ಮಹಡಿ ಮೇಲೆ ನಿಂತ ನೀರು, ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

|

Updated on: Sep 25, 2019 | 1:37 PM

ಬೆಳಗಾವಿ: ಕೃಷ್ಣಾ ನದಿ ನೀರಿನ ಪ್ರವಾಹದಿಂದ ಬೆಳಗಾವಿ ಜನರ ಜೀವನ ಥಂಡಾ ಹೊಡೆದಿದೆ. ಆದರೆ ಇದರ ಮಧ್ಯೆಯೇ ಮಳೆಯ ನೀರಿನಿಂದ ಶಾಕ್ ಹೊಡೆದು ವ್ಯಕ್ತಿ ತೀರಿಕೊಂಡ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ನಾರಾಯಣಪೇಟೆಯಲ್ಲಿ ಮಂಗಳವಾರ ಈ ಘಟನೆ ಸಂಭವಿಸಿದ್ದು, 48 ವರ್ಷದ ಕೇಶಪ್ಪ ಜವಳಿ ಎಂಬ ವ್ಯಕ್ತಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಮೇಲೆ ನೀರು ನಿಂತಿತ್ತು. ಅದನ್ನು ತೆಗೆಯಲು ಹೋಗಿದ್ದ ಕೇಶವ ಜವಳಿ ಅಲ್ಲೇ ತಗಡಿನ ಮೇಲೆ ತುಂಡಾಗಿ […]

ಮಹಡಿ ಮೇಲೆ ನಿಂತ ನೀರು, ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು
Follow us on

ಬೆಳಗಾವಿ: ಕೃಷ್ಣಾ ನದಿ ನೀರಿನ ಪ್ರವಾಹದಿಂದ ಬೆಳಗಾವಿ ಜನರ ಜೀವನ ಥಂಡಾ ಹೊಡೆದಿದೆ. ಆದರೆ ಇದರ ಮಧ್ಯೆಯೇ ಮಳೆಯ ನೀರಿನಿಂದ ಶಾಕ್ ಹೊಡೆದು ವ್ಯಕ್ತಿ ತೀರಿಕೊಂಡ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ನಾರಾಯಣಪೇಟೆಯಲ್ಲಿ ಮಂಗಳವಾರ ಈ ಘಟನೆ ಸಂಭವಿಸಿದ್ದು, 48 ವರ್ಷದ ಕೇಶಪ್ಪ ಜವಳಿ ಎಂಬ ವ್ಯಕ್ತಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ.

ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಮೇಲೆ ನೀರು ನಿಂತಿತ್ತು. ಅದನ್ನು ತೆಗೆಯಲು ಹೋಗಿದ್ದ ಕೇಶವ ಜವಳಿ ಅಲ್ಲೇ ತಗಡಿನ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ, ನೀರು ತೆಗೆಯಲು ಹೋಗಿದ್ದಾರೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದು ಕೇಶವ ಜವಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ರಾಮದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Published On - 1:36 pm, Wed, 25 September 19