ತರಳ ಬಾಳು ಸಿರಿಗೆರೆ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಉಜ್ಜೈನಿ ಸುತ್ತಮುತ್ತಲ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ
ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ಕಲ್ಲು ತೂರಾಟ ನಡೆದಿದ್ದು, ನಾಲ್ಕಕ್ಕೂ ಹೆಚ್ಚು ಜನರಿಗೆ ಗಾಯ ಮತ್ತು ಐದಕ್ಕೂ ಹೆಚ್ಚು ಮನೆಗಳು ಜಖಂಗೊಂಡಿರುವಂತಹ ಘಟನೆ ನಡೆದಿದೆ.
ವಿಜಯನಗರ: ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ಕಲ್ಲು ತೂರಾಟ (Stone pelting) ನಡೆದಿದ್ದು, ನಾಲ್ಕಕ್ಕೂ ಹೆಚ್ಚು ಜನರಿಗೆ ಗಾಯ ಮತ್ತು ಐದಕ್ಕೂ ಹೆಚ್ಚು ಮನೆಗಳು ಜಖಂಗೊಂಡಿರುವಂತಹ ಘಟನೆ ನಡೆದಿದೆ. ತರಳಬಾಳು ಸಿರಿಗೆರೆ ಶ್ರೀಗಳಿಗೆ (Taralubalu Sirigeri Seer) ಉಜ್ಜೈನಿ ಮಠಕ್ಕೆ ದಶಕಗಳ ಹಿಂದಿನಿಂದಲೂ ವೈರುಧ್ಯದ ( ಭಿನ್ನಾಭಿಪ್ರಾಯ) ಇದೆ ಎನ್ನಲಾಗುತ್ತಿದೆ. ಇಂದು ಕೊಟ್ಟೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಹಿನ್ನಲೆ ಜಗಳೂರಿನಿಂದ ಕೊಟ್ಟೂರು ಪಟ್ಟಣದವರೆಗೂ ಸೀರಿಗೇರಿ ಸ್ವಾಮಿಗಳ ಬೈಕ್ ರ್‍ಯಾಲಿ ಮಾಡಲಾಗುತ್ತದೆ. ಈ ವೇಳೆ ಕಲ್ಲು ತೂರಾಟ ಮಾಡಲಾಗಿದೆ. ಉಜ್ಜೈನಿ ಮಠ ಮತ್ತು ಉಜ್ಜೈನಿ ಗ್ರಮಕ್ಕೆ ತರಳಬಾಳು ಸಿರಿಗೆರೆ ಮಠದವರು ತೆರಳ ಬಾರದು ಎನ್ನುವ ಅಲಿಖಿತ ನಿಯಮವಿದೆ. ಆದರೂ ಕಾಳಪುರ ಕ್ರಾಸ್ ಬಳಿಯಿಂದ ಉಜ್ಜೈನಿ ಪೀಠವಿರುವ ಉಜ್ಜೈನಿ ಗ್ರಾಮಕ್ಕೆ ಕೆಲವರು ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕಾಳಪುರ ಗ್ರಾಮದ ಜನರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಕಲ್ಲು ತೂರಾಟದಿಂದ ಗ್ರಾಮದ ಕೆಲ ಮನೆ, ಬೈಕ್, ಬಣವಿಗಳಿಗೆ ಬೆಂಕಿ, ಜೊತೆಗೆ ಪೊಲೀಸರ ಮೇಲೂ ಹಲ್ಲೆ ಮಾಡಲಾಗಿದೆ. ಹೀಗಾಗಿ ಉಜ್ಜೈನಿ ಹಾಗೂ ಸುತ್ತಮುತ್ತಲಿನ 9 ಪಾದಗಟ್ಟೆಗಳಿರುವ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಜಿಲ್ಲಾಧಿಕಾರಿ ಹೇಳಿದ್ದೇನು
ಘಟನೆ ಕುರಿತಾಗಿ ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ ಪ್ರತಿಕ್ರಿಯೆ ನೀಡಿದ್ದು, ತರಳಬಾಳು ಹುಣ್ಣುಮೆ ಹಿನ್ನಲೆ ಬೈಕ್ ರ್‍ಯಾಲಿ ಇತ್ತು. ವೆಹಿಕಲ್ನಲ್ಲಿ ಜನ ಬರ್ತಿದ್ರು. ಈ ವೇಳೆ ರ್‍ಯಾಲಿ ಬರುವ ಜನರ ಹಾಗೂ ಕಾಳಾಪುರ ಗ್ರಾಮಸ್ಥರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಸಂಘರ್ಷ ಆಗಿದೆ. ನಾಲ್ಕು ಜನರಿಗೆ ಗಾಯವಾಗಿದೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಎಸಿ, ಎಸ್ಪಿ ಭೇಟಿ ನೀಡಿದ್ದಾರೆ.ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಎಸ್ಪಿ, ಕೂಟ್ಟೂರು ತಹಶಿಲ್ದಾರ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದರು.
ಮನೆಗಳಿಗೆ ನುಗ್ಗಿರುವ ಬೈಕ್ ಬೆಂಕಿ ಹಾಕಿರುವ ಕುರಿತು ಎಸ್ಪಿ ಮಾಹಿತಿ ಕಲೆ ಹಾಕ್ತಿದ್ದಾರೆ. ಸಂಘರ್ಷಕ್ಕೆ ಕಾರಣ ಆಗಿರುವವರ ಮೇಲೆ ಕ್ರಮ ಆಗಲಿದೆ. ಎಸ್ಪಿ ವರದಿ ನೀಡಿದ್ಮೇಲೆ ಅಗತ್ಯವಿದ್ರೆ ನಾನು ಸಹ ಘಟನಾ ಸ್ಥಳಕ್ಕೆ ಹೋಗುವೆ. ಎರಡು ಮಠಗಳ ಮಧ್ಯೆ ಹಳೆಯ ವಿವಾದ ಎಂದು ಮಾಹಿತಿ ಇದೆ. ಹಂಪಿ ಉತ್ಸವ ನಡುವೆಯೂ ಆ ರ್‍ಯಾಲಿಗೂ ಬಂದೋಬಸ್ತ್ ಮಾಡಲಾಗಿದೆ. ತರಳಬಾಳು ಹುಣ್ಣುಮೆ ಇದೆ ಹೀಗಾಗಿ ಅಗತ್ಯ ಬಂದೋಬಸ್ತ್ ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.
IAF ಜೆಟ್ಗಳ ನಡುವೆ ಡಿಕ್ಕಿಯಲ್ಲಿ ಬೆಳಗಾವಿಯ ಯೋಧ ಹುತಾತ್ಮ
ಬೆಳಗಾವಿ: IAF ಜೆಟ್ಗಳ ನಡುವೆ ಡಿಕ್ಕಿಯಲ್ಲಿ ಬೆಳಗಾವಿಯ ಯೋಧ ವಿಂಗ್ ಕಮಾಂಡರ್ ಹನುಮಂತರಾವ್ ಆರ್.ಸಾರಥಿ ಹುತಾತ್ಮ ಆಗಿದ್ದಾರೆ. ಬೆಳಗಾವಿಯ ಗಣೇಶಪುರದ ನಿವಾಸಿ ಹನುಮಂತರಾವ್ ಆರ್.ಸಾರಥಿ. ಮಧ್ಯಪ್ರದೇಶದ ಮೊರೆನಾದಲ್ಲಿ 2 ಜೆಟ್ಗಳ ನಡುವೆ ಡಿಕ್ಕಿಯಾಗಿತ್ತು. ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಹನುಮಂತರಾವ್ ಅಗಲಿದ್ದಾರೆ. ಹನುಮಂತರಾವ್ ನಿವಾಸಕ್ಕೆ ವಾಯುಸೇನೆ ತರಬೇತಿ ಅಧಿಕಾರಿಗಳ ಭೇಟಿ ನೀಡಿದ್ದು, ಆಕ್ರಂದನ ಮುಗಿಲುಮುಟ್ಟಿತ್ತು.
ಆಕಸ್ಮಿಕ ಬೆಂಕಿ ಅವಘಡ: ಹೊತ್ತಿ ಉರಿದ ಮೊಬೈಲ್ ಶೌಚಾಲಯ
ಧಾರವಾಡ: ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಮೊಬೈಲ್ ಶೌಚಾಲಯ ಹೊತ್ತಿ ಉರಿದಿರುವಂತಹ ಘಟನೆ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ. ಮುಳ್ಳಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಅದಕ್ಕೆ ಹೊಂದಿಕೊಂಡಿದ್ದ ಮೊಬೈಲ್ ಶೌಚಾಲಯಕ್ಕೂ ಬೆಂಕಿ ತಗುಲಿದೆ. ನೋಡನೋಡುತ್ತಿದ್ದಂತೆಯೇ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ನವಲಗುಂದ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: Gadag News: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಮನೆಗಳು: ಲಕ್ಷಾಂತರ ರೂ. ಹಾನಿ
ಚಲಿಸುತ್ತಿದ್ದ ಬೈಕ್ನಲ್ಲಿ ಬೆಂಕಿ
ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಬೈಕ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಬೈಕ್ನಲ್ಲಿ ಬೆಂಕಿ ಕಂಡು ಯುವಕ ಬೈಕ್ ತಳ್ಳಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾನೆ. ಹೆದ್ದಾರಿಯಲ್ಲಿ ಪಲ್ಸರ್ ಬೈಕ್ ದಗ ದಗ ಹೊತ್ತಿ ಉರಿದಿದೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:05 pm, Sat, 28 January 23