ಗದಗ: ಮತ್ತೆ ತಾರಕಕ್ಕೇರಿದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಹಿರಿಯ, ಕಿರಿಯ ಶ್ರೀಗಳೆದುರೇ ಭಕ್ತರ ವಾಗ್ವಾದ
ಶಿವಾನಂದ ಮಠದ ಆವರಣದಲ್ಲಿ ಪೀಠಾಧಿಪತಿಗಳ ನಡುವೆ ಮತ್ತೆ ಜಟಾಪಟಿ ಶುರವಾಗಿದ್ದು ಹೈಡ್ರಾಮಾನೇ ನಡೆದಿದೆ. ಕಳಸಾಪುರ ರಸ್ತೆಯ ಮಠದ ಆವರಣದಲ್ಲಿ ಹಿರಿಯ, ಕಿರಿಯ ಸದಾಶಿವಾನಂದ ಶ್ರೀಗಳ ಸಮ್ಮುಖದಲ್ಲೇ ಭಕ್ತರು ವಾಗ್ವಾದ ಮಾಡಿದ್ದಾರೆ.
ಗದಗ: ಗದಗ ನಗರದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ (Shivananda Mutt successor controversy) ಈಗ ತಾರಕಕ್ಕೇರಿದೆ. ಹಿರಿಯ ಸ್ವಾಮೀಜಿ ಹಾಗೂ ಮೊದಲ ಪೀಠಾಧಿಪತಿ ಶ್ರೀಅಭಿನವ ಶಿವಾನಂದ ಮಹಾಸ್ವಾಮೀಜಿ ಉತ್ತರಾಧಿಕಾರಿ ಸದಾಶಿವಾನಂದ ಭಾರತಿಶ್ರೀಗಳನ್ನು ಪದಚ್ಯುತಿಗೊಳಿಸಿದ್ದಾರೆ. 2018ರ ಮೇ 25ರಂದು ಸದಾಶಿವಾನಂದ ಭಾರತಿ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿತ್ತು. ಆದರೆ ಭಕ್ತರು ಈಗ ಸದಾಶಿವಾನಂದ ಭಾರತಿ ಶ್ರೀಗಳನ್ನು ಪದಚ್ಯುತಿಗೊಳಿಸಿದ್ದಾರೆ. ಈ ಸಂಬಂಧ ಗದಗ ಉಪನೋಂದಣಿ ಕಚೇರಿಯಲ್ಲಿ ರದ್ದು ಮಾಡಿ ಆದೇಶ ಹೊರಡಿಸಿದ್ದರಿಂದಾಗಿ ಈಗ ಗಲಾಟೆ ಆರಂಭವಾಗಿದೆ. ನಗರದ ಶಿವಾನಂದ ಮಠದ (Shivananda Mutt) ಆವರಣದಲ್ಲಿ ಪೀಠಾಧಿಪತಿಗಳ ನಡುವೆ ಮತ್ತೆ ಜಟಾಪಟಿ ಶುರವಾಗಿದ್ದು ಹೈಡ್ರಾಮಾನೇ ನಡೆದಿದೆ. ಕಳಸಾಪುರ ರಸ್ತೆಯ ಮಠದ ಆವರಣದಲ್ಲಿ ಹಿರಿಯ, ಕಿರಿಯ ಸದಾಶಿವಾನಂದ ಶ್ರೀಗಳ ಸಮ್ಮುಖದಲ್ಲೇ ಭಕ್ತರು ವಾಗ್ವಾದ ಮಾಡಿದ್ದಾರೆ. ಕೋರ್ಟ್ ಆದೇಶದಂತೆ ಕಿರಿಯ ಶ್ರೀಗಳು ಮಠದ ಆವರಣದಲ್ಲಿ ಏನೂ ಮಾಡುವಂತಿಲ್ಲ ಅಂತಾ ಆರೋಪ ಮಾಡುತ್ತಿದ್ದಾರೆ. ತಪ್ಪು ಸಂದೇಶ ಬೇಡ ಅಂತ ಕಿರಿಯ ಶ್ರೀಗಳ ಪರ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಠದ ನಿಯಮ ಪಾಲಿಸದಿದ್ದಕ್ಕೆ ಪೀಠದಿಂದ ಕಿರಿಯ ಶ್ರೀಗಳನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಎಲ್ಲ ಶಾಖಾಮಠದ ಶ್ರೀಗಳು ಅಭಿಪ್ರಾಯ ಪಡೆದು ವಜಾ ಮಾಡಲಾಗಿದೆ ಎಂದು ಹಿರಿಯ ಶ್ರೀಗಳು ಹೇಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ