AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag News: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಮನೆಗಳು: ಲಕ್ಷಾಂತರ ರೂ. ಹಾನಿ

ಬೆಂಕಿ ತಗುಲಿ ಐದು ತಗಡಿನ ಮನೆಗಳು ಸಂಪೂರ್ಣ ಭಸ್ಮವಾಗಿದ್ದು, 10ಕ್ಕೂ ಅಧಿಕ ಜಾನುವಾರುಗಳ ಹೊಟ್ಟಿನ (ಮೇವು)ನ ಬಣಿವೆಗಳು ಸೇರಿದಂತೆ ಮೂರು ಚಕ್ಕಡಿಗಳು ಬೆಂಕಿಗೆ ಆಹುತಿಯಾಗಿರುವಂತಹ ಘಟನೆ ನಡೆದಿದೆ.

Gadag News: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಮನೆಗಳು: ಲಕ್ಷಾಂತರ ರೂ. ಹಾನಿ
ಆಕಸ್ಮಿಕ ಬೆಂಕಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jan 28, 2023 | 7:05 PM

Share

ಗದಗ: ಬೆಂಕಿ (fire) ತಗುಲಿ ಐದು ತಗಡಿನ ಮನೆಗಳು ಸಂಪೂರ್ಣ ಭಸ್ಮವಾಗಿದ್ದು, 10ಕ್ಕೂ ಅಧಿಕ ಜಾನುವಾರುಗಳ ಹೊಟ್ಟಿನ (ಮೇವು)ನ ಬಣಿವೆಗಳು ಸೇರಿದಂತೆ ಮೂರು ಚಕ್ಕಡಿಗಳು ಬೆಂಕಿಗೆ ಆಹುತಿಯಾಗಿರುವಂತಹ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದ ಜವಳಾಪೂರ ಪ್ಲಾಟ್‌ನಲ್ಲಿ ನಡೆದಿದೆ. ಇಲ್ಲಿನ ಟಿಸಿಯಲ್ಲಿ ಜೋರಾಗಿ ಶಬ್ದ ಬಂದಿದ್ದು, ಇದರ ಕಿಡಿ ಹಾರಿ ಬಣಿವೆಗೆ ತಗುಲಿ ಈ ಅವಘಡ ಸಂಭವಿಸಿದೆ. ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.

ನೋಡ ನೋಡುತ್ತಿದ್ದಂತೆಯೇ ಮನೆಗಳಿಗೆ ತಗುಲಿದ ಬೆಂಕಿ

ನೋಡ ನೋಡುತ್ತಿದ್ದಂತೆಯೇ ಮನೆಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ಮನೆಯಲ್ಲಿನ ಎಲ್ಲ ಸಾಮಾಗ್ರಿ ಮತ್ತು ದಿನಸಿ ವಸ್ತುಗಳು ಸಹ ಸಂಪೂರ್ಣವಾಗಿ ಸುಟ್ಟುಹೋಗಿವೆ. ಶಿರಹಟ್ಟಿಯ ಅಗ್ನಿಶಾಮಕ ಠಾಣೆಯ ವಾಹನ ಬೇರೆಡೆಗೆ ಹೋಗಿದ್ದರಿಂದ ಲಕ್ಷ್ಮೇಶ್ವರದಿಂದ ಅಗ್ನಿಶಾಮಕ ವಾಹನ ಬಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ‌. ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಗದಗ: ನೀರು ಬಿಡದ ಅಧಿಕಾರಿಗಳು, ಕಾಲುವೆ ನಂಬಿಕೊಂಡು ಕೃಷಿ ಮಾಡಿದ ರೈತರ ಪಾಡು ಕೇಳುವಿರಾ ಸಚಿವ ಸಿ.ಸಿ.ಪಾಟೀಲರೇ

ವಿದ್ಯುತ್‌ ಟಿಸಿಯಿಂದ ಹೊರಬಂದ ಕಿಡಿಯಿಂದ ಪ್ಲಾಟ್‌ನಲ್ಲಿಯ ಕುಟುಂಬಗಳ ಮನೆಗಳು ಸಂಪೂರ್ಣ ಭಸ್ಮವಾಗಿದೆ. ಈ ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಗ್ರಾಮಸ್ಥ ವೀರನಗೌಡ ಪಾಟೀಲ ಆಗ್ರಹಿಸಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ

ಇನ್ನು ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. ರೈತ ಮಹಿಳೆ ಶಾಂತಮ್ಮ ಪಾರಪ್ಪಣ್ಣವರ ಎನ್ನುವವರಿಗೆ ಸೇರಿದ ಜಮೀನು ಅವಘಡ ಉಂಟಾಗಿದೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಬೆಂಕಿ ನಂದಿಸಲಾಯಿತು. ಮುಂಡರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ.

ಇದನ್ನೂ ಓದಿ: ಗದಗ: ಮತ್ತೆ ತಾರಕಕ್ಕೇರಿದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಹಿರಿಯ, ಕಿರಿಯ ಶ್ರೀಗಳೆದುರೇ ಭಕ್ತರ ವಾಗ್ವಾದ

 ಚಲಿಸುತ್ತಿದ್ದ ಬೈಕ್​ನಲ್ಲಿ ಬೆಂಕಿ

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಬೈಕ್​ನಲ್ಲಿ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಬೈಕ್​ನಲ್ಲಿ ಬೆಂಕಿ ಕಂಡು ಯುವಕ ಬೈಕ್ ತಳ್ಳಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾನೆ. ಹೆದ್ದಾರಿಯಲ್ಲಿ ಪಲ್ಸರ್ ಬೈಕ್ ದಗ ದಗ ಹೊತ್ತಿ ಉರಿದಿದೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:04 pm, Sat, 28 January 23