ಹಗಲು ಗ್ಯಾರೇಜ್ ಕೆಲಸ, ರಾತ್ರಿ ವೇಳೆ ಲಾರಿ ಕದಿಯುತ್ತಿದ್ದ ಖತರ್ನಾಕ್ ಕಳ್ಳ ಲಾಕ್

|

Updated on: Jan 26, 2020 | 12:53 PM

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ನಿವಾಸಿ ಕಲ್ಲಪ್ಪ ಕದಂ ಹೊಟ್ಟೆ ಪಾಡಿಗೆ ಜಮೀನು ಮಧ್ಯ ಗ್ಯಾರೇಜ್ ಓಪನ್ ಮಾಡಿರೋ ಈತ ಅಲ್ಲೇ ಕಷ್ಟಪಟ್ಟು ದುಡಿದ್ರೆ ಇವತ್ತು ಪೊಲೀಸರ ಮುಂದೆ ಹೀಗೆ ಪೋಸ್​ ಕೊಡ್ತಿರ್ಲಿಲ್ಲ ಅನ್ಸುತ್ತೆ.. ಆದ್ರೆ, ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಸರಿಯಾಗೆ ತಗ್ಲಾಕ್ಕೊಂಡಿದ್ದಾನೆ. ಲಾರಿಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳ ಲಾಕ್: ಯೆಸ್, ಬೆಳಗ್ಗೆಯಿಂದ ಸಂಜೆವರೆಗೂ ಲಾರಿಗಳನ್ನ ರಿಪೇರಿ ಮಾಡ್ತಿದ್ದ ಈ ಆಸಾಮಿ, ರಾತ್ರಿಯಾದ್ರೆ ಸಾಕು ರಸ್ತೆ ಪಕ್ಕದಲ್ಲಿ ನಿಲ್ಸೋ ಲಾರಿಗಳನ್ನ ಟಾರ್ಗೆಟ್ […]

ಹಗಲು ಗ್ಯಾರೇಜ್ ಕೆಲಸ, ರಾತ್ರಿ ವೇಳೆ ಲಾರಿ ಕದಿಯುತ್ತಿದ್ದ ಖತರ್ನಾಕ್ ಕಳ್ಳ ಲಾಕ್
Follow us on

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ನಿವಾಸಿ ಕಲ್ಲಪ್ಪ ಕದಂ ಹೊಟ್ಟೆ ಪಾಡಿಗೆ ಜಮೀನು ಮಧ್ಯ ಗ್ಯಾರೇಜ್ ಓಪನ್ ಮಾಡಿರೋ ಈತ ಅಲ್ಲೇ ಕಷ್ಟಪಟ್ಟು ದುಡಿದ್ರೆ ಇವತ್ತು ಪೊಲೀಸರ ಮುಂದೆ ಹೀಗೆ ಪೋಸ್​ ಕೊಡ್ತಿರ್ಲಿಲ್ಲ ಅನ್ಸುತ್ತೆ.. ಆದ್ರೆ, ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಸರಿಯಾಗೆ ತಗ್ಲಾಕ್ಕೊಂಡಿದ್ದಾನೆ.

ಲಾರಿಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳ ಲಾಕ್:
ಯೆಸ್, ಬೆಳಗ್ಗೆಯಿಂದ ಸಂಜೆವರೆಗೂ ಲಾರಿಗಳನ್ನ ರಿಪೇರಿ ಮಾಡ್ತಿದ್ದ ಈ ಆಸಾಮಿ, ರಾತ್ರಿಯಾದ್ರೆ ಸಾಕು ರಸ್ತೆ ಪಕ್ಕದಲ್ಲಿ ನಿಲ್ಸೋ ಲಾರಿಗಳನ್ನ ಟಾರ್ಗೆಟ್ ಮಾಡ್ತಿದ್ದ. ಲಾರಿಯಲ್ಲಿ ಯಾರೂ ಇಲ್ಲ ಅಂದ್ರೆ ಮುಗೀತು. ಡಮ್ಮಿ ಕೀಗಳನ್ನ ಬಳಸಿ ಲಾರಿಗಳನ್ನ ಎಗರಿಸುತ್ತಿದ್ದ. ಹೀಗೆ ಕದ್ದ ಲಾರಿಗಳನ್ನ ಅಂಕಲಿ ಗ್ರಾಮದಲ್ಲಿರೋ ತನ್ನ ಗ್ಯಾರೇಜ್​ಗೆ ತಂದು ನಂಬರ್ ಪ್ಲೇಟ್ ಹಾಗೂ ಚಾಸ್ಸಿಯನ್ನ ಚೇಂಜ್ ಮಾಡ್ತಿದ್ದ. ಬಳಿಕ ಲಾರಿಯ ಬಣ್ಣ ಕೂಡ ಬದಲಿಸಿ ಪಕ್ಕದ ಮಹಾರಾಷ್ಟ್ರದಲ್ಲಿ ಮಾರಾಟ ಮಾಡ್ತಿದ್ದ. ಹೀಗೆ ಬರೋಬ್ಬರಿ 8 ಲಾರಿ, 2 ಟಿಪ್ಪರ್ ಸೇರಿದಂತೆ ಒಟ್ಟು 13 ವಾಹನಗಳನ್ನ ಎಗರಿಸಿದ್ದಾನೆ ಈ ಖತರ್ನಾಕ್ ಕಳ್ಳ.

ಎರಡು ವರ್ಷಗಳಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದ ಈತ ಎಲ್ಲೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಕಳೆದ ತಿಂಗಳು ಲಾರಿಯೊಂದು ಕಳ್ಳತನವಾಗಿದ್ದು ಚಿಂಚನಿ ಗ್ರಾಮದ ಚೆಕ್​ಪೋಸ್ಟ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ಬೆನ್ನು ಹತ್ತಿದ ನಿಪ್ಪಾಣಿ ಪೊಲೀಸರು ಅಂಕಲಿ ಗ್ರಾಮದಿಂದ ಮುಂದೆ ಲಾರಿ ಹೋಗಿಲ್ಲ ಅನ್ನೋದನ್ನ ಖಚಿತಪಡಿಸಿಕೊಂಡ್ರು. ಬಳಿಕ ವಿಚಾರಣೆ ನಡೆಸಿದಾಗ ಇದೆಲ್ಲದರ ಹಿಂದೆ ಕಳ್ಳಪ್ಪ ಕದಂ ಕೈವಾಡವಿರೋದು ಬೆಳಕಿಗೆ ಬಂದಿದೆ. ಸದ್ಯ ಕಳ್ಳನನ್ನ ಲಾಕ್ ಮಾಡಿದ್ದಕ್ಕೆ ಚಿಕ್ಕೋಡಿ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಖತರ್ನಾಕ್ ಲಾರಿ ಕಳ್ಳ ಕಲ್ಲಪ್ಪ ಕದಂನನ್ನ ಕಂಬಿ ಹಿಂದೆ ತಳ್ಳಿರೋ ಪೊಲೀಸರು, ಕದ್ದ ವಾಹನಗಳ ಮಾರಾಟದಲ್ಲಿ ಈತನಿಗೆ ಸಾಥ್ ನೀಡಿದ್ದ ಮಹಾರಾಷ್ಟ್ರ ಮೂಲದ ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.