
Karnataka Winter Session 2022 Live News Updates: ಬೆಳಗಾವಿ: ಇಂದು ಬೆಳಗಾವಿ ಚಳಿಗಾಲದ ಅಧಿವೇಶನ(Belagavi Winter Session) 3ನೇ ದಿನಕ್ಕೆ ಕಾಲಿಟ್ಟಿದೆ. ಅಧಿವೇಶನದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಇಂದು ಅಧಿವೇಶನದಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಲಿದೆ. 26ನೇ ರಾಷ್ಟ್ರೀಯ ಯುವಜನೋತ್ಸವ ಆಯೋಜನೆ ಹಿನ್ನೆಲೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಂಜೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ವಿಧಾನಸಭೆಯಲ್ಲಿ ನಿಯಮ 69ರಡಿ ಗಡಿ ವಿವಾದ ಕುರಿತು ಚರ್ಚೆ ನಡೆಯಲಿದೆ. ಸದನದಲ್ಲಿಂದು ಗಡಿ ವಿಚಾರದಲ್ಲಿ ನಿರ್ಣಯ ಅಂಗೀಕಾರವಾಗುವ ಸಾಧ್ಯತೆ ಇದೆ. ಗಡಿ ವಿಚಾರದಲ್ಲಿ ನಿರ್ಣಯವನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳಿಸೋಣ ಎಂದು ನಿನ್ನೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಬಗ್ಗೆ ಸಿಎಂ ಮಾಹಿತಿ ನೀಡಿದ್ದರು. ಸಿಎಂ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಧ್ವನಿಗೂಡಿಸಿದ್ದರು. ಗಡಿ ವಿಚಾರದ ಚರ್ಚೆಗೆ ಇಂದು ರಾಜ್ಯ ಸರ್ಕಾರ ಉತ್ತರ ನೀಡಲಿದೆ.
ಗಡಿ ವಿವಾದ ವಿಚಾರವಾಗಿ ಮಹಾರಾಷ್ಟ್ರ ನಾಯಕರ ಹೇಳಿಕೆ ವಿಚಾರವಾಗಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಸಿದ್ದು, ನಾಳೆ ವಿಧಾನಸಭೆಯಲ್ಲಿ ಇದಕ್ಕೆ ಸುದೀರ್ಘವಾಗಿ ಉತ್ತರ ಕೊಡುತ್ತೇನೆ. ಗಡಿ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟ್ಟಿದ್ದಾರೆ, ಅದು ಆಗಲ್ಲ. ಈ ಹಿಂದೆ NCP ನಾಯಕರು ರಾಜಕೀಯ ಮಾಡಲು ಹೋಗಿ ವಿಫಲರಾದ್ರು. ಈಗಲೂ ಸಹ ಎನ್‌ಸಿಪಿ ನಾಯಕರಯ ವಿಫಲರಾಗ್ತಾರೆ ಎಂದು ಹೇಳಿದರು.
ಕೆ.ಎಸ್.ಈಶ್ವರಪ್ಪ ಹಿರಿಯ ನಾಯಕ, ಅವರಿಗೆ ಅಸಮಾಧಾನ ಇಲ್ಲ. ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈಗ ಈಶ್ವರಪ್ಪ, ರಮೇಶ್ ಜಾರಕಿಹೊಳಿರನ್ನು ಭೇಟಿ ಮಾಡುತ್ತೇನೆ. ಸಚಿವ ಸಂಪುಟ ವಿಸ್ತರಣೆ ವಿಷಯ ಬಂದಾಗ ನಿಮಗೆ ತಿಳಿಸುತ್ತೇನೆ ಎಂದು ಹೇಳಿದರು.
ಪರಿಷತ್ ಕಲಾಪ ನಾಳೆ ಬೆಳಗ್ಗೆ 11ಕ್ಕೆ ಮುಂದೂಡಿದ ಸಭಾಪತಿ ಬಸವರಾಜ ಹೊರಟ್ಟಿ.
ಹುಬ್ಬಳ್ಳಿಯ ಭೈರಿದೇವರಕೊಪ್ಪ ದರ್ಗಾ ತೆರವು ವಿಚಾರವನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಪ್ರಸ್ತಾಪ ಮಾಡಿದ್ದು, ಹುಬ್ಬಳ್ಳಿಯಲ್ಲಿ ರಸ್ತೆ ಅಗಲೀಕರಣದಿಂದ ನನ್ನ ಜಾಗ ಸಹ ಹೋಗಿದೆ. ನನ್ನ 19 ಗುಂಟೆ ಜಾಗ ಹೋಗಿದೆ. 5 ಲಕ್ಷ ಮಾತ್ರ ಪರಿಹಾರ ಸಿಕ್ಕಿದೆ ಎಂದು ಹೇಳಿದರು.
ಮರಾಠ ಸಮುದಾಯಕ್ಕೆ ಮೀಸಲಾತಿ ವಿಚಾರವನ್ನು ಶೂನ್ಯವೇಳೆಯಲ್ಲಿ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಪ್ರಸ್ತಾಪಿಸಿದರು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಲಾಗುವುದು. ವಿಧಾನಸಭೆಗೆ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಭರವಸೆ ನೀಡಿದರು. ಶಂಕರಪ್ಪ ಆಯೋಗದ ವರದಿ ಸೇರಿ ಮರು ಶಿಫಾರಸಿಗೆ ಸೂಚಿಸುತ್ತೇವೆ. ಶೀಘ್ರ ವರದಿ ಪಡೆದು ಸರ್ವಪಕ್ಷ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಶೀಘ್ರವೇ ತೀರ್ಮಾನ ಮಾಡುತ್ತೇವೆಂದು ವಿಧಾನಸಭೆಗೆ ಸಿಎಂ ಭರವಸೆ ನೀಡಿದರು.
ಸಭಾಪತಿ ಹೊರಟ್ಟಿ ಪ್ರಶ್ನೋತ್ತರ ಕಲಾಪ ಪ್ರಾರಂಭಿಸಿದ್ದು, ಮೈಸೂರು ಚೆನ್ನೈ ವಂದೇ ಭಾರತ್ ಟ್ರೇನ್ನ ಸಮಯ ಬದಲಾಯಿಸುವಂತೆ ಮರಿತಿಬ್ಬೇಗೌಡ ಪ್ರಸ್ತಾಪಿಸಿದರು. ಜನಶತಾಬ್ದಿ ಹಾಗೂ ವಂದೇ ಭಾರತ್ ಟ್ರೇನ್ ಸಮಯ ಕೇವಲ ಅರ್ಧ ಗಂಟೆ ವ್ಯತ್ಯಾಸ ಇದೆ. ಇದನ್ನು ಬದಲಾಯಿಸಿ ಮಂಡ್ಯದಲ್ಲಿಯೂ ಜನಶತಾಬ್ದಿ ಹಾಗೂ ವಂದೇ ಭಾರತ್ಗೆ ನಿಲುಗಡೆ ನೀಡುವಂತೆ ಒತ್ತಾಯಿಸಲಾಯಿತು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯೆ ಬಗೆಹರಿಸುವುದಾಗಿ ಸಚಿವ ಸೋಮಣ್ಣ ಭರವಸೆ ನೀಡಿದರು.
ವಿಧಾನಸಭೆ: ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರದ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನಸಭೆ:
ಶೂನ್ಯವೇಳೆಯಲ್ಲಿ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರದ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಆಗ್ರಹ. ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಆಗ್ರಹಿಸಿದರು.
ಕುಲಪತಿ ನೇಮಕಕ್ಕೆ 5-6 ಕೋಟಿ ಕೊಡಬೇಕು ಎಂದು ಬಿಜೆಪಿಯ ಜನಪ್ರತಿನಿಧಿಯೇ ಗಂಭೀರ ಆರೋಪ ಮಾಡಿದ್ದಾರೆ. ಇದರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಹರಿಪಸ್ರಾದ್ ಹೇಳಿದರು. ನೋಟಿಸ್ ಕೊಡಿ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸಭಾಪತಿ ತಿಳಿಸಿದರು. ಬಾವಿಗೆ ಇಳಿದು ವಿಪಕ್ಷ ಸದಸ್ಯರಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ವಿಪಕ್ಷ ಸದಸ್ಯರ ಧರಣಿ ಹಿನ್ನೆಲೆ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಪತಿ ಒಪ್ಪಿಗೆ ಹಿನ್ನೆಲೆ ಧರಣಿಯಿಂದ ಕಾಂಗ್ರೆಸ್ ಸದಸ್ಯರು ಹಿಂದೆ ಸರಿದರು.
ಜನ ಸಾಮಾನ್ಯರ ನೆಮ್ಮದಿಗೆ ಬೆಂಕಿ ಇಡುವ ಹೇಳಿಕೆಯನ್ನ ನೀಡಬಾರದು. ಮಹಾರಾಷ್ಟ್ರ ಸಿಎಂ, ನಮ್ಮ ಸಿಎಂ ಜೊತೆ ಅಮಿತ್ ಶಾ ಸಭೆ ನಡೆಸಿದ್ದಾರೆ. ಯಾವುದೇ ಹೇಳಿಕೆ ನೀಡದಂತೆ ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಎರಡೂ ರಾಜ್ಯದ ರಾಜಕೀಯ ಮುಖಂಡರು ಸಂಯಮ ತೋರಬೇಕು. ಆ ಸರ್ಕಾರ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದ ರೀತಿ ನೋಡಿಕೊಳ್ಳಬೇಕು ಎಂದು ಸುವರ್ಣಸೌಧದಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾಗಿದ್ದು, ಬೆಳಗ್ಗೆ ನಡೆದ ಘಟನೆ ಮರುಕಳಿಸಬಾರದು ಎಂದು ಸಿದ್ದರಾಮಯ್ಯ ಹೇಳಿದರು. ನಾವೆಲ್ಲರೂ ಜನರಿಂದ ಆಯ್ಕೆಯಾಗಿ ವಿಧಾನಸಭೆಗೆ ಬಂದಿದ್ದೇವೆ. ಶಾಸಕರಿಗೂ ಒಂದೇ ಸ್ಥಾನ, ಸಚಿವರಿಗೂ ಒಂದೇ ಸ್ಥಾನ. ಯಾರೇ ಆದರೂ ಅಗೌರವದಿಂದ ಮಾತನಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಮಾನರು. ಸದನ ನಡೆಯಬೇಕೆಂಬ ಉದ್ದೇಶದಿಂದ ಧರಣಿ ಹಿಂಪಡೆದಿದ್ದೇವೆ. ಅದಕ್ಕಾಗಿ ನಾವೇ ಒಂದು ಹೆಜ್ಜೆ ಹಿಂದೆ ಬರುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಾಳೆ ಪಂಚಮಸಾಲಿ ಸಮುದಾಯ ಸುವರ್ಣಸೌಧಕ್ಕೆ ಮುತ್ತಿಗೆ ಹಿನ್ನೆಲೆ ಬೆಳಗಾವಿಯಲ್ಲಿ 6 ಸಾವಿರಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಟಿವಿ9ಗೆ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾಳೆ ಒಂದು ಕಡೆ ಹಿರೇಬಾಗೇವಾಡಿ-ಬೆಳಗಾವಿ ರಾ.ಹೆದ್ದಾರಿ ಬಂದ್. ಮೀಸಲಾತಿ ಹೋರಾಟಕ್ಕೆ ಲಕ್ಷಾಂತರ ಜನರು ಬರುವ ಸಾಧ್ಯತೆ ಇದೆ. ಸ್ವಾಮೀಜಿ ಭೇಟಿಯಾಗಿ ಶಾಂತಿಯುತ ಹೋರಾಟಕ್ಕೆ ಮನವಿ ಮಾಡಿದ್ದೇವೆ. ಬೇರೆ ಜಿಲ್ಲೆಯಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳುತ್ತಿದ್ದೇವೆ. ಸುವರ್ಣಸೌಧಕ್ಕೆ ನಾಳೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸುತ್ತೇವೆ ಎಂದು ಹೇಳಿದರು.
ವಿಧಾನಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದ್ದು, ಡಿಸೆಂಬರ್ 23ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆಯಾದ ಹಿನ್ನೆಲೆ ವಿಧಾನಪರಿಷತ್ ಕಲಾಪ ಮಧ್ಯಾಹ್ನ 3.30ಕ್ಕೆ ಮುಂದೂಡಿಕೆ ಮಾಡಲಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ.
ಮೂರನೇ ಬಾರಿಗೆ ಬಸವರಾಜ ಹೊರಟ್ಟಿ ಸಭಾಪತಿಯಾಗಿದ್ದಾರೆ. ತಮ್ಮ ರಾಜಕೀಯ ಹಾದಿಯುದ್ದಕ್ಕೂಬೆನ್ನೆಲುಬಾಗಿ ನಿಂತ ರಾಜಕೀಯ ಗುರುಗಳಾದ ರಾಮಕೃಷ್ಣ ಹೆಗ್ಡೆ, ದೇವೇಗೌಡರು, ಎಸ್ ಆರ್ ಬೊಮ್ಮಾಯಿ, ಹೆಚ್ ಡಿಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಅನೇಕರನ್ನು ಸಭಾಪತಿ ಬಸವರಾಜ ಹೊರಟ್ಟಿ ಸ್ಮರಿಸಿದರು. ನಾನು ಇಂದು ದೇವೇಗೌಡರನ್ನು ನೆನೆಯಬೇಕು. ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ನೆನೆಯದೇ ಹೋದರೆ ಸರಿಯಲ್ಲ. ಇಂದು ಏನೇ ಆಗಿದ್ದರೂ ಬೇರೆ ಮುಖಂಡರ ಜೊತೆ ದೇವೇಗೌಡರಿಂದ ಇಲ್ಲಿ ಇದ್ದೇನೆ. ಸತತ ಮೂರು ಬಾರಿ ಆಯ್ಕೆಯಾಗಿದ್ದು ಒಂದು ದಾಖಲೆ. ಈ ಕೀರ್ತಿ ಶಿಕ್ಷಕರಿಗೆ ಸಲ್ಲಿತ್ತದೆ ಎಂದು ಹೇಳಿದರು.
ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನಸಭೆ ಬಹುತೇಕ ಯಶಸ್ವಿಯಾಗಿದೆ. ಕಲಾಪ ಆರಂಭ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಮಾತನಾಡಲಿದ್ದಾರೆ. ನಂತರ ವಿಪಕ್ಷ ಕಾಂಗ್ರೆಸ್ ಧರಣಿ ವಾಪಸ್ ಪಡೆಯಲಿದ್ದಾರೆ.
ವಿಧಾನಸಭೆ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ ನಡೆಯುತ್ತಿದೆ. ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ, ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದಾರೆ. ಸಂಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಒಬ್ಬ ಸದಸ್ಯರನ್ನು ಆ ರೀತಿ ನಡೆಸಿಕೊಳ್ಳುವುದು ಸರಿಯಲ್ಲ, ನನಗೆ ಸ್ವಾಭಿಮಾನ ಇದೆ ಎಂದು ಸಿಟ್ಟಾಗಿ ಅರ್ಧದಲ್ಲೇ ಸಭೆಯಿಂದ ಎದ್ದು ಹೋದ್ರು.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಸಚಿವ ಮಾಧುಸ್ವಾಮಿ ಗರಂ ಆಗಿದ್ದಾರೆ. ಮಾಧುಸ್ವಾಮಿ ಮಾತನಾಡುವಾಗ ಅಂಜಲಿ ನಿಂಬಾಳ್ಕರ್ ಬಾವಿಯಲ್ಲಿ ಎದುರು ಮಾತನಾಡಿದ್ರು. ಇದಕ್ಕೆ ಮಾಧುಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ರು. ಅಂಜಲಿ ನಿಂಬಾಳ್ಕರ್ ಅವರನ್ನು ಅಮಾನತು ಮಾಡಬೇಕು, ಹೊರಗೆ ಹಾಕಬೇಕು ಎಂದು ಮಾಧುಸ್ವಾಮಿ ಒತ್ತಾಯಿಸಿದ್ರು. ಈ ಬಗ್ಗೆ ನಾನು ಸಂಸದೀಯ ವ್ಯವಹಾರಗಳ ಸಚಿವನಾಗಿ ನಿರ್ಣಯ ಮಾಡುತ್ತೇನೆ. ಸದನದಿಂದ ಆಚೆ ಹಾಕಲೇಬೇಕು ಎಂದರು. ಹೊರಗಡೆ ಹಾಕ್ತೀರೋ ಇಲ್ವೋ ಎಂದು ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಅವರಿಗೆ ಮಾಧುಸ್ವಾಮಿ ಪ್ರಶ್ನೆ ಮಾಡಿದ್ರು. ಇದಕ್ಕೆ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ವಿರೋಧಿಸಿದ್ದು ಈವರೆಗೆ ಸದನದಲ್ಲಿ ಯಾವ ಮಹಿಳೆಯನ್ನು ಹಾಗೆ ನಡೆಸಿಕೊಂಡಿಲ್ಲ. ಇದು ಸರಿಯಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದು ಪ್ರಜಾಪ್ರಭುತ್ವ ರೀತಿಯಲ್ಲಿ ಸರಿಯಾದ ನಡೆಯಲ್ಲ ಎಂದರು.
ಅವರನ್ನು ಆಚೆಗೆ ಹಾಕಿ, ನಾನು ಸಂಸದೀಯ ವ್ಯವಹಾರಗಳ ಸಚಿವ ನಿರ್ಣಯ ಹೇಳ್ತಿದ್ದೀನಿ, ಮಾರ್ಷಲ್ ಕರೆಸಿ ಹೊರಗೆ ಕಳಿಸಿ ಎಂದು ಕಾಂಗ್ರೆಸ್ ಶಾಸಕರ ಮೇಲೆ ಮಾಧುಸ್ವಾಮಿ ಗರಂ ಆಗಿದ್ದಾರೆ. ಆಗ ಕಾಂಗ್ರೆಸ್ ಶಾಸಕರು ಆಕ್ರೋಶ ಹೊರ ಹಾಕಿದ್ದಾರೆ. ಇದೇನಾ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಸಿದ್ದರಾಮಯ್ಯ ಗರಂ ಆದ್ರು. ಗೂಂಡಾ ಮಂತ್ರಿ ಎಂದು ಕಾಂಗ್ರೆಸ್ ಶಾಸಕರು ಕೂಗಾಡುದ್ರು.
ವಿಧಾನಸಭೆಯಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಬಗ್ಗೆ ಚರ್ಚೆ ಕಾವೇರಿದೆ. ಧರಣಿ ಮಾಡಿ ಸದನದ ಸಮಯ ಹಾಳು ಮಾಡೋದು ಸರಿಯಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದು ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಈಗಾಗಲೇ ಸಚಿವರು ಚರ್ಚೆ ಮಾಡೋದಾಗಿ ಹೇಳಿದ್ದಾರೆ ಎಂದರು. ರಂಗನಾಥ್ರನ್ನು ಹೇಯ್ ಆಚೆ ಹೋಗು ಅಂದ್ರೆ ಏನರ್ಥ? ಎಲ್ಲಾ ಶಾಸಕರನ್ನು ರಕ್ಷಣೆ ಮಾಡಬೇಕಾದವರು ಅಧ್ಯಕ್ಷರು. ಆದರೆ ಸಚಿವರು ಈ ರೀತಿ ಮಾತಾಡಿದ್ರೆ ಹೇಗೆ ಎಂದು ಸಿದ್ದರಾಮಯ್ಯ ಗರಂ ಆದ್ರು. ಈ ವೇಳೆ ನಾನು ಆ ಮಾತು ಅಂದಿಲ್ಲ ಎಂದು ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ರು. ನೀವಲ್ಲ, ಗೋವಿಂದ ಕಾರಜೋಳ ಅಂದಿದ್ದು ಎಂದು ಸಿದ್ದರಾಮಯ್ಯ ಉಲ್ಟಾ ಹೊಡೆದ್ರು. ಶಾಸಕರ ಮೇಲೆ ಮಂತ್ರಿ ಆದವರು ದಾಳಿ ಮಾಡೋದು ಸರಿಯಾ? ಸದನದ ಸಮಯ ಹಾಳು ಮಾಡೋಕೆ ಬಂದಿಲ್ಲ. ನಾವು ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆಗೆ ಬಂದಿದ್ದೇವೆ. ಸಚಿವರ ದಾಳಿಯನ್ನು ನಾವು ಸಹಿಸಿಕೊಳ್ಳಲು ಆಗಲ್ಲ ಎಂದರು. ಈ ವೇಳೆ ನಿಮ್ಮವರು ಹಿಂದೆ ಮಾತನಾಡಿಲ್ವಾ ಎಂದು ಸಿಎಂ ಪ್ರಶ್ನೆ ಮಾಡಿದ್ದು ಟೇಬಲ್ ಮೇಲೆ ನಿಂತು, ಮೈಕ್ ಕಿತ್ತುಕೊಂಡಿದ್ದನ್ನು ನೋಡಿದ್ದೇವೆ. ನಿಮ್ಮವರ ಹತ್ತಿರವೇ ಮೈಕ್ ಕಿತ್ಕೊಂಡಿದ್ದವರು ಈಗ ನಿಮ್ಮ ಲೀಡರ್ ಎಂದರು.
ಕಾಂಗ್ರೆಸ್ ಟಿಕೆಟ್ ನೀಡಲು ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಚುನಾವಣಾ ಸಮಿತಿಗೆ ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಡೆಡ್ ಲೈನ್ ಹೊರಡಿಸಿದ್ದಾರೆ. ಜಿಲ್ಲಾವಾರು ಅಭ್ಯರ್ಥಿಗಳ ಒನ್ ಟು ಒನ್ ಡಿಟೇಲ್ಸ್ ಪಡೆದುಕೊಂಡಿರುವ ಡಿಕೆ ಶಿವಕುಮಾರ್, ಬೆಳಗಾವಿಯಲ್ಲಿ ಕೂತು ಟಿಕೆಟ್ ಹಂಚಿಕೆ ಸಂಬಂಧ ತಡರಾತ್ರಿವರೆಗೂ ಮಾಹಿತಿ ಕಲೆ ಹಾಕಿದ್ದಾರೆ. ಅಭ್ಯರ್ಥಿಗಳ ಮಾಹಿತಿ ಸಂಗ್ರಹದ ಬಳಿಕ ಕೆಪಿಸಿಸಿ ಚುನಾವಣಾ ಸಮಿತಿಗೆ ಡೆಡ್ ಲೈನ್ ಹೊರಡಿಸಿದ್ದಾರೆ. ಡಿಸೆಂಬರ್ 31ರ ಒಳಗೆ ಚುನಾವಣಾ ಸಮಿತಿ ಮೊದಲ ವರದಿ ನೀಡುವಂತೆ ಸೂಚಿಸಿದ್ದಾರೆ. ಜನವರಿ 1 ರಂದು ಕೆಪಿಸಿಸಿ ಚುನಾವಣಾ ಸಮಿತಿ ಮೊದಲ ಪಟ್ಟಿಯನ್ನು ಕೆಪಿಸಿಸಿಗೆ ನೀಡುವಂತೆ ಸೂಚಿಸಿದ್ದಾರೆ.
ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಲು ಸರ್ಕಾರ ಒಪ್ಪಿದೆ ಧರಣಿ ಕೈಬಿಡಿ ಎಂದು ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಮನವಿ ಮಾಡಿದ್ರು. ಸಚಿವರು ವಿಷಾದ ವ್ಯಕ್ತಪಡಿಸಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಸದನದನಲ್ಲಿ ಘೋಷಣೆ ಮುಂದುವರಿದಿದೆ. ಈ ವೇಳೆ ಸಿಎಂ ಮತ್ತು ಸ್ಪೀಕರ್ ಮೌನವಾಗಿ ಕುಳಿತಿದ್ದಾರೆ.
ವಿಧಾನಸಭೆ ಮೊಗಸಾಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಣಿಗಲ್ ಶಾಸಕ ರಂಗನಾಥ್, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತುಕತೆ ನಡೆಸಿದ್ರು. ವಿಪಕ್ಷ ಮೊಗಸಾಲೆಯಲ್ಲಿ ಸಚಿವ ಮಾಧುಸ್ವಾಮಿ ಅವರನ್ನು ಕರೆದುಕೊಂಡು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಸಿದ್ದರಾಮಯ್ಯ ಬಳಿ ಕೂರಿಸಿ ಮಾತನಾಡಿಸಿದ್ರು. ಮಾತುಕತೆ ಬಳಿಕ ಸದನದೊಳಕ್ಕೆ ತೆರಳುವ ವೇಳೆ, ನೀವು ನಮ್ಮ ಜಿಲ್ಲೆಯವರಾಗಿ ನಿಂತುಕೊಳ್ಳೋಕೇ ಬಿಡಲ್ವಲ್ಲಾ ಬಿಜೆಪಿಯವರು ಎಂದು ಮಾಧುಸ್ವಾಮಿಗೆ ಶಾಸಕ ರಂಗನಾಥ್ ಹೇಳಿದ್ರು. ಇಲ್ಲಪ್ಪ ನನಗೇನೂ ನಿನ್ನ ಮೇಲೆ ಸಿಟ್ಟಿಲ್ಲ ಎಂದು ಮಾಧುಸ್ವಾಮಿ ನಕ್ಕರು. ಈ ವೇಳೆ ಅವರು ನಿಲ್ಲಲು ಬಿಡಲ್ಲ, ಕುಳಿತುಕೊಳ್ಳಲು ಬಿಡುತ್ತಾರೆ ಎಂದು ಶಾಸಕ ಕೆ.ಜೆ. ಜಾರ್ಜ್ ಕಾಲೆಳೆದರು.
ನಾನು ಸಹ ಕಳೆದ ಬಾರಿ ವರುಣಾ ಕ್ಷೇತ್ರಕ್ಕೆ ಹೋಗಿದ್ದೆ. ಅನೇಕ ಊರುಗಳಲ್ಲಿ ಬಸ್ ಗಳಿಲ್ಲ ಎಂದು ನನಗೆ ಹೇಳಿದ್ರು. ನಾನು ಜಿಲ್ಲಾಧಿಕಾರಿಗೆ ಫೋನ್ ಮಾಡಿದ್ದೆ. ಈ ವೇಳೆ ಅವರು ಸಿಬ್ಬಂದಿಗಳು ಇಲ್ಲ ಎಂದು ಹೇಳಿದ್ರು. ನಮ್ಮ ಶಾಸಕರಿಗೆ ಹೇಳಿದ್ರಂತೆ ರಸ್ತೆಗಳು ಸರಿ ಇಲ್ಲ ಬಸ್ ಹಾಕಲ್ಲ ಅಂತಾ ಎಂದು ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಶ್ರೀರಾಮುಲು ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಇದೇ ವೇಳೆ ಸಚಿವ ಗೋವಿಂದ್ ಕಾರಜೋಳ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು. ನೀತಿ ಪಾಠ ಎನ್ನೋದು ಎಲ್ಲಾರಿಗೂ ಇರುತ್ತೆ ಎಲ್ಲಾರಿಗೂ ಗೌರವವಿದೆ. ಮಂತ್ರಿಯಾದವರು ಗೌರವದಿಂದ ನಡೆದುಕೊಳ್ಳಬೇಕು. ಸಚಿವ ಗೋವಿಂದ ಕಾರಜೋಳ ವರ್ತನೆ ಸರಿ ಇಲ್ಲ. ಬಸ್ ಸಮಸ್ಯೆ ಬಗ್ಗೆ 30 ನಿಮಿಷ ಚರ್ಚೆಗೆ ಅವಕಾಶ ಕೊಡಿ. ಅವಕಾಶ ಕೊಡದಿದ್ದರೆ ನಾವು ಧರಣಿ ಮುಂದುವರೆಸುತ್ತೇವೆ ಎಂದರು.
ಬೆಳಗಾವಿ ಸುವರ್ಣಸೌಧ ಮುಂಭಾಗದ ಕೊಂಡಸಕೊಪ್ಪ ಬಳಿ ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಧರಣಿಯಲ್ಲಿ ಸದಾಶಿವ ಆಯೋಗದ ವರದಿಯನ್ನ ಇದೇ ಅಧಿವೇಶನದಲ್ಲಿ ಮಂಡನೆಗೆ ಪಟ್ಟು ಹಿಡಿಯಲಾಗಿದೆ. ದಲಿತ ಸಮುದಾಯದಲ್ಲಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನಿಗಧಿ ಆಗಲೇಬೇಕೆಂದು ಒತ್ತಾಯಿಸಿದ್ದಾರೆ. ಈಗಾಗಲೇ ಸಮಾಜದ ಹೋರಾಟದ ಫಲವಾಗಿ ಒಂದು ಹಂತದ ಯಶಸ್ಸು ಸಿಕ್ಕಿದೆ. ಸರ್ಕಾರ ಉಪಸಮಿತಿ ನೇಮಕ ಮಾಡಿದೆ, ಒಂದು ಸಭೆ ಆಗಿದೆ. ಅಂತಿಮ ಹಂತದ ಸಭೆ ನಡೆಸುವ ಮೂಲಕ ಸದಾಶಿವ ಆಯೋಗ ವರದಿ ಜಾರಿ ಮಾಡಬೇಕು. ಸರ್ಕಾರದ ಗಮನ ಸೆಳೆಯಲು ಇಂದು ಸುವರ್ಣಸೌಧದ ಮುಂದೆ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಪ್ರತಿಭಟನಾ ಸ್ಥಳದಲ್ಲಿ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹೇಳಿದ್ರು.
ವಿಧಾನಸಭೆ ಪ್ರಶ್ನೋತ್ತರ ಕಲಾಪ ಪುನಾರಂಭವಾಗಿದ್ದು ಪ್ರತಿಪಕ್ಷ ಕಾಂಗ್ರೆಸ್ನಿಂದ ಪ್ರತಿಭಟನೆ ಕೂಡ ಮುಂದುವರಿದಿದೆ.
ಬಸವರಾಜ ಹೊರಟ್ಟಿಯವರು ನಮ್ಮವರು. ಅವರ ದೇಹ ಬಿಜೆಪಿಯಲ್ಲಿದ್ರು, ಅವರ ಮನಸ್ಸು ಜೆಡಿಎಸ್ ನೊಂದಿಗೆ ಇದೆ. 42 ವರ್ಷಗಳಿಂದಲೂ ಅವರು ನಮ್ಮ ಜೊತೆ ಇದ್ದಾರೆ ಎಂದು ಜೆಡಿಎಸ್ ಪರಿಷತ್ ನಾಯಕ ಭೋಜೆಗೌಡ ಹೇಳಿದ್ದು ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಹೇ ಗೌಡ ಅವರ ಲೋಕಶಕ್ತಿಯಿಂದ ಆಯ್ಕೆ ಆಗಿದ್ರು, ಲೋಕಶಕ್ತಿ ನಿಮ್ಮದು ಹೇಗೆ ಆಗುತ್ತೆ ಎಂದು ಕಾಲೆಳೆದ್ರು. ಲೋಕಶಕ್ತಿ ನಿಮ್ಮದು ಎಂದ್ರೆ ಅಷ್ಟೇ ಯಜಮಾನರು ನಿನ್ನನ್ನ ಮನೆಗೆ ಕರೆಸ್ತಾರೆ ಎಂದರು. ಈ ವೇಳೆ ಮಂಕುತಿಮ್ಮನ ಕಗ್ಗ, ಕವನವನ್ನ ಹೇಳಿ ಬಸವರಾಜ ಹೊರಟ್ಟಿಯವರಿಗೆ ಭೋಜೆಗೌಡ ಅಭಿನಂದನೆ ತಿಳಿಸಿದ್ರು.
ಅಡಿಕೆ ಬಿಟ್ಟು ಇತರೆ ಉಪಬೆಳೆ ಬೆಳೆಯಲು ತೋಟಗಾರಿಕಾ ಇಲಾಖೆ ತೆಗೆದುಕೊಂಡಿರುವ ಕ್ರಮ ಹಾಗೂ ಅಡಿಕೆ ಎಲೆ ಚುಕ್ಕಿ ರೋಗದ ಬಗ್ಗೆ ಸುಧೀರ್ಘ ಚರ್ಚೆ ಆಗಬೇಕು ಎಂದು ಎಲೆ ಚುಕ್ಕಿ ರೋಗಕ್ಕೆ ಸರ್ಕಾರದ ಕ್ರಮದ ಬಗ್ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ದಕ್ಷಿಣ ಕನ್ನಡದಲ್ಲಿ ಆಹಾರ ಬೆಳೆ ಬೆಳೆಯಲು ಸಾಧ್ಯವಿಲ್ಲ. ತೆಂಗು, ಅಡಿಕೆ, ಏಲಕ್ಕಿ, ಕಾಳು ಮೆಣಸು ಬೆಳೆಯುತ್ತಿದ್ದಾರೆ. ಸಬ್ಸಿಡಿ ಕೊಡುವ ಕೆಲಸ ಮಾಡಲಾಗಿದೆ. ಪ್ರಧಾನಮಂತ್ರಿ ಕೃಷಿ ಯೋಜನೆ ಅಡಿ ಪರಿಶಿಷ್ಟ ಜಾತಿ ಪಂಗಡಕ್ಕೆ 90%, ಸಾಮಾನ್ಯರಿಗೆ 75% ಕೊಡಲಾಗ್ತಿದೆ. ಎಲೆ ಚುಕ್ಕಿ ರೋಗದ ಬಗ್ಗೆ ಪ್ರಶ್ನೆ ಉದ್ಭವ ಆಗಿದೆ. ಗಾಳಿಯಲ್ಲಿ ಮಹಾಮಾರಿ ಹರಡುತ್ತಿದೆ. ಸಂಶೋಧನೆ ಮಾಡಲು ಸರ್ಕಾರ ಪ್ರಯತ್ನ ಮಾಡಿದೆ ಎಂದರು. ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಮಧ್ಯಪ್ರವೇಶಿಸಿ, ಹಲವು ವರ್ಷಗಳಿಂದ ಎಲೆಚುಕ್ಕೆ ರೋಗ ಇದೆ. ಒಂದು ಬಾರಿ ರೋಗ ಬಂದ್ರೆ ಇಡೀ ಮರವೇ ಹೋಗುತ್ತಿದೆ. ಒಂದು ತಲೆಮಾರು ಬೆಳೆಯೇ ಹೋಗ್ತಿದೆ, ಔಷಧಿಯೇ ಇಲ್ಲ ಎಂದರು.
ಸಾರಿಗೆ ಇಲಾಖೆಯ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಉತ್ತರಕ್ಕೆ ಕೆಲ ಶಾಸಕರು ಸದನದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆಗಳಿಗೆ ಹೋಗಲು ಮಕ್ಕಳು ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ಸದನದಲ್ಲಿ ಕೆಲ ಶಾಸಕರು ಬಸ್ ಒದಗಿಸಲು ಆಗ್ರಹಿಸಿದ್ರು. ಇದಕ್ಕೆ ಸಚಿವ ಶ್ರೀರಾಮುಲು, ಕೊರೊನಾ ಮುಂಚೆ ಸೌಲಭ್ಯ ಇತ್ತು. ಕೊರೊನಾ ಬಳಿಕ ಕೆಲ ಕಡೆ ಇನ್ನೂ ಬಸ್ ಆರಂಭವಾಗಿಲ್ಲ. ಕೆಲವೊಂದು ಕಡೆ ರಸ್ತೆಗಳು ಸರಿ ಇಲ್ಲ ಎಂದು ಬಸ್ ಆರಂಭವಾಗಿಲ್ಲ ಎಂದರು. ಇದಕ್ಕೆ ಸದನದಲ್ಲಿ ವಿಪಕ್ಷ ನಾಯಕರು, ಶಾಸಕರು ಆಕ್ರೋಶ ಹೊರ ಹಾಕುದ್ರು. ರಸ್ತೆ ಸರಿಯಿಲ್ಲ ಎಂದ್ರೆ ಹೇಗೆ? ಇದು ಸರ್ಕಾರದ ವೈಪಲ್ಯ ಎಂದು ಕೂಗಾಡಿದರು.
ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪರಿಂದ ವಿಧಾನಸಭೆ ಕಲಾಪ ಕೆಲಕಾಲ ಮುಂದೂಡಲಾಗಿದೆ. ಸದನದಲ್ಲಿ ತೀವ್ರ ಗದ್ದಲ ಮುಂದುವರಿದ ಹಿನ್ನೆಲೆ ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಲಾಗಿದೆ.
ಸದನದಲ್ಲಿ ಸರ್ಕಾರಿ ಬಸ್ ಸಮಸ್ಯೆ ಪ್ರತಿಧ್ವನಿಸಿದೆ. ಶಾಲಾ ಮಕ್ಕಳಿಗೆ ಬಸ್ ಸಮಸ್ಯೆ ಬಗ್ಗೆ ತೇರದಾಳ ಶಾಸಕ ಸಿದ್ದು ಸವದಿ ಪ್ರಸ್ತಾಪ ಮಾಡಿದ್ರು. ಸಮಸ್ಯೆ ಇದ್ದಲ್ಲಿ ಬಸ್ ವ್ಯವಸ್ಥೆ ಒದಗಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಭರವಸೆ ನೀಡಿದ್ರು. ಈ ವೇಳೆ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಬಸ್ ಸಮಸ್ಯೆ ಬಗ್ಗೆ ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಧ್ವನಿ ಎತ್ತಿದ್ರು. ರಸ್ತೆ ಸಮಸ್ಯೆ, ಬಸ್ ಸಮಸ್ಯೆ ಬಗ್ಗೆ ಸದನದಲ್ಲಿ ಶಾಸಕರ ಗದ್ದಲ ಶುರುವಾಯ್ತು. ಹಾಗೂ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ ಧರಣಿ ನಡೆಸುವ ಎಚ್ಚರಿಕೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ನೀಡಿದ್ದಾರೆ. ಸ್ಪೀಕರ್ ಪೀಠದಲ್ಲಿರುವ ಕುಮಾರ್ ಬಂಗಾರಪ್ಪ ಧರಣಿ ನಡೆಸದಂತೆ ವಿಪಕ್ಷಗಳ ಶಾಸಕರಿಗೆ ಮನವಿ ಮಾಡಿದ್ರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ಶುರುವಾಗಿದ್ದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ, ಕೋಲಾಹಲ ಎದ್ದಿದೆ. ಸದನದ ಬಾವಿಗೆ ಇಳಿದು ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸದಸ್ಯರನ್ನು ಸದನದಿಂದ ಹೊರಹಾಕುವಂತೆ ಮನವಿ ಮಾಡಿದ್ದಾರೆ. ಸಭಾಧ್ಯಕ್ಷರಿಗೆ ಆಡಳಿತಾರೂಢ ಬಿಜೆಪಿ ಸದಸ್ಯರಿಂದ ಒತ್ತಾಯ.
ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಿನ್ನೆಲೆ ನಾಳೆ ಸಚಿವ ಸಂಪುಟದಲ್ಲಿ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ನಾಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಮತ್ತೊಂದೆಡೆ ಸಂಜೆ ಸುವರ್ಣ ಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ ಆಗಿದ್ದಾರೆ. ಸಭಾಪತಿಯಾಗಿ ಹೊರಟ್ಟಿ ಚುನಾಯಿಸುವಂತೆ ತೇಜಸ್ವಿನಿಗೌಡ, ಶಾಂತಾರಾಂ ಸಿದ್ದಿ, ವೈ.ಎ.ನಾರಾಯಣಸ್ವಾಮಿ, ಅ.ದೇವೇಗೌಡರಿಂದ ಪ್ರಸ್ತಾವ ಸೂಚಿಸಿದ್ರು. ಪ್ರಸ್ತಾವಕ್ಕೆ ಅನುಮೋದಿಸಿದ ಆಯನೂರು ಮಂಜುನಾಥ್,ಆರ್.ಶಂಕರ್ ಹಾಗೂ ಎಸ್.ವಿ.ಸಂಕನೂರು, ಪ್ರದೀಪ್ ಶೆಟ್ಟರ್ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ ಮಾಡಿದ್ದಾರೆ. ಸಭಾನಾಯಕ, ಸಿಎಂ, ವಿಪಕ್ಷ ನಾಯಕ ಸಭಾಪತಿ ಪೀಠಕ್ಕೆ ಹೊರಟ್ಟಿ ಕರೆತಂದ್ರು.
ಮಹಾರಾಷ್ಟ್ರ ಡ್ಯಾಂ ಎತ್ತರ ಹೆಚ್ಚಿಸುವಂತೆ NCP ಶಾಸಕ ಒತ್ತಡ ವಿಚಾರಕ್ಕೆ ಸಂಬಂಧಿಸಿ ಸುವರ್ಣಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮಹಾರಾಷ್ಟ್ರದವರು ಬಾಯಿಗೆಬಂದ ಹಾಗೆ ಮಾತಾಡಿದರೆ ನಮಗೂ ಮಾತನಾಡಲು ಬರುತ್ತೆ. ಮಹಾರಾಷ್ಟ್ರ, ಕರ್ನಾಟಕ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಗಡಿ ವಿಚಾರದಲ್ಲಿ ಶಾಂತಿ ಕಾಪಾಡಲು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಆದರೂ ಮಹಾರಾಷ್ಟ್ರದ ನಾಯಕರು ಗಡಿ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಮಹಾಜನ್ ಆಯೋಗ ಜಾರಿಗೆ ಮಹಾರಾಷ್ಟ್ರ ಒತ್ತಾಯಿಸಿತ್ತು. ಮಹಾಜನ್ ಆಯೋಗದ ವರದಿಯಂತೆ ಗಡಿ ಸಮಸ್ಯೆ ಪರಿಹರಿಸಲಾಗಿದೆ. ಆದರೂ ಮಹಾರಾಷ್ಟ್ರದವರು ಗಡಿ ವಿಚಾರವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಮಹಾರಾಷ್ಟ್ರದವರಿಗೆ ಕಾನೂನಿನ ಮೇಲೆ ಗೌರವ ಇಲ್ಲ. ಗಡಿ ವಿಚಾರವಾಗಿ ಅನಗತ್ಯವಾಗಿ ಪುಂಡಾಟ, ಗೂಂಡಾಗಿರಿ ಮಾಡ್ತಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಗಡಿ ವಿಚಾರ ನಿಭಾಯಿಸುವಲ್ಲಿ ಮೂರು ಸರ್ಕಾರಗಳು ವಿಫಲ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ನಡೆಯುತ್ತಿದೆ. ಅಧಿವೇಶವನ್ನ ಬಿಟ್ಟು ಪ್ರಚಾರ ನಡೆಸುತ್ತಿರುವ ಕುಮಾರಸ್ವಾಮಿ ವಿರುದ್ದ ಪ್ರತಿ ಪಕ್ಷಗಳ ನಾಯಕರು ಕಿಡಿಕಾರಿದ್ದಾರೆ. ಪಂಚರತ್ನ ಯಾತ್ರೆಯನ್ನೆ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್, ಬಿಜೆಪಿ, ಕುಮಾರಸ್ವಾಮಿಯ ಯಾತ್ರೆಗೆ ಟಾಂಗ್ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವಿದೆ ಈ ವೇಳೆ ಯಾತ್ರೆಯ ಅವಶ್ಯಕತೆ ಏನಿತ್ತು. ಇವ್ರು ಬಡವರ ರೈತರ ಜನಪರ ಅಂತ ಹೇಳ್ತಾರೆ ಇದೇನಾ ಇವರ ನಿಷ್ಠೆ. ರೈತರಿಗೆ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಪಡಿಸಿ ಎಂದು ಧರಣಿ ನಡೆಸುತ್ತಿದ್ದಾರೆ. ಮಂಡ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ ಈ ಕುರಿತು ಅಧಿವೇಶನದಲ್ಲಿ ಚರ್ಚಿಸಬಹುದಿತ್ತು. ಇದೇ ಈ ಸರ್ಕಾರದ ಕೊನೆಯ ಅಧಿವೇಶನ ಮುಂದೆ ಬಡ್ಜೆಟ್ ಶುರುವಾಗುತ್ತೆ. ಅಧಿವೇಶನಕ್ಕೆ ಹಾಜರಾಗಿ ಜನರ ಕಷ್ಟದ ಕುರಿತು ಚರ್ಚೆ ನಡೆಸಬಹುದಿತ್ತು ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.
ಬಿಜೆಪಿಯ ಒಂದೂ ನಾಯಿಯೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. 1951ರಲ್ಲಿ ಜನಸಂಘ, 1980ರಲ್ಲಿ ಬಿಜೆಪಿ ಹುಟ್ಟಿತು. 1951ರ ಬಳಿಕ ತುರ್ತುಪರಿಸ್ಥಿತಿ ಹೇರಿದಾಗ ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ. ಲಕ್ಷಾಂತರ ಜನಸಂಘ ಕಾರ್ಯಕರ್ತರು ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ಮಾಡಿದ್ರು. ಸರ್ವಾಧಿಕಾರಿಯಾದಂತ ಇಂದಿರಾ ಗಾಂಧಿಯನ್ನು ಅಧಿಕಾರದಿಂದ ಕೆಳಗಿಳಿಸಿ ಜನತಾ ಪಕ್ಷ ಅಧಿಕಾರಕ್ಕೆ ತಂದ್ರು. ನಾವು ಸಂವಿಧಾನ ರಕ್ಷಣೆಗೆ ಹೋರಾಟ ಮಾಡಿದ್ದೀವಿ. ನೀವು ಆಗ ಯಾರ ಓಲೈಕೆಯಲ್ಲಿ ತೊಡಗಿದ್ರಿ ಅಂತಾ ಆ ಸಂದರ್ಭದ ದಿನಮಾನ ನೆನಪಿಸಿಕೊಂಡರೆ ಅರ್ಥ ಆಗುತ್ತೆ. ಸ್ವತಂತ್ರ ಭಾರತಕ್ಕೆ ಕಾಂಗ್ರೆಸ್ ಕೊಡುಗೆ ಕೊಟ್ಟಿದೆ ಅಂತಾ ಒಪ್ಪಿಕೊಳ್ಳೋಣ. ಆ ಕೊಡುಗೆ ಕೊಟ್ಟಿದ್ದು ಸ್ವಾತಂತ್ರ್ಯ ಭಾರತ ಲೂಟಿ ಮಾಡಕ್ಕಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದಂತೆ ನಾಲ್ಕೈದು ತಲೆಮಾರು ಜಮಾಯಿಸಿಕೊಳ್ಳೋದಕ್ಕಾ? ಎಂದರು
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ, ಮಹಾರಾಷ್ಟ್ರ ಭಾಷೆ ಬೇರೆಯಾದ್ರೂ ಸಂಸ್ಕೃತಿ ಒಂದೇ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾ.ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ರು. ಹತ್ತಾರು ವರ್ಷಗಳಿಂದ ಸೌಹಾರ್ದಯುತವಾಗಿ ಇದ್ದೇವೆ ಎಂದರು. ಇನ್ನು ಮಹಾರಾಷ್ಟ್ರ ಸದನದಲ್ಲಿ ಕರ್ನಾಟಕ ಸಿಎಂಗೆ ಅಪಮಾನ ವಿಚಾರಕ್ಕೆ ಸಂಬಂಧಿಸಿ ನಮ್ಮ ಸಿಎಂ ಗೌರವ ಒಂದು ಪರ್ಸೆಂಟ್ ಕೂಡ ಕಡಿಮೆ ಆಗಲ್ಲ. ಜಗಳವಾಡಬೇಕೆಂದು ಬಯಸಿದರೆ ಹೆಜ್ಜೆ ಹೆಜ್ಜೆಗೂ ಜಗಳವಾಗುತ್ತದೆ. ನಾವು ಭಾಷೆ ಭಾಷೆ ಮಧ್ಯೆ ಸಂಬಂಧ ಗಟ್ಟಿಗೊಳಿಸಬೇಕಿದೆ. ರಾಜಕೀಯ ನಿರುದ್ಯೋಗಿಯಾದಾಗ ಉದ್ಯೋಗ ಸೃಷ್ಟಿ ಮಾಡಿಕೊಳ್ತಾರೆ ಎಂದರು.
2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಹೋರಾಟ ವಿಚಾರಕ್ಕೆ ಸಂಬಂಧಿಸಿ ನಾಳೆಯೊಳಗೆ ರಾಜ್ಯ ಸರ್ಕಾರ 2ಎ ಮೀಸಲಾತಿ ಘೋಷಣೆ ಮಾಡಬೇಕು. ಮೀಸಲಾತಿ ಘೋಷಣೆ ಮಾಡದಿದ್ರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕ್ತೇವೆ ಎಂದು ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಜಯಮೃತ್ಯುಂಜಯ ಶ್ರೀಗಳ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ನಾವು ಸಾಕಷ್ಟು ಭರವಸೆ ಇಟ್ಟಿದ್ದೇವೆ. ಆದ್ರೆ ಮುಖ್ಯಮಂತ್ರಿಗಳು ಮಾತು ತಪ್ಪುವ ರೀತಿಯಲ್ಲಿ ನಡೆದುಕೊಳ್ತಿದ್ದಾರೆ. ನಾಳೆ ಎಲ್ಲಾ ಜಿಲ್ಲೆಗಳಿಂದಲೂ ಸಮುದಾಯದ ಜನರು ಆಗಮಿಸಲಿದ್ದಾರೆ. ನಾಳಿನ ಹೋರಾಟಕ್ಕೆ ಸುಮಾರು 20 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ರಾಜ್ಯದಲ್ಲಿ ಹಲವು ಸಮುದಾಯಗಳು ಮೀಸಲಾತಿ ಕೇಳುತ್ತಿರುವ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಪಕ್ಷ ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತಿದೆ. ಯಾವುದೇ ತುಳಿತಕ್ಕೆ ಒಳಗಾದ ವರ್ಗಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ಮೀಸಲಾತಿ ವಿಚಾರವಾಗಿ ಉಪ ಸಮಿತಿ ರಚನೆ ಮಾಡಿದ್ದೇವೆ. ಮಾದಿಗ, ಪಂಚಮಸಾಲಿ, ಕುರುಬ ಸಮಾಜ ಹೀಗೆ ಹತ್ತು ಹಲವು ಸಮಾಜ ಮೀಸಲಾತಿಗಾಗಿ ಹೋರಾಟ ಮಾಡ್ತೀವೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಕೊಡಲಾಗುತ್ತಿದೆ. ಯಾವುದೇ ವಿವಾದಕ್ಕೆ ಆಸ್ಪದ ಇಲ್ಲದೇ ಎಸ್ಸಿ,ಎಸ್‌ಟಿ ಮೀಸಲಾತಿ ಹೆಚ್ಚಳಮಾಡಿದ್ದೇವೆ. ಘಟಾನುಘಟಿಗಳು ಅದನ್ನ ಮುಟ್ಟುವುದು ಬೇಡಾ ಅಂತಾ ಸುಮ್ಮನಿದ್ದರೆ. ನಮ್ಮ ಸರ್ಕಾರಕ್ಕೆ ಬದ್ಧತೆಯಿದೆ, ಬದ್ದತೆಯಿಟ್ಟುಕೊಂಡೇ ನಾವು ಮೀಸಲಾತಿ ಕೊಡ್ತಿದ್ದೇವೆ ಎಂದರು.
ಬೆಳಗಾವಿಯಲ್ಲಿ ವಿಧಾನಪರಿಷತ್ ಹಂಗಾಮಿ ಸಭಾಪತಿ ರುಘುನಾಥ್ ಮಲ್ಕಾಪುರೆ ಮಾತನಾಡಿದ್ದು, ನಾನು ಬಿಜೆಪಿಯ ಕಾರ್ಯಕರ್ತ ನಂತರ ಸಭಾಪತಿ. ನಾನು ಸಭಾಪತಿಯಾಗಿರುವಾಗ ಈ ರೀತಿ ಚರ್ಚೆಗೆ ಅವಕಾಶ ಕೊಡುವುದು ಸೂಕ್ತ ಅಲ್ಲಾ. ರಾಜಕಾರಣ ಮುಖಾಂತರ ರಾಷ್ಟ್ರದ ಪುನರ್ನಿರ್ಮಾಣಕ್ಕೋಸ್ಕರ ಬಿಜೆಪಿ ಆಯ್ಕೆ ಮಾಡಿಕೊಂಡಿದ್ದೇನೆ. ರಾಜಕಾರಣವನ್ನ ರಾಷ್ಟ್ರಕಾರಣ ಅಂತಾ ಭಾವಿಸಿ ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ. ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಸಭಾಪತಿ ಸ್ಥಾನ ಕೊಟ್ಟಿದ್ದು ಸೌಭಾಗ್ಯ. ನಾನು ಬಹಳ ಸಂತೋಷದಿಂದ ಇದ್ದೇನೆ. ನಿರಂತರವಾಗಿ ಎಂಟನೇ ಬಾರಿಗೆ ಹೊರಟ್ಟಿ ಅವರು ಸಭಾಪತಿಯಾಗಿ ಪುನರ್ ಆಯ್ಕೆಯಾಗ್ತಿರುವುದು ಸಂತೋಷ. ನಾನು ಇವತ್ತು ಹೋಗಿ ಅವರನ್ನ ಸಭಾಪತಿಯಾಗಿ ಆಯ್ಕೆ ಮಾಡುತ್ತೇನೆ. ಸಭಾಪತಿ ಸ್ಥಾನದಲ್ಲಿರುವಾಗ ನಾನು ಯಾವುದಕ್ಕೂ ಕಮೆಂಟ್ ಮಾಡಲ್ಲ. ನನಗೆ ಏನೇ ಜವಾಬ್ದಾರಿ ಕೊಟ್ರೂ ಚಾಚು ತಪ್ಪದೇ ಮಾಡುತ್ತೇನೆ ಎಂದರು.
ಸಚಿವ ಸೋಮಣ್ಣ ಕೈಗೆ ಪೆಟ್ಟು ಆಗಿದ್ದು ಅವರು ಬ್ಯಾಂಡೇಜ್ ಹಾಕಿಸಿಕೊಂಡೇ ಸುವರ್ಣ ಸೌಧಕ್ಕೆ ಬಂದಿದ್ದಾರೆ. ಸಚಿವ ಸೋಮಣ್ಣ ಅವರು ನಿನ್ನೆ ಸುವರ್ಣಸೌಧದ ಮೆಟ್ಟಿಲಿನಲ್ಲಿ ಕಾಲು ಜಾರಿ ಬಿದ್ದಿದ್ದರು.
ಪರಿಷತ್ನಲ್ಲಿ ಇಂದು ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಆಯ್ಕೆ ಆಗಲಿದ್ದಾರೆ. ಹೀಗಾಗಿ ಹೊರಟ್ಟಿ ಕುಟುಂಬದ ಸದಸ್ಯರು ಆಗಮಿಸಿದ್ದಾರೆ. ಪತ್ನಿ, ಪುತ್ರ, ಸೊಸೆ, ಮೊಮ್ಮಕ್ಕಳ ಜೊತೆ ಪರಿಷತ್ ಲಾಂಜ್ ನಲ್ಲಿ ಬಸವರಾಜ್ ಹೊರಟ್ಟಿ ಕುಳಿತಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಜೆಡಿಎಸ್ ಪಕ್ಷದಿಂದ ಜಾಣನಡೆ. ಭಾವನಾತ್ಮಕ ವಿಚಾರಗಳ ಚರ್ಚೆ ವೇಳೆ ತಟಸ್ಥ ನಿಲುವಿಗೆ JDS ಪ್ಲ್ಯಾನ್. ಚರ್ಚೆ ವೇಳೆ ವಿವಾದಕ್ಕೆ ಎಡೆಮಾಡಿಕೊಡದಂತೆ ಕುಮಾರಸ್ವಾಮಿ ಜೆಡಿಎಸ್ ಶಾಸಕರಿಗೆ ದೂರವಾಣಿ ಕರೆ ಮಾಡಿ ಸಲಹೆ ನೀಡಿದ್ದಾರೆ. ಜೆಡಿಎಸ್ ಗಡಿ ವಿಚಾರ, ನೀರಾವರಿ, ರೈತರ ವಿಚಾರ ಪ್ರಸ್ತಾಪಿಸಲಿದೆ. ಗಡಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಗುಡುಗಲು ಹೆಚ್ಡಿಕೆ ಸೂಚನೆ ನೀಡಿದ್ದಾರೆ. ರಾಜ್ಯದ ಸಮಸ್ಯೆ, ಅಭಿವೃದ್ಧಿ ವಿಷಯ ಪ್ರಸ್ತಾಪಿಸಲು ಜೆಡಿಎಸ್ ನಿರ್ಧಾರ ಮಾಡಿದೆ. ಚುನಾವಣೆ ಸಮೀಪ ಹಿನ್ನೆಲೆ ಸ್ಥಳೀಯ ಸಮಸ್ಯೆ ಬಗ್ಗೆಯೇ ಹೆಚ್ಚು ಗಮನ ಹರಿಸಲು ಜೆಡಿಎಸ್ ಮುಂದಾಗಿದೆ.
ಬೆಳಗಾವಿ ಸುವರ್ಣಸೌಧದ ಬಳಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ವಜಾಗೊಂಡ 2,500 ಸಾರಿಗೆ ನೌಕರರ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಯುತ್ತಿದೆ. ನಿನ್ನೆ ರಾತ್ರಿ ಪ್ರತಿಭಟನೆ ವೇಳೆ ಸಾರಿಗೆ ಸಿಬ್ಬಂದಿ ಜಯಶ್ರೀ ಅಸ್ವಸ್ಥಗೊಂಡಿದ್ದರು. ಸೋಮವಾರದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಜಯಶ್ರೀ ಅವರನ್ನು ಕೂಡಲೇ ಬೆಳಗಾವಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಗಡಿ ವಿವಾದ ಬೆನ್ನಲ್ಲೇ ಮಹಾರಾಷ್ಟ್ರ ಮತ್ತೊಂದು ತಗಾದೆ ಎತ್ತಿದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗಡಿ ಬಗ್ಗೆ ಚರ್ಚೆ ನಡೆದಿದ್ದು ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂನಿಂದ ನೀರು ಕೊಡದಂತೆ ಎನ್‌ಸಿಪಿ ಶಾಸಕ ಜಯಂತ ಪಾಟೀಲ್ ಹೇಳಿದ್ದಾರೆ. ಈ ವೇಳೆ ಬೆಳಗಾವಿ ಎಂಇಎಸ್ ಪರವಾಗಿಯೂ ಕೆಲವರಿಂದ ಚರ್ಚೆ ಆಗಿದೆ. ಗಡಿ ವಿವಾದ ಬೆನ್ನಲ್ಲೇ ಜಲ ವಿವಾದ ಸೃಷ್ಟಿಸಲು ನಾಯಕರು ಯತ್ನಿಸಿದ್ದಾರೆ. ಕರ್ನಾಟಕ ಸಿಎಂ ಬೊಮ್ಮಾಯಿ ಯಾವ ಭಾಷೆಯಲ್ಲಿ ಮಾತಾಡ್ತಾರೋ ಅವರಿಗೆ ಅದೇ ಭಾಷೆಯಲ್ಲೇ ಮಹಾರಾಷ್ಟ್ರ ಉತ್ತರ ಕೊಡಬೇಕಿದೆ. ಕರ್ನಾಟಕ ಸಿಎಂ ಬೊಮ್ಮಾಯಿಗೆ ತುಂಬಾನೇ ಸೊಕ್ಕು ಬಂದಿದೆ. ಕರ್ನಾಟಕಕ್ಕೆ ನಾವು ತಕ್ಕ ಪಾಠ ಕಲಿಸಬೇಕಿದೆ. ಕೊಯ್ನಾ, ಕೊಲ್ಹಾಪುರ ಜಿಲ್ಲೆಯ ಡ್ಯಾಂಗಳ ಎತ್ತರ ಹೆಚ್ಚಿಸಬೇಕು ಕರ್ನಾಟಕಕ್ಕೆ ನೀರು ಬಿಡದಂತೆ ಎಂದು ಶಾಸಕ ಜಯಂತ ಪಾಟೀಲ್ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗುಡುಗಿದ್ದಾರೆ.
ಬೆಳಗಾವಿಯಲ್ಲಿ ಮೂರನೇ ದಿನದ ಚಳಿಗಾಲದ ಅಧಿವೇಶನ ಹಿನ್ನೆಲೆ ಸರ್ಕಾರದ ವಿರುದ್ಧ ಇಂದೂ ಸಹ 13 ಸಂಘಟನೆಗಳಿಂದ ಹತ್ತು ಟೆಂಟ್ ಗಳಲ್ಲಿ ಪ್ರತಿಭಟನೆ ನಡೆಯಲಿದೆ. ಕೊಂಡಸಕೊಪ್ಪ, ಬಸ್ತವಾಡ ಗ್ರಾಮದ ಬಳಿ ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯ ಮಾದಿಗ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಉತ್ತರ ಕರ್ನಾಟಕ ಅಜುಂಮನ್ ಎ ಇಸ್ಲಾಂ ಹುಬ್ಬಳ್ಳಿ ಸಂಘಟನೆಯಿಂದ ಉರ್ದು ವಿವಿ ಸ್ಥಾಪಿಸುವಂತೆ ಪ್ರತಿಭಟನೆ ನಡೆಯಲಿದೆ. ಅಖಿಲ ಕರ್ನಾಟಕ ಗೋಂಧಳಿ ಸಮಾಜದಿಂದ ಒಳ ಮೀಸಲಾತಿ 3ರಷ್ಟು ನೀಡುವಂತೆ ಹೋರಾಟ ನಡೆಯಲಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಗಡಿ ಬಗ್ಗೆ ಚರ್ಚೆ ಜೋರಾಗಲಿದ್ದು ಇತ್ತ ಮಹಾರಾಷ್ಟ್ರದಲ್ಲೂ ಗಡಿ ವಿವಾದದ ಕುರಿತು ಚರ್ಚೆ ಜೋರಾಗಿದೆ. ನಾಗ್ಪುರದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಹಾಗೂ ಗಡಿ ವಿಚಾರ ಚರ್ಚೆಯಾಗಿದೆ. ಸದನದಲ್ಲೇ ಬೆಳಗಾವಿಯನ್ನ ಕೇಂದ್ರಾಡಳಿತ ಮಾಡಬೇಕೆಂದು ಎನ್‌ಸಿಪಿ ಶಾಸಕ ಹಸನ್ ಮುಷ್ರೀಪ್ ಹೇಳಿದ್ರು. ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಅನ್ಯಾಯ ಆಗ್ತಿದೆ. ಮಿಲಿಟರಿ ಆಡಳಿತ ಬಂದ್ರೆ ಮರಾಠಿ ಭಾಷಿಕರಿಗೆ ನ್ಯಾಯ ಸಿಗುತ್ತೆ ಎಂದು ಉದ್ಧಟತನ ಮೆರೆದಿದ್ದಾರೆ. ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಿಸುವುದಕ್ಕೆ ಎನ್‌ಸಿಪಿ ಶಾಸಕ ಹಸನ್ ಮುಷ್ರೀಫ್ ವಿರೋಧಿಸಿದ್ದಾರೆ. ಸದನದಲ್ಲಿ ಮಹಾಮೇಳಾವ್‌ಗೆ ಅವಕಾಶ ನೀಡದಿರುವುದು, ಗಡಿಯಲ್ಲಿ ಮಹಾರಾಷ್ಟ್ರದ ಶಿವಸೇನೆ, ಎನ್‌ಸಿಪಿ ಶಾಸಕರನ್ನ ತಡೆದಿರುವ ಕುರಿತ ವಿಷಯವನ್ನೂ ಶಾಸಕ ಹಸನ್ ಪ್ರಸ್ತಾಪಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರ ಕುರಿತು ಚರ್ಚೆ ಮುಂದುವರಿಯಲಿದೆ. ನಿಯಮ 69 ಅಡಿಯಲ್ಲಿ ಚರ್ಚೆ ಮುಂದುವರೆಯಲಿದ್ದು ಚರ್ಚೆಗೆ ಇಂದು ರಾಜ್ಯ ಸರ್ಕಾರ ಉತ್ತರ ನೀಡಲಿದೆ. ರಾಜ್ಯದ ನೆಲ, ಜಲ, ಗಡಿಭಾಗದ ಕನ್ನಡಿಗರ ರಕ್ಷಣೆ ಕುರಿತಂತೆ ಇಂದು ನಿರ್ಣಯ ತೆಗೆದುಕೊಳ್ಳಲಿರುವ ಸದನ.
Published On - 9:42 am, Wed, 21 December 22