ಗಡಿ ವಿವಾದ: ಮರಾಠಿ ಭಾಷಿಕರಿಗೆ ಪರಿಹಾರ ನಿಧಿ ಮಂಜೂರು, ಬೆಳಗಾವಿಯಲ್ಲೇ ಆರೋಗ್ಯ ವಿಮೆ ತೆರೆದ ಮಹಾರಾಷ್ಟ್ರ

| Updated By: ವಿವೇಕ ಬಿರಾದಾರ

Updated on: Jan 09, 2024 | 10:19 AM

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರ ಕರ್ನಾಟಕದ ಗಡಿಯೊಳಗಿನ ಮರಾಠಿ ಭಾಷಿಕರಿಗೆ ಆರೋಗ್ಯ ಪರಿಹಾರ ನಿಧಿ ಮಂಜೂರು ಮಾಡಿದೆ. ಪರಿಹಾರ ನಿಧಿ ಜೊತೆಗೆ ಕರ್ನಾಟಕದ 865 ಹಳ್ಳಿ-ಪಟ್ಟಣದ ಜನರಿಗಾಗಿ ಮಹಾತ್ಮ ಫುಲೆ ಆರೋಗ್ಯ ವಿಮಾ ಯೋಜನೆ ಜಾರಿ ಮಾಡಿದೆ. ಇದೀಗ ಬೆಳಗಾವಿಯಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿದೆ.

ಗಡಿ ವಿವಾದ: ಮರಾಠಿ ಭಾಷಿಕರಿಗೆ ಪರಿಹಾರ ನಿಧಿ ಮಂಜೂರು, ಬೆಳಗಾವಿಯಲ್ಲೇ ಆರೋಗ್ಯ ವಿಮೆ ತೆರೆದ ಮಹಾರಾಷ್ಟ್ರ
ಸಿಎಂ ಏಕನಾಥ್​ ಶಿಂಧೆ
Follow us on

ಬೆಳಗಾವಿ, ಜನವರಿ 09: ಇತ್ತೀಚಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ (Dhairyashil mane) ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಕರ್ನಾಟಕದ ಗಡಿಯಲ್ಲಿ ಇರುವ ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ (Maharashtra) ಸರ್ಕಾರ ಆರೋಗ್ಯ ವಿಮೆ (Health Insurance) ಜಾರಿ ಮಾಡಲಿದೆ ಎಂದಿದ್ದರು. ಈ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸರ್ಕಾರ ಕರ್ನಾಟಕದ ಗಡಿಯೊಳಗಿನ ಮರಾಠಿ ಭಾಷಿಕರಿಗೆ ಆರೋಗ್ಯ ಪರಿಹಾರ ನಿಧಿ ಮಂಜೂರು ಮಾಡಿದೆ.

ಪರಿಹಾರ ನಿಧಿ ಜೊತೆಗೆ ಕರ್ನಾಟಕದ 865 ಹಳ್ಳಿ-ಪಟ್ಟಣದ ಜನರಿಗಾಗಿ ಮಹಾತ್ಮ ಫುಲೆ ಆರೋಗ್ಯ ವಿಮಾ ಯೋಜನೆ ಜಾರಿ ಮಾಡಿದೆ. ಇದೀಗ ಬೆಳಗಾವಿಯಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಐದು ಕಡೆ ಅರ್ಜಿ ಸ್ವೀಕಾರ ಕೇಂದ್ರ ಆರಂಭವಾಗಿವೆ. ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ಶಿಫಾರಸ್ಸು ಪತ್ರದೊಂದಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಬೆಳಗಾವಿ, ಕಾರವಾರ, ಬೀದರ, ಕಲಬರ್ಗಿ ಜಿಲ್ಲೆ ಸೇರಿ ಗಡಿ ಭಾಗದ 865 ಪ್ರದೇಶದಲ್ಲಿ ಯೋಜನೆ ಜಾರಿಯಾಗಲಿದೆ. ಈ ಯೋಜನೆ ಬೆಳಗಾವಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಜಾರಿ ಬಂದಿದೆ.

ಅಲ್ಲದೇನಾಡದ್ರೋಹಿ ಎಂಇಎಸ್ ಪುಂಡರಿಗೆ ಮಹಾರಾಷ್ಟ್ರ ಸರ್ಕಾರ ಅಧಿಕಾರದ ಬಲ ನೀಡಿದೆ. ಮಹಾರಾಷ್ಟ್ರ ಸರ್ಕಾರ ಸತ್ತು ಹೋಗಿದ್ದ ಎಂಇಎಸ್ ಬಲ ಹೆಚ್ಚಿಸಿದೆ. ಏಕನಾಥ್​​ ಶಿಂಧೆ ಮುಖ್ಯಮಂತ್ರಿಗಳ ಪರಿಹಾರ ನಿಧಿನಿಂದ ಬೆಳಗಾವಿ ಎಂಇಎಸ್ ಕಾರ್ಯಕರ್ತರಿಗೆ 1ಲಕ್ಷ ಹಣ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು, ಕರ್ನಾಟಕದ ಮರಾಠಿ ಭಾಷಿಕರಿಗೆ ತನ್ನ ಆರೋಗ್ಯ ವಿಮೆ ನೀಡಲು ಮುಂದಾದ ಶಿಂಧೆ ಸರ್ಕಾರ: ಧೈರ್ಯಶೀಲ ಮಾನೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ರಂಜನಾ ದೇಸಾಯಿ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹೆಸರಿನ ಲೇಟರ್ ಹೆಡ್​ನಲ್ಲಿ‌‌ ಶಿಫಾರಸ್ಸು ಮಾಡಲಾಗಿತ್ತು. ಶಿಫಾರಸ್ಸು ಪತ್ರದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರಿಗೆ ಮತ್ತು ಜೈ ಮಹಾರಾಷ್ಟ್ರ ಅಂತಾ ಉಲ್ಲೇಖಿಸಲಾಗಿದೆ.

ರಂಜನಾ ದೇಸಾಯಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷ್ಠಾವಂತ ಕಾರ್ಯಕರ್ತೆ ಆಗಿದ್ದಾರೆ. ರಂಜನಾ ದೇಸಾಯಿ ಅವರ ಹೃದಯ ಚಿಕಿತ್ಸೆಗೆ ಹಣಕಾಸಿನ ಅಗತ್ಯವಿದೆ. ಅಗತ್ಯ ಹಣಕಾಸಿನ ನೆರವು‌ ನೀಡುವಂತೆ ಎಂಇಎಸ್ ಪುಂಡರು ಶಿಫಾರಸ್ಸು ಪತ್ರ ನೀಡಿದ್ದರು. ಅದರಂತೆ ಇದೀಗ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ ಬೆಳಗಾವಿಯ ಅರಿಹಂತ ಆಸ್ಪತ್ರೆಗೆ ಮಹಾರಾಷ್ಟ್ರ ಸಿಎಂ ನಿಧಿಯಿಂದ 1ಲಕ್ಷ ಹಣ ಸಂದಾಯ ಮಾಡಲಾಗಿದೆ.

ಈ ಮೂಲಕ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ನೀಡಲು ಮಹತ್ವದ ಸಾಕ್ಷಿಗಳನ್ನು ಸದ್ದಿಲ್ಲದೆ ಸೃಷ್ಟಿಸುತ್ತಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ