AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಮೂವರು ಮಕ್ಕಳ ಜೊತೆ ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಜಿಲ್ಲೆಯ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ರಾತ್ರಿ ಒಂದೇ ಕುಟುಂಬದ ನಾಲ್ವರು ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವಿಜಯಪುರ: ಮೂವರು ಮಕ್ಕಳ ಜೊತೆ ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ಆತ್ಮಹತ್ಯೆ ಮಾಡಿಕೊಂಡ ತಾಯಿ, ಮಕ್ಕಳು
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jan 29, 2023 | 12:38 PM

Share

ವಿಜಯಪುರ: ಒಂದೇ ಕುಟುಂಬದ ನಾಲ್ವರು ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ರಾತ್ರಿ ನಡೆದಿದೆ. ಮೂವರು ಮಕ್ಕಳಾದ ಸೃಷ್ಟಿ(6), ಕಿಶನ್​​(3), ಸಮರ್ಥ(4) ಜೊತೆ ತಾಯಿ ಗೀತಾ ರಾಮು ಚೌಹಾಣ್​​(32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಪತಿ ರಾಮು ಜೊತೆ ಜಗಳ ಮಾಡಿ ಬಳಿಕ ಮಕ್ಕಳ ಜೊತೆ ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ತಿಕೋಟಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಳಾಪುರದಲ್ಲಿ ಸಿರಿಗೇರಿ ಶ್ರೀಗಳ ಬೈಕ್​ ಱಲಿ ವೇಳೆ ಕಲ್ಲುತೂರಾಟ

ವಿಜಯನಗರ: ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ತರಳಬಾಳು ಹುಣ್ಣಿಮೆ ಹಿನ್ನೆಲೆ ಜಗಳೂರಿನಿಂದ ಕೊಟ್ಟೂರಿನವರೆಗೆ ಸಿರಿಗೇರಿ ಸ್ವಾಮೀಜಿ ಬೈಕ್​ ಱಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಿಡಿಗೇಡಿಗಳಿಂದ ಕಲ್ಲುತೂರಾಟ ನಡೆದಿದೆ. 4ಕ್ಕೂ ಹೆಚ್ಚು ಜನರಿಗೆ ಕಲ್ಲೇಟಿನ ಗಾಯಗಳಾಗಿದ್ದು, ಐದಾರು ಮನೆಗಳಿಗೆ ಹಾನಿಯಾಗಿವೆ. ಇನ್ನು ಸಿರಿಗೇರಿಶ್ರೀ ಹಾಗೂ ಉಜ್ಜೈನಿ ಮಠದ ನಡುವೆ ದಶಕಗಳಿಂದ ಭಿನ್ನಾಭಿಪ್ರಾಯವಿದ್ದು, ಉಜ್ಜೈನಿ ಗ್ರಾಮಕ್ಕೆ ಸಿರಿಗೇರಿ ಮಠದವರು ಬರಬಾರದೆನ್ನುವ ಅಲಿಖಿತ ನಿಯಮವಿದೆ. ಈ ಮಧ್ಯೆ ಕಾಳಾಪುರ ಕ್ರಾಸ್​ನಿಂದ ಉಜ್ಜೈನಿ ಗ್ರಾಮಕ್ಕೆ ನುಗ್ಗಲು ಯತ್ನಿಸಿದ್ದ ಕೆಲವರ ಮೇಲೆ ಜನರು ಕಲ್ಲುತೂರಾಟ ನಡೆಸಿದ್ದು, ಬಣವೆಗಳಿಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. ಇದೀಗ ಉಜ್ಜೈನಿ ಸುತ್ತಮುತ್ತಲಿನ 9 ಪಾದಗಟ್ಟೆಗಳಿರುವ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕಬ್ಬು ತುಂಬಿದ್ದ ಟ್ರ್ಯಾಕ್ಟರ್​ ಪಲ್ಟಿಯಾಗಿ ಶೆಡ್​ನಲ್ಲಿದ್ದ ವ್ಯಕ್ತಿ ಸಾವು

ಕಲಬುರಗಿ: ಊಟ ಮಾಡುತ್ತಿದ್ದ ವೇಳೆ ಶೆಡ್ ಮೇಲೆ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಲಕ್ಷ್ಮಣ‌ ಚಿಂಚನಸೂರ್ ಎಂಬಾತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ. ನಿಂಬಾಳದಿಂದ ಭೂಸನೂರು ಸಕ್ಕರೆ‌ ಕಾರ್ಖಾನೆಗೆ ಕಬ್ಬಿನ ಲೋಡ್ ತುಂಬಿದ ಟ್ರ್ಯಾಕ್ಟರ್ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಶೆಡ್’ಗೆ ನುಗ್ಗಿ ಪಲ್ಟಿಯಾಗಿದೆ. ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಟ್ರಕ್​-ಕಾರು ನಡುವೆ ಡಿಕ್ಕಿ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವು

ತಾಯಿ ಜೊತೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಮಗ ಆತ್ಮಹತ್ಯೆ

ಕುಂದಾಪುರ: ಕನ್ಯಾನ ಗ್ರಾಮದ ದಿ‌.ಕುಪ್ಪಯ್ಯ ಶೆಟ್ಟಿ ಅವರ ಪುತ್ರ ರವಿರಾಜ್ ಶೆಟ್ಟಿ (33) ಇಂದು ಬೆಳಿಗ್ಗೆ ಕುಂದಾಪುರ ಸಮೀಪ ತಲ್ಲೂರು ರಾಷ್ಟ್ರೀಯ ಹೆದ್ದಾರಿ ಬಳಿ ರಾಜಾಡಿಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಪರೀತ ಕುಡಿತದ ಚಟಕ್ಕೆ ಬಿದ್ದದ್ದ ಮಗನನ್ನು ಆಸ್ಪತ್ರೆಗೆ ಚಿಕಿತ್ಸೆಗೆಗಾಗಿ ತಾಯಿ ಕರೆದುಕೊಂಡು ಬಂದಿದ್ದರು. ಈ ವೇಳೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ರಾಜಾಡಿ ಬಳಿ ಬಂದು ಸೇತುವೆ ಮೇಲಿನಿಂದ ನದಿಗೆ ಹಾರಿ ಮೃತಪಟ್ಟಿದ್ದಾನೆ. ಸ್ಥಳೀಯ ಮೀನುಗಾರ ನೆರವಿನಿಂದ ರವಿರಾಜ್ ಮೃತ ದೇಹಕ್ಕೆ ಮೇಲಕ್ಕೇತ್ತಲಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:33 am, Sun, 29 January 23