ಬೆಳಗಾವಿ, ಫೆ.15: ನಾಳೆ ಹಣಕಾಸು ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕರ್ನಾಟಕ ಬಜೆಟ್ 2024 ಮಂಡಿಸಲಿದ್ದಾರೆ. ಈ ಬಗ್ಗೆ ಚಿಕ್ಕೋಡಿಯಲ್ಲಿ ಮಾತನಾಡಿದ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಬಸವಣ್ಣನವರ ಲಿಂಗೈಕ್ಯೆ ಆಗಿದ್ದು ಕೂಡಲಸಂಗಮದಲ್ಲಿ. ಹೀಗಾಗಿ ಕೂಡಲಸಂಗಮದಲ್ಲಿ ವಚನಗಳ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕೂಡಲಸಂಗಮದಲ್ಲಿ ವಚನಗಳ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕು. ನಾಳಿನ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಘೋಷಣೆ ಆಗಬೇಕು. ಬಸವಣ್ಣನವರ ವಚನಗಳನ್ನ ಅಧ್ಯಯನ ಪ್ರಾರಂಭ ಮಾಡಿದ್ದು ಕೂಡಲಸಂಗಮದಲ್ಲಿ. ಕೂಡಲಸಂಗಮದಲ್ಲಿಯೇ ಧರ್ಮ ಸ್ಥಾಪನೆಯಾಗಿದೆ. ಬಸವಣ್ಣನವರ ಲಿಂಗೈಕ್ಯೆ ಆಗಿದ್ದು ಕೂಡಲಸಂಗಮದಲ್ಲಿ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಮೇಲೆ ಕಣ್ಣು: ಬಜೆಟ್ನಲ್ಲಿ ಸಿಎಂ ಮಹತ್ವದ ಘೋಷಣೆ ಸಾಧ್ಯತೆ
ಕೂಡಲಸಂಗಮದ ಶಾಸಕ ಕಾಶಪ್ಪನವರ ಅವರಿಗೂ ತಿಳಿಸಿದ್ದೇನೆ. ಕೂಡಲಸಂಗಮ ಅಭಿವೃದ್ಧಿ ಇನ್ನೂ ಆಗಿಲ್ಲ. ಬೆಳಗಾವಿಯ ಬೆಳವಡಿ ಮಲ್ಲಮ್ಮನ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಬೇಕು. ಫೆಬ್ರವರಿ 27, 28 ರಂದು ಬೆಳವಾಡಿಯಲ್ಲಿ ಮಲ್ಲಮ್ಮನ ಉತ್ಸವ ಇದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಧಿಕಾರ ಘೋಷಣೆ ಮಾಡಿ ಉತ್ಸವದಲ್ಲಿಯೇ ಲೋಕಾರ್ಪಣೆ ಮಾಡಬೇಕು. ಬೆಳಗಾವಿಯ ಎಲ್ಲ ಸಚಿವರು, ಶಾಸಕರನ್ನು ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಕಳನ್ನು ಈಡೇರಿಸಿ ತತ್ವ ಪ್ರಚಾರಕ್ಕೆ ಸ್ಪಂದಿಸಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ