ಬೆಳಗಾವಿ, (ಸೆಪ್ಟೆಂಬರ್ 01): ವಿದ್ಯುತ್ ಪ್ರವಹಿಸಿ ತಂದೆ, ಮಗ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ(belagavi) ಜಿಲ್ಲೆಯ ವಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ. ತಂದೆ ಪ್ರಭಾಕರ್ ಹುಂಡಿ(75), ಮಗ ಮಂಜುನಾಥ ಹುಂಡಿ(32) ಮೃತ ದುರ್ವೈವಿಗಳು. ಮನೆ ಮುಂದೆ ವಿದ್ಯುತ್ ಕಂಬಕ್ಕೆ ಸಪೋರ್ಟಿವ್ ಆಗಿ ಕಟ್ಟಿದ್ದ ವೈಯರ್ ತೆಗೆಯಲು ಹೋದಾಗ ಪ್ರಭಾಕರ್ಗೆ ವಿದ್ಯುತ್ ಪ್ರವಹಿಸಿದೆ(electrocuted). ಬಳಿಕ ತಂದೆಯ ರಕ್ಷಣೆಗೆ ಮಾಡಲು ಹೋಗಿ ಪುತ್ರ ಮಂಜುನಾಥ್ ಸಹ ಪ್ರಾಣಕಳೆದುಕೊಂಡಿದ್ದಾನೆ.
ಮನೆ ಮುಂದಿನ ಕಸ ತೆಗೆಯುವಾಗ ನೆಲಕ್ಕೆ ಬಿದಿದ್ದ ವೈಯರ್ ತೆಗೆಯಲು ಹೋದಾಗ ವಿದ್ಯುತ್ ಪ್ರವಹಿಸಿದೆ. ಇದರಿಂದ ನೆಲಕ್ಕೆ ಬಿದ್ದು ಒದ್ದಾಡುವುದನ್ನ ಕಂಡು ಪುತ್ರ ಮಂಜುನಾಥ್ ಸಹಾಯಕ್ಕೆ ಬಂದಿದ್ದಾನೆ. ಆಗ ಆತನಿಗೆ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ತಂದೆ ಮಗ ಸಾವನ್ನಪ್ಪಿದ್ದಾರೆ. ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ತಂದೆ ಮಗ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ದೊಡವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸ್ಥಳಕ್ಕೆ ಹೆಸ್ಕಾಂ ಹಿರಿಯ ಅಧಿಕಾರಿಗಳು ಬರುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ಇನ್ನಷ್ಟು ಬೆಳಗಾವಿ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:48 am, Fri, 1 September 23