್ಬಂದಿಗಳು ಹೊತ್ತುಕೊಂಡು ಬಂದಿದ್ದಾರೆ. ಗಾಯಾಳು ಮನೋಜ್ಗೆ ಚಿಕ್ಕಬಳ್ಳಾಫುರ ಜಿಲ್ಲಾಆಸ್ಪತ್ರಗೆ ರವಾನೆ ಮಾಡಲಾಗಿದೆ.
ಇಂದು ಬೆಳಿಗ್ಗೆ ನಂದಿಗಿರಿಧಾಮಕ್ಕೆ ಟ್ರಕ್ಕಿಂಗ್ಗೆ ಯುವಕರು ಬಂದಿದ್ದರು. ಕುದುರೆ ಮೆಟ್ಟಿಲು ಕಡೆಯಿಂದ ಬೆಟ್ಟ ಹತ್ತುತ್ತಿದ್ದರು. ದಾರಿ ತಪ್ಪಿ ಪ್ರಪಾತದ ಕಡೆ ಹೋಗಿದ್ದಾರೆ. ಟ್ರಕ್ಕಿಂಗ್ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿದ್ದರು. ನಂದಿಗಿರಿಧಾಮ ಠಾಣೆ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಿಯರಿಂದ ಕಾರ್ಯಾಚರಣೆ ಮಾಡಲಾಯಿತು.
ಇದನ್ನೂ ಓದಿ: ತರಳ ಬಾಳು ಸಿರಿಗೆರೆ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಉಜ್ಜೈನಿ ಸುತ್ತಮುತ್ತಲ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ
ಆಕಸ್ಮಿಕ ಬೆಂಕಿ ಅವಘಡ: ಹೊತ್ತಿ ಉರಿದ ಮೊಬೈಲ್ ಶೌಚಾಲಯ
ಧಾರವಾಡ: ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಮೊಬೈಲ್ ಶೌಚಾಲಯ ಹೊತ್ತಿ ಉರಿದಿರುವಂತಹ ಘಟನೆ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ. ಮುಳ್ಳಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಅದಕ್ಕೆ ಹೊಂದಿಕೊಂಡಿದ್ದ ಮೊಬೈಲ್ ಶೌಚಾಲಯಕ್ಕೂ ಬೆಂಕಿ ತಗುಲಿದೆ. ನೋಡನೋಡುತ್ತಿದ್ದಂತೆಯೇ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ನವಲಗುಂದ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.